For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ನಲ್ಲಿ ಅಭಿಮಾನಿಗಳಿಗೆ ಕಿಂಚಿತ್ತೂ ದಯೆ ಇಲ್ಲ ಎಂದ ಲಯಾನ್‌!

icc world cup 2019 : ಚೀಟರ್ ಚೀಟರ್ ಎಂದು ಕೂಗಿ ಅವಮಾನ ಮಾಡಿದ ಅಭಿಮಾನಿಗಳು..? | Oneindia Kannada
Fans in England are ruthless, theres not much love: Lyon

ಲಂಡನ್‌, ಮೇ 27: ಆತಿಥೇಯ ಇಂಗ್ಲೆಂಡ್‌ ವಿರುದ್ಧದ ವಿಶ್ವಕಪ್‌ ಅಭ್ಯಾಸ ಪಂದ್ಯದ ವೇಳೆ ಆಸ್ಟ್ರೇಲಿಯಾ ತಂಡದ ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಅವರನ್ನು ಕ್ರೀಡಾಂಗಣದಲ್ಲಿ ಸೇರಿದ್ದ ಪ್ರೇಕ್ಷಕರು 'ಚೀಟರ್‌... ಚೀಟರ್‌' ಎಂದೆಲ್ಲಾ ಅಣಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ತಂಡದ ಅನುಭವಿ ಆಫ್‌ ಸ್ಪಿನ್ನರ್‌ ನೇಥನ್‌ ಲಯಾನ್‌ ಇಂಗ್ಲೆಂಡ್‌ನಲ್ಲಿ ಅಭಿಮಾನಿಗಳಿಗೆ ಕಿಂಚಿತ್ತೂ ದಯೆ ಇಲ್ಲ ಎಂದು ಹೇಳಿದ್ದಾರೆ.

2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂನರ್ನಿಯ ಲೇಟೆಸ್ಟ್‌ ಸುದ್ದಿಗಳು

"ಇದನ್ನು ನಿರೀಕ್ಷಿಸಿದ್ದೆವು. ನಿಜಕ್ಕೂ ಅಭಿಮಾನಿಗಳಲ್ಲಿ ಕಿಂಚಿತ್ತೂ ದಯೆ ಇರಲಿಲ್ಲ. ಈ ಮೊದಲು ಎರಡು ಬಾರಿ ಆಷಸ್‌ ಸರಣಿ ಮತ್ತು ಒಮ್ಮೆ ಏಕದಿನ ಕ್ರಿಕೆಟ್‌ ಸರಣಿ ವೇಳೆ ಇಲ್ಲಿನ ಅಭಿಮಾನಿಗಳನ್ನು ಎದುರಾಗಿದ್ದೇನೆ. ಅವರು ಎಂದಿಗೂ ಬದಲಾಗುವುದಿಲ್ಲ,'' ಎಂದು 31 ವರ್ಷದ ಅನುಭವಿ ಬೌಲರ್‌ ಫಾಕ್ಸ್‌ ಸ್ಪೋರ್ಟ್ಸ್ ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸ್ಮಿತ್‌ ಮತ್ತು ವಾರ್ನರ್‌ ಇಬ್ಬರೂ ಕಳೆದ ವರ್ಷ ಬಾಲ್‌ ಟ್ಯಾಂಪರಿಂಗ್‌ ನಡೆಸಿ ಸಿಕ್ಕಿಬಿದ್ದು ಕ್ರಿಕೆಟ್‌ ಆಸ್ಟ್ರೇಲಿಯಾದಿಂದ 13 ತಿಂಗಳ ನಿಷೇಧದ ಕಠಿಣ ಶಿಕ್ಷೆಗೆ ಗುರಿಯಾಗಿದ್ದರು. ಬಳಿಕ ಆಸ್ಟ್ರೇಲಿಯಾದ ವಿಶ್ವಕಪ್‌ ತಂಡಕ್ಕೆ ಸೇರ್ಪಡೆಯಾಗಿ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್‌ ಎದುರು ಕಣಕ್ಕಿಳಿದಿದ್ದರು. ಕಳೆದ ಶನಿವಾರ ಸೌತ್‌ಹ್ಯಾಂಪ್ಟನ್‌ನಲ್ಲಿ ನಡೆದ ಈ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಸೇರಿದ್ದ 11,540 ಮಂದಿ ಪ್ರೇಕ್ಷಕರು ಸ್ಮಿತ್‌ ಮತ್ತು ವಾರ್ನರ್‌ಗೆ ಚೀಟರ್‌ ಎಂದು ಕರೆದು 'ಬೂ..'ಗುಟ್ಟಿದ್ದರು.

ಪ್ರೇಕ್ಷಕರಿಂದ ಈ ಪರಿ ಬೂ..ಗುಟ್ಟಿಸಿಕೊಂಡರೂ ಆತ್ಮವಿಶ್ವಾಸ ಕಳೆದುಕೊಳ್ಳದ ಸ್ಟೀವನ್‌ ಸ್ಮಿತ್‌ ಅಭ್ಯಾಸ ಪಂದ್ಯದಲ್ಲಿ ಶತಕ (116) ಬಾರಿ ಆಸೀಸ್‌ ಗೆಲುವಿನ ರೂವಾರಿಯಾದರು. ವಾರ್ನರ್‌ ಕೂಡ 43 ರನ್‌ಗಳನ್ನು ಗಳಿಸಿ ಆತ್ಮವಿಶ್ವಾಸ ಪ್ರದರ್ಶಿಸಿದರು.

"ಬ್ಯಾಟಿಂಗ್‌ಗೆ ತೆರಳುವ ಸಂದರ್ಭದಲ್ಲಿ ಹಲವು ಸಂಗತಿಗಳು ನನ್ನ ಕಿವೆಗೆ ಬಿದ್ದವು. ಆದರೆ, ಅವುಗಳ ಕಡೆಗೆ ನಾನು ಗಮನ ನೀಡಲಿಲ್ಲ. ನನ್ನ ತಲೆ ಕೆಳಗಿಟ್ಟು, ನನ್ನ ಕೆಲಸ ಏನಿದೆ ಅದಷ್ಟೇ ಮಾಡುವುದನ್ನು ಎದುರು ನೋಡುತ್ತಿದ್ದೆ,'' ಎಂದು ಪಂದ್ಯದ ಬಳಿಕ ಮಾತನಾಡಿದ ಸ್ಟೀವನ್‌ ಸ್ಮಿತ್‌ ತಮ್ಮ ಅನುಭವ ಹಂಚಿಕೊಂಡರು.

Story first published: Monday, May 27, 2019, 18:04 [IST]
Other articles published on May 27, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+