ಕೊಹ್ಲಿಗೆ ಕುಹಕವಾಡಿದ ಇಸಿಬಿಗೆ ಕ್ರಿಕೆಟ್ ಪ್ರೇಮಿಗಳಿಂದ ಕಪಾಳ ಮೋಕ್ಷ!

ಲಂಡನ್: ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್‌ಗಳಲ್ಲಿ ಗುರುತಿಸಿಕೊಂಡವರು ವಿರಾಟ್ ಕೊಹ್ಲಿ. ಈಗಲೂ ಕೊಹ್ಲಿ ವಿಶ್ವದಲ್ಲಿ ಮುಂಚೂಣಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಕ್ರಿಕೆಟ್ ರಂಗದಲ್ಲಿ ಅಪರೂಪದ ಸಾಧನೆಗಳನ್ನು ಮಾಡುತ್ತ ಗಮನ ಸೆಳೆಯುತ್ತಿರುವ ಕೊಹ್ಲಿ, ನವೆಂಬರ್ 5ಕ್ಕೆ 32ನೇ ವರ್ಷಕ್ಕೆ ಕಾಲಿರಿಸಿದ್ದರು. ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಕೊಹ್ಲಿಗೆ ವಿಶ್ವದಗಲದ ಕ್ರಿಕೆಟ್ ಪ್ರೇಮಿಗಳು, ಕ್ರಿಕೆಟ್ ದಂತಕತೆಗಳು ಮತ್ತು ಸೆಲೆಬ್ರಿಟಿಗಳು ಶುಭ ಕೋರಿದ್ದರು.
ಆದರೆ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ), ಕೊಹ್ಲಿಯ ಹುಟ್ಟು ಹಬ್ಬದ ದಿನದಂದೇ ಕೊಹ್ಲಿ ಔಟ್ ಆಗಿರುವ ವಿಡಿಯೋ ಪೋಸ್ಟ್ ಮಾಡಿ ತಮಾಷೆ ಮಾಡಿದೆ. ಕ್ರಿಕೆಟ್ ಅಭಿಮಾನಿಗಳ ಕೋಪಕ್ಕೂ ಕಾರಣವಾಗಿದೆ.
ವಿರಾಟ್ ಕೊಹ್ಲಿಗೆ ಕುಹಕವಾಡಿದ ಇಸಿಬಿಗೆ ಕ್ರಿಕೆಟ್ ಅಭಿಮಾನಿಗಳು ಕಾಮೆಂಟ್ಸ್ ಮೂಲಕ ಸಖತ್ತಾಗೇ ತಿರುಗೇಟುಗಳನ್ನು ನೀಡಿದ್ದಾರೆ. ಆ ಕಾಮೆಂಟ್ಸ್‌ಗಳೆಲ್ಲ ಕೆಳಗಿವೆ ನೋಡಿ.
ಕೊಹ್ಲಿ ಬೌಲ್ಡ್ ಆಗಿದ್ದ ವಿಡಿಯೋ
ಇಂಗ್ಲೆಂಡ್ ಮತ್ತು ಭಾರತ ನಡುವಣ ಏಕದಿನ ಪಂದ್ಯವೊಂದರ ವೇಳೆ ಕೊಹ್ಲಿ, ಆಂಗ್ಲ ಲೆಗ್ ಸ್ಪಿನ್ನರ್ ರಶೀದ್ ಖಾನ್ ಎಸೆತಕ್ಕೆ ಬೌಲ್ಡ್ ಆಗಿದ್ದರು. ರಶೀದ್ ಎಸೆತವನ್ನು ಗುರುತಿಸಲಾಗದ ಕೊಹ್ಲಿ ಅಚಾನಕ್ ಔಟಾಗಿದ್ದಕ್ಕಾಗಿ ಬೆರಗು ತೋರಿಕೊಂಡಿದ್ದರು. ಆ ಪಂದ್ಯದ ವೇಳೆಯ ವಿಡಿಯೋವನ್ನು ಇಸಿಬಿ ಈಗ ಹಾಕಿಕೊಂಡಿದೆ.

ಬ್ರಾಡ್ ಬರ್ತ್‌ಡೇಗೆ ಹೀಗ್ಮಾಡಿ
ಇಸಿಬಿ ಹುಚ್ಚಾಟಿಕೆಗೆ ಬಹಳಷ್ಟು ಮಂದಿ ಕ್ರಿಕೆಟ್ ಅಭಿಮಾನಿಗಳು ಕಾಮೆಂಟ್ಸ್ ಮೂಲಕ ತಿರುಗೇಟು ನೀಡಿದ್ದಾರೆ. ಒಬ್ಬಾತ, ಸ್ಟುವರ್ಟ್ ಬ್ರಾಡ್ ಬರ್ತ್ ಡೇ ದಿನ ಯುವರಾಜ್ ಸಿಂಗ್ ಸಿಕ್ಸ್ ಚಚ್ಚಿರುವ ವಿಡಿಯೋ ಹಾಕಿ ಆ ಮೂಲಕ ಬ್ರಾಡ್ ಬರ್ತ್ ಡೇ ಸೆಲೆಬ್ರೇಟ್ ಮಾಡಿ ಅಂತ ಇಸಿಬಿಗೆ ತಿವಿದಿದ್ದಾರೆ. ಇಂಥ ಅನೇಕ ಕಾಮೆಂಟ್ಸ್‌ಗಳು ಪೋಸ್ಟ್ ಕೆಳಗೆ ಕಾಣಸಿಕೊಂಡಿದ್ದವು.

ವಿರಾಟ್ ಕೊಹ್ಲಿ ಸಾಧನೆ
ಕ್ರಿಕೆಟ್‌ನಲ್ಲಿ ದಾಖಲೆಗಳ ದಾಖಲೆ ಬರೆಯುತ್ತಿರುವ, ಏಕದಿನ ವಿಶ್ವ ನಂ.1 ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, 86 ಟೆಸ್ಟ್ ಪಂದ್ಯಗಳಲ್ಲಿ 7240 ರನ್, 27 ಶತಕ, 7 ದ್ವಿಶತಕ, 248 ಏಕದಿನ ಪಂದ್ಯಗಳಲ್ಲಿ 11867 ರನ್, 43 ಶತಕ, 81 ಟಿ20ಐ ಪಂದ್ಯಗಳಲ್ಲಿ 2794 ರನ್, 24 ಅರ್ಧ ಶತಕಗಳ ದಾಖಲೆ ಹೊಂದಿದ್ದಾರೆ.

ಕೀಟಲೆಯ ಇಮೋಜಿ
ಕೊಹ್ಲಿಯ ಬರ್ತ್‌ಡೇಯಂದು ಅವರು ಔಟ್ ಆಗಿರುವ ವಿಡಿಯೋ ಹಾಕಿಕೊಂಡಿರುವ ಇಸಿಬಿ, 'ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಬರೆದಿದೆಯಲ್ಲದೆ ಜೊತೆಗೆ ಕೀಟಲೆಯ ಇಮೋಜಿಯನ್ನೂ ಸೇರಿಸಿಕೊಂಡಿದೆ.

- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications