Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

KL Rahul: ಚಿನ್ನಸ್ವಾಮಿಯಲ್ಲಿ ಮೊಳಗಿತು RCB ಕ್ಯಾಪ್ಟನ್‌ ಕೆಎಲ್ ರಾಹುಲ್ ಘೋಷಣೆ

ಕರ್ನಾಟಕದ ಸ್ಟಾರ್‌ ಆಟಗಾರ ಕೆಎಲ್‌ ರಾಹುಲ್‌ ಸದ್ಯ ದುಲೀಪ್‌ ಟ್ರೋಫಿಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಭಾರತ ಎ ತಂಡದ ಪರ ಕಣಕ್ಕೆ ಇಳಿದಿರುವ ರಾಹುಲ್‌, ತವರು ಅಂಗಳಕ್ಕೆ ಪ್ರವೇಶಿಸಿದರು. ಎಂ ಚಿನ್ನಸ್ವಾಮಿ ಅಂಗಳದಲ್ಲಿ ರಾಹುಲ್‌ಗೆ ಫ್ಯಾನ್ಸ್‌ ಭರ್ಜರಿ ವೆಲ್‌ಕಮ್‌ ಮಾಡಿದ್ದಾರೆ. ಇವರನ್ನು ಕಂಡು ಅಭಿಮಾನಿಗಳು ಘೋಷಣೆಗಳನ್ನು ಕೂಗಿದ್ದಾರೆ.

ಕೆ.ಎಲ್‌ ರಾಹುಲ್ ಭಾರತ ಎ ತಂಡದ ಪರ ಆಡಲು ಮೈದಾನಕ್ಕೆ ಇಳಿದಾಗ, ಅಭಿಮಾನಿಗಳು ಘೋಷಣೆಗಳನ್ನು ಕೂಗಿದರು. ಅಭಿಮಾನಿಗಳು ಕೆಎಲ್ ರಾಹುಲ್ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆ ಜೋಡಿಸಿ ಘೋಷಣೆ ಕೂಗಿದ್ದಾರೆ. ಈ ವಿಡಿಯೋವನ್ನು ಅಭಿಮಾನಿಯೊಬ್ಬ ಸಾಮಾಜಿಕ ತಾಣದಲ್ಲಿ ಹಾಕಿಕೊಂಡಿದ್ದಾರೆ.

Fans Link KL Rahul to RCB During Duleep Trophy Match Chant His Name Amid Rumors of Lucknow Exit

ಮೈದಾನಕ್ಕೆ ಇಳಿಯುತ್ತಿದ್ದಂತೆ ಘೋಷಣೆ ಕೂಗಿದ ಫ್ಯಾನ್ಸ್‌

ಈ ವೈರಲ್‌ ವಿಡಯೋವನ್ನು ಗುರು ಗುಲಾಬ್ ಎಂಬ ಬಳಕೆದಾರರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳು ರಾಹುಲ್‌ ಅವರನ್ನು ಕಂಡು ಘೋಷಣೆಗಳನ್ನು ಕೂಗಿದ್ದಾರೆ. ಆರ್‌ಸಿಬಿ ನಾಯಕ ಹೇಗಿರಬೇಕು, ಕೆಎಲ್ ರಾಹುಲ್‌ನಂತಿರಬೇಕು ಎಂದು ಅಭಿಮಾನಿಗಳು ಘೋಷಣೆಗಳನ್ನು ಕೂಗಿದರು. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಳೆದ ಐಪಿಎಲ್ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ನಾಯಕನಾಗಿ ಕಣಕ್ಕೆ ಇಳಿದಿದ್ದರು. ಆದರೆ ಈ ಬಾರಿ ಅವರು ಎಲ್‌ಎಸ್‌ಜಿ ಪರ ಕಾಣಿಸಿಕೊಳ್ಳುವುದು ಅನುಮಾನ ಎಂದು ಹೇಳಲಾಗುತ್ತಿದೆ. ಆದರೆ ಇತ್ತೀಚಿಗೆ ಲಕ್ನೋ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ರಾಹುಲ್‌, ಭೇಟಿ ಮಾಡಿದ್ದರು. ಮಾಧ್ಯಮ ವರದಿಗಳ ಪ್ರಕಾರ ರಾಹುಲ್ ಅವರನ್ನು ತಂಡ ಆಟಗಾರನಾಗಿ ಉಳಿಸಿಕೊಳ್ಳುವುದು ಬಯಸುತ್ತದೆ ಎಂದು ತಿಳಿದು ಬಂದಿದೆ. ಎಲ್‌ಎಸ್‌ಜಿ ಇತ್ತೀಚೆಗೆ ಜಹೀರ್ ಖಾನ್ ಅವರನ್ನು ತಂಡದ ಮಾರ್ಗದರ್ಶಕರನ್ನಾಗಿ ಮಾಡಿದರು.

ಐಪಿಎಲ್ 2025ಗೂ ಮೊದಲು ಐಪಿಎಲ್‌ ಹರಾಜು ನಡೆಯಲಿದೆ. ಈ ವೇಳೆ ಐಪಿಎಲ್‌ ಮಾಲೀಕರು ತಂಡದಿಂದ ಕೈ ಬಿಟ್ಟ ಹಾಗೂ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಘೋಷಿಸಬೇಕಿದೆ.

ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಟೆಸ್ಟ್ ಸರಣಿ ಸೆಪ್ಟೆಂಬರ್‌ 19ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಭಾಗವಹಿಸುವ ಕನಸನ್ನು ರಾಹುಲ್‌ ಅವರು ಕಾಣುತ್ತಿದ್ದಾರೆ. ಹೀಗಾಗಿ ದುಲೀಪ್‌ ಟ್ರೋಫಿಯಲ್ಲಿ ರನ್‌ ಕಲೆ ಹಾಕಲೇ ಬೇಕಿತ್ತು. ಆದರೆ ರಾಹುಲ್‌ ಮೊದಲ ಇನಿಂಗ್ಸ್‌ನಲ್ಲಿ 37 ರನ್ ಬಾರಿಸಿ ನಿರಾಸೆ ಅನುಭವಿಸಿದರು. ಇವರು ಈ ಪ್ರದರ್ಶನವನ್ನು ನೋಡಿದರೆ, ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆಯುವುದು ಡೌಟ್‌ ಎನ್ನಲಾಗುತ್ತಿದೆ.

Story first published: Saturday, September 7, 2024, 21:36 [IST]
Other articles published on Sep 7, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+