Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭ್ಯಾಸದಲ್ಲಿ ಬ್ಯಾಕ್‌ ಟು ಬ್ಯಾಕ್‌ ಸಿಕ್ಸ್‌ ಬಾರಿಸಿದ ಎಂಎಸ್ ಧೋನಿ: ವೀಡಿಯೋ

Fans flock Chepauk as MS Dhoni-led Chennai Super Kings begin practice

ಚೆನ್ನೈ, ಮಾರ್ಚ್ 4: ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌(ಐಪಿಎಲ್‌)ಗಾಗಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಅಭ್ಯಾಸ ಆರಂಭಿಸಿದೆ. ಮಾರ್ಚ್‌ 3ರಿಂದ ತಯಾರಿ ಆರಂಭಿಸಿರುವ ಸಿಎಸ್‌ಕೆ, ಅಭ್ಯಾಸದ ವೇಳೆಯ ವೀಡಿಯೋವನ್ನು ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. ವಿಡಿಯೋದಲ್ಲಿ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

ಮಾರ್ಚ್‌ 3ರಂದು ಶೇರ್ ಮಾಡಿಕೊಂಡಿರುವ ವೀಡಿಯೋದಲ್ಲಿ, '2020ರ ಬೇಸಿಗೆಗಾಗಿ ಸೂಪರ್ ಅಭ್ಯಾಸ ಆರಂಭಗೊಂಡಿದೆ,' ಎಂದು ಸಿಎಸ್‌ಕೆ ಬರೆದುಕೊಂಡಿದೆ. ವೀಡಿಯೋದಲ್ಲಿ ಧೋನಿ ಅಭ್ಯಾಸ ನಡೆಸುತ್ತಿರುವ, ಯುವ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಿರುವ ಚಿತ್ರಣವಿದೆ.

ವಿಶ್ವಕಪ್‌ ಕ್ರಿಕೆಟ್‌ 2019ರಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೈಮಿಫೈನಲ್‌ನಲ್ಲಿ ಸೋತು ಹೊರ ಬಿದ್ದಾಗ ಭಾರತ ತಂಡದಿಂದ ಹೊರಗುಳಿದಿದ್ದ ಕೂಲ್ ಕ್ಯಾಪ್ಟನ್ ಅನಂತರ ಯಾವುದೇ ಪಂದ್ಯವನ್ನಾಡಿಲ್ಲ. ಅಂದರೆ ಧೋನಿ ಆಟ ನಿಲ್ಲಿಸಿ ಸುಮಾರು 7 ತಿಂಗಳುಗಳಾಗಿವೆ.

ತಂಡದಿಂದ ಧೋನಿ ಬಹುಕಾಲ ಹೊರಗಿದ್ದಿದ್ದರಿಂದ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಧೋನಿ ಆಡುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಕ್ರಿಕೆಟ್‌ ವಲಯದಲ್ಲಿ ಚರ್ಚೆಗಳಾಗುತ್ತಲೇಯಿದೆ. ಐಪಿಎಲ್‌ನಲ್ಲಿ ಧೋನಿ ಚೆನ್ನಾಗಿ ಆಡಿದರೆ ಅವರನ್ನು ಖಂಡಿತಾ ವಿಶ್ವಕಪ್ ತಂಡದಲ್ಲಿ ಪರಿಗಣಿಸುತ್ತೇವೆ ಎಂದು ಭಾರತ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದರು. ಅಭ್ಯಾಸದಲ್ಲಿ ಧೋನಿ ಸಿಕ್ಸ್ ಬಾರಿಸಿರುವ ರೀತಿ ನೋಡಿದರೆ ವಿಶ್ವಕಪ್ ತಂಡದಲ್ಲಿ ಧೋನಿ ಕಾಣಿಸಿಕೊಳ್ಳುವ ನಿರೀಕ್ಷೆ ಹೆಚ್ಚೆನಿಸಿದೆ.

Story first published: Wednesday, March 4, 2020, 16:09 [IST]
Other articles published on Mar 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+