Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮುಂಬೈ ಏರ್‌ಪೋರ್ಟ್‌ನಲ್ಲಿ ಹಾರ್ದಿಕ್‌ ಪಾಂಡ್ಯಗೆ ಮುಜುಗರ: 'ಮುಂಬೈ ಕಾ ರಾಜಾ ರೋಹಿತ್ ಶರ್ಮಾ' ಎಂದು ಕೂಗಿದ ಫ್ಯಾನ್ಸ್‌

ಗುಜರಾತ್ ಟೈಟನ್ಸ್‌ ತಂಡದಿಂದ ಮುಂಬೈ ಮರಳಿರುವ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ ಅವರಿಂದ ನಾಯಕತ್ವ ಕಸಿದುಕೊಂಡಿದ್ದಾರೆ. ಇದರಿಂದ ರೋಹಿತ್ ಶರ್ಮಾ ಫ್ಯಾನ್ಸ್‌ಗೆ ಬೇಸರವಾಗಿದೆ. ಬರೀ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಅಷ್ಟೇ ಅಲ್ಲ, ಅಭಿಮಾನಿಗಳಲ್ಲೂ ಅಸಮಾಧಾನ ಎದ್ದಿದೆ.

ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ನಾಯಕರನ್ನಾಗಿ ಮಾಡಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಗು ತಮ್ಮ ಬೇಸರ ಹೊರ ಹಾಕುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರು ಕೂಡ ಈ ನಿರ್ಧಾರದ ಬಗ್ಗೆ ತಮ್ಮ ಅಸಮಾಧಾನಗೊಂಡಿದ್ದು, ಮೌನಕ್ಕೆ ಶರಣಾಗಿದ್ದಾರೆ.

Fans Embarrass Hardik Pandya At Mumbai Airport, Cheering For Rohit Sharma

ಈ ಮಧ್ಯೆ ಹಾರ್ದಿಕ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅದರಲ್ಲಿ ಅವರು ಕಾರಿನಿಂದ ಹೊರಬರುತ್ತಿರುವುದನ್ನು ಕಾಣಬಹುದು. ಕಾರ್‌ನ ಪಕ್ಕದಲ್ಲಿ ನಿಂತಿದ್ದ ಪ್ರೇಕ್ಷಕರು 'ಮುಂಬೈ ಕಾ ರಾಜ ಕೋನ್?' 'ರೋಹಿತ್ ಶರ್ಮಾ...' ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರ ಮುಂದೆ ಜನರು ನಿಜವಾಗಿಯೂ 'ಮುಂಬೈ ಕಾ ರಾಜಾ ರೋಹಿತ್ ಶರ್ಮಾ' ಎಂದು ಘೋಷಣೆಗಳನ್ನು ಕೂಗಿದ್ದಾರೆಯೇ? ಎಂಬ ಪ್ರಶ್ನೆಗಳು ಏಳುತ್ತವೆ.

ಯಾವ ವಿಡಿಯೋ?

ಈ ವಿಡಿಯೋ ಮೂರು ವರ್ಷಗಳ ಹಿಂದಿನದ್ದು. 'ಮಿಡ್-ಡೇ' ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರ ಈ ಫೋಟೋ ಮುಂಬೈ ವಿಮಾನ ನಿಲ್ದಾಣದಲ್ಲಿದೆ. ನ್ಯೂಜಿಲೆಂಡ್ ಪ್ರವಾಸದಿಂದ ಕೈಬಿಡಲ್ಪಟ್ಟ ನಂತರ ಅವರು ಭಾರತಕ್ಕೆ ಹಿಂತಿರುಗಿ ದಾಗಿನದ್ದು ಎಂದು ತಿಳಿಸಿದೆ.

Fans Embarrass Hardik Pandya At Mumbai Airport, Cheering For Rohit Sharma

ಸತ್ಯಾ ಸತ್ಯತೆ ಏನು?

ಮೂರು ವರ್ಷಗಳ ಹಿಂದೆ ಯುಟೂಬ್‌ನಲ್ಲಿ ಅಪ್‌ಲೋಡ್ ಮಾಡಲಾದ ವೈರಲ್ ವೀಡಿಯೊವನ್ನು ಹೋಲುವ ಅನೇಕ ವೀಡಿಯೊಗಳನ್ನು ನೋಡಬಹುದು. ಈ ವಿಡಿಯೋದಲ್ಲಿ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿ ಬೀಳುತ್ತಿರುವುದನ್ನು ಕಾಣಬಹುದು.

ಹಾರ್ದಿಕ್ ಪಾಂಡ್ಯ ಈ ವಿಡಿಯೋ ಮೂರು ವರ್ಷಗಳ ಹಿಂದೆಯೇ ಸಾಮಾಜಿಕ ತಾಣದಲ್ಲಿ ಲಭ್ಯವಿದೆ. ಇದೇ ವಿಡಿಯೋವನ್ನು ಬಳಸಿಕೊಂಡು ಎಡಿಟಿಂಗ್ ಮಾಡಲಾಗಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಹಾರ್ದಿಕ್ ಅವರನ್ನು ನೇಮಕ ಮಾಡುವ ಘೋಷಣೆಯನ್ನು ಕೆಲವೇ ವಾರಗಳ ಹಿಂದೆ ಮಾಡಲಾಗಿತ್ತು. ಹೀಗಿರುವಾಗ ವೈರಲ್ ಆದ ವಿಡಿಯೋದಲ್ಲಿರುವ ಧ್ವನಿಯನ್ನು ಪ್ರತ್ಯೇಕವಾಗಿ ಎಡಿಟ್ ಮಾಡಿ ಸೇರಿಸಿರುವುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ, ಮುಂಬೈ ವಿಮಾನ ನಿಲ್ದಾಣದಿಂದ ಹಾರ್ದಿಕ್ ಪಾಂಡ್ಯ ಅವರ ಮೂರು ವರ್ಷಗಳ ಹಳೆಯ ವೀಡಿಯೊವನ್ನು ಎಡಿಟ್ ಮಾಡಿದ ಸಮಾಜಿಕ ತಾಣದಲ್ಲಿ ಹಂಚಲಾಗಿದೆ. ಅಸಲಿ ವಿಡಿಯೋದಲ್ಲಿ ಹಾರ್ದಿಕ್ ಎದುರು ಯಾವುದೇ ರೀತಿಯ ಚೀರಾಟ ಇರಲಿಲ್ಲ.

ಮುಂಬೈಗೆ ಹಾರ್ದಿಕ್ ನಾಯಕ

ಗುಜರಾತ್‌ ಟೈಟನ್ಸ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ಟ್ರೇಡ್‌ ಮಾಡಿತ್ತು. ಅಲ್ಲದೆ ಮುಂಬೈ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ನೀಡಿತ್ತು. ಇದರಿಂದ ಐದು ಬಾರಿ ತಂಡಕ್ಕೆ ಚಾಂಪಿಯನ್ ಪಟ್ಟ ತೊಡಿಸಿದ್ದ ರೋಹಿತ್ ಶರ್ಮಾ ಹಾಗೂ ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದ ಆಟಗಾರರಿಗೆ ಬೇಸರವಾಗಿತ್ತು.

ಸೂರ್ಯಕುಮಾರ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ಸಹ ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದರು. ಹಾರ್ದಿಕ್ ಆಗಮದಿಂದ ಅವರು ನಾಯಕರಾಗುವ ಕನಸು ದೂರ ಸರಿದಿದೆ.

Story first published: Tuesday, December 26, 2023, 10:20 [IST]
Other articles published on Dec 26, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+