For Quick Alerts
ALLOW NOTIFICATIONS  
For Daily Alerts
 

Rajat Patidar: ದೇಶೀಯ ಟೂರ್ನಿಯಲ್ಲಿ ಅಬ್ಬರಿಸಿದರು RCB ಪ್ಲೇಯರ್‌ಗೆ ಇಲ್ಲ ತಂಡದಲ್ಲಿ ಸ್ಥಾನ

ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿಗೆ ಭಾರತ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ. ಈ ತಂಡದಲ್ಲಿ ನಿರೀಕ್ಷಿತ ಹೆಸರುಗಳು ಮಿಸ್ ಆಗಿರುವುದು ನಿಜಕ್ಕೂ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದರೂ, ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿಗೆ ಆಯ್ಕೆ ಮಾಡದೇ ಇರುವುದುಕ್ಕೆ ಕಾರಣ ಏನು ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಅಲ್ಲದೆ ಇನ್ನು ಹೇಗೆ ಆಡಿದರೆ ತಂಡದಲ್ಲಿ ಸ್ಥಾನ ಪಡೆಯುವಂತೆ ಆಗುತ್ತದೆ ಎಂದು ಫ್ಯಾನ್ಸ್‌ ಪ್ರಶ್ನೆ ಮಾಡುವಂತೆ ಆಗಿದೆ. ಇದಕ್ಕೆಲ್ಲಾ ಕಾರಣ ಟಿ20 ತಂಡದಲ್ಲಿ ಆ ಒಬ್ಬ ಪ್ಲೇಯರ್ ಇಲ್ಲದೇ ಇರುವುದು.

ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ತಂಡವನ್ನು ಪ್ರಕಟಿಸಿದಾಗ ಕೆಲವು ಹೆಸರುಗಳು ಮಿಸ್ ಆಗಿರುವುದು ಸ್ಪಷ್ಟವಾಗಿ ಕಾಣಿಸಿಕೊಂಡಿತು. ಈ ವೇಳೆ ರಿಷಭ್‌ ಪಂತ್, ಯಶಸ್ವಿ ಜೈಸ್ವಾಲ್‌, ರುತುರಾಜ್‌ ಗಾಯಕ್ವಾಡ್‌ ಹೆಸರಗಳು ತಂಡದಲ್ಲಿ ಇಲ್ಲದೇ ಇರುವುದು ನಿಜಕ್ಕೂ ಅಭಿಮಾನಿಗಳಿಗೆ ಬೇಸರ ತರಿಸಿದೆ. ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಕೆಲವು ಆಟಗಾರರಿಗೆ ಆಡುವ ಅವಕಾಶ ನೀಡಿ, ಮುಂದಿನ ಸರಣಿಗೆ ಅವರನ್ನು ತಂಡದಿಂದ ಕೈ ಬಿಟ್ಟಿರುವುದು ಪ್ರಶ್ನೆ ಹುಟ್ಟು ಹಾಕಿದೆ. ಇನ್ನು ತಂಡದಲ್ಲಿ ಆರ್‍‌ಸಿಬಿ ಪ್ಲೇಯರ್‍‌ ರಜತ್ ಪಟೀದಾರ್ ಅವರನ್ನು ಕಡೆಗಣನೆ ಮಾಡಲಾಗಿದೆ ಎಂಬ ಕೂಗು ವ್ಯಾಪಕವಾಗಿ ಕೇಳಿ ಬಂದಿದೆ.

Fans Disappointed as Rajat Patidar Misses Out on India s T20 Squad Against England

ತಂಡದಿಂದ ಗೇಟ್ ಪಾಸ್

ರಜತ್ ಪಾಟಿದಾರ್ ಪ್ರಸಕ್ತ ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಆಟಗಾರ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು, ತಂಡಕ್ಕೆ ನೆರವಾದ ಪ್ಲೇಯರ್. ಇವರು ಮಧ್ಯ ಪ್ರದೇಶ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್‌ಗೆ ಅರ್ಹತೆ ಪಡದಿತ್ತು. ಇದರ ಹಿಂದೆ ಇವರ ಕೈ ವಾಡ ದೊಡ್ಡದಿದೆ. ಟಿ20 ಫಾರ್ಮೆಟ್‌ನಲ್ಲಿ ಇವರು ಆಡಿದ ಧಾಟಿಯನ್ನು ಕಂಡು ಇವರಿಗೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವಕಾಶ ಫಿಕ್ಸ್ ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ ಇವರನ್ನು ಬಿಸಿಸಿಐ ಆಯ್ಕೆ ಸಮಿತಿ ಕಡೆಗಣನೆ ಮಾಡಿದೆ.

ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ

ಮಧ್ಯ ಪ್ರದೇಶ ತಂಡದ ನಾಯಕ ರಜತ್ ಪಾಟೀದಾರ್ ತಂಡವನ್ನು ಸೊಗಸಾಗಿ ಮುನ್ನಡೆಸಿದರು. ತಂಡದ ಉಳಿದ ಆಟಗಾರರಿಗೆ ಬ್ಯಾಟಿಂಗ್ ಹೇಗೆ ಮಾಡಬೇಕು ಎಂಬುದನ್ನು ತೊರಿಸಿಕೊಟ್ಟ ಪ್ಲೇಯರ್. ಇವರು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಆಡಿದ ಧಾಟಿ ಎಲ್ಲರ ಚಿತ್ತ ಕದ್ದಿತ್ತು. 31 ವರ್ಷದ ರಜತ್‌ ಆಡಿದ 10 ಪಂದ್ಯಗಳಲ್ಲಿ 428 ರನ್‌ ಸಿಡಿಸಿ ಅತಿ ಹೆಚ್ಚು ರನ್‌ ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಈ ವೇಳೆ ಇವರು 5 ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾಗಿದ್ದಾರೆ. ದೇಶೀಯ ಟಿ20 ಕ್ರಿಕೆಟ್ ಲೀಗ್‌ನಲ್ಲಿ ರಜತ್‌ ಸ್ಟ್ರೈಕ್‌ ರೇಟ್‌ ಸಹ 186 ಆಗಿದೆ. ಇಷ್ಟೆಲ್ಲಾ ಪ್ರದರ್ಶನ ನೀಡಿದರೂ ಏಕೆ ತಂಡಕ್ಕೆ ಆಯ್ಕೆ ಮಾಡಿಲ್ಲ ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

Fans Disappointed as Rajat Patidar Misses Out on India s T20 Squad Against England

ಆರ್‍‌ಸಿಬಿ ಆಟಗಾರನನ್ನು ಬಿಸಿಸಿಐ ಆಯ್ಕೆ ಸಮಿತಿ ಕಡೆಗಣನೆ ಮಾಡಿದೆ ಎಂಬ ಕೂಗು ಕೇಳಿ ಬಂದಿದೆ. ದೇಶೀಯ ಟೂರ್ನಿಯಲ್ಲಿ ಇಷ್ಟು ಸೊಗಸಾಗಿ ಪ್ರದರ್ಶನ ನೀಡಿದರೂ, ತಂಡದಲ್ಲಿ ಸ್ಥಾನ ನೀಡದೇ ಇರುವುದು ಅಭಿಮಾನಿಗಳನ್ನು ಕೆರಳಿಸಿದೆ.

Story first published: Sunday, January 12, 2025, 0:41 [IST]
Other articles published on Jan 12, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+