Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಿಷಭ್ ಪಂತ್‌ನ ಮತ್ತೊಂದು ಕೆಲಸ ಕಿತ್ತುಕೊಂಡ ಕೆ.ಎಲ್ ರಾಹುಲ್ !

Fans Troll Rishabh Pant Over Kl Rahul’s Picture

ಟೀಮ್ ಇಂಡಿಯಾ ಆಟಗಾರ ಕೆ.ಎಲ್ ರಾಹುಲ್ ಸೀಮಿತ ಓವರ್‌ಗಳಲ್ಲಿ ಅದ್ಭುತ ಆಟಗಾರ. ಟೀಮ್ ಇಂಡಿಯಾ ಪಾಲಿನ ಪ್ರಮುಖ ಶಕ್ತಿ. ಯಾವುದೇ ಕ್ರಮಾಂಕದಲ್ಲಿ ಆಡಿಸಿದರೂ ನಾಯಕ ಯಾವ ಜವಾಬ್ದಾರಿಯನ್ನು ನೀಡಿದರು ರಾಹುಲ್ ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಕೆ.ಎಲ್ ರಾಹುಲ್ ಕ್ರಮಾಂಕ ಬದಲಾವಣೆ ಮಾತ್ರವಲ್ಲ ವಿಕೆಟ್ ಕೀಪರ್ ಆಗಿ ಹಂಗಾಮಿ ನಾಯಕನಾಗಿಯೂ ಯಶಸ್ಸನ್ನು ಕಂಡಿದ್ದಾರೆ. ಕೆ.ಎಲ್ ರಾಹುಲ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕಳೆದ ಎರಡು ಸರಣಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ವಿಕೆಟ್ ಕೀಪಿಂಗ್ ನಡೆಸಿದ ನಂತರ ರಿಷಬ್ ಪಂತ್ ಮತ್ತೆ ತಂಡಕ್ಕೆ ವಾಪಾಸ್ಸಾಗುವುದು ಅನುಮಾನ ಎಂಬಂತಾಗಿದೆ.

ಇದರ ಮಧ್ಯೆ ಕೆ.ಎಲ್ ರಾಹುಲ್ ರಿಷಬ್ ಪಂತ್ ಅವರ ಮತ್ತೊಂದು ಜವಾಬ್ದಾರಿಯನ್ನು ಕಿತ್ತುಕೊಳ್ತಿದ್ದಾರಂತೆ. ಏನದು ಮುಂದೆ ಓದಿ..

ಪಂತ್‌ಗೆ ಆಡುವ ಬಳಗದಿಂದಲೇ ಕೊಕ್

ಪಂತ್‌ಗೆ ಆಡುವ ಬಳಗದಿಂದಲೇ ಕೊಕ್

ಟೀಮ್ ಇಂಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿ ಕಳೆದ ವಿಶ್ವಕಪ್‌ನಿಂದ ಕಾಣಸಿಕೊಂಡಿಲ್ಲ. ಹೀಗಾಗಿ ರಿಷಬ್ ಪಂತ್ ವಿಕೆಟ್ ಕೀಪರ್ ಆಗಿ ಅವಕಾಶವನ್ನು ಪಡೆದುಕೊಂಡಿದ್ದರು. ಆದರೆ ರಿಷಬ್ ಪಂತ್ ಸತತ ವೈಫಲ್ಯವನ್ನೇ ಅನುಭವಿಸುತ್ತಾ ಬಂದರು. ಹೀಗಾಗಿ ಕೆ.ಎಲ್ ರಾಹುಲ್‌ಗೆ ತಾತ್ಕಾಲಿಕವಾಗಿ ವಿಕೆಟ್ ಕೀಪರ್ ಆಗಿ ಅವಕಾಶ ದೊರೆಯಿತು. ಇದನ್ನು ಯಶಸ್ವಿಯಾಗಿ ನಿಭಾಯಿಸಿದ ರಾಹುಲ್ ಪಂತ್‌ಗೆ ಆಡುವ ಬಳಗದಿಂದಲೇ ಕೊಕ್ ಕೊಡುವಂತೆ ಮಾಡಿದರು.

ಪಂತ್ ಮತ್ತೊಂದು ಕೆಲಸಕ್ಕೆ ರಾಹುಲ್ ಕಲ್ಲು!

ಬ್ಯಾಟಿಂಗ್ ವಿಕೆಟ್ ಕೀಪಿಂಗ್ ನಂತರ ಕೆ.ಎಲ್ ರಾಹುಲ್ ರಿಷಬ್ ಪಂತ್ ಅವರ ಮತ್ತೊಂದು ಕೆಲಸಕ್ಕೆ ಕಲ್ಲುಹಾಕಿದ್ದಾರಂತೆ. ಅದು ಯಾವುದು ಅಂತೀರಾ. ಬೇಬಿ ಸಿಟ್ಟಿಂಗ್!. ಹೌದು ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಚಿತ್ರವೊಂದಕ್ಕೆ ಹೀಗೆ ಚೇಷ್ಟೆಯ ಟ್ವೀಟ್‌ಗಳನ್ನು ಅಭಿಮಾನಿಗಳು ಮಾಡುತ್ತಿದ್ದಾರೆ.

ಬೇಬಿ ಸಿಟ್ಟರ್ ರಿಷಬ್ ಪಂತ್:

ಬೇಬಿ ಸಿಟ್ಟರ್ ರಿಷಬ್ ಪಂತ್:

2019ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ವಿಕೆಟ್ ಕೀಪರ್ ಟಿಮ್ ಪೈನ್ ಬ್ಯಾಟಿಂಗ್ ಮಾಡಿತ್ತಿದ್ದ ರಿಷಬ್ ಪಂತ್ ಅವರ ಏಕಾಗ್ರತೆಯನ್ನು ಕೆಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ಈ ಸಂದರ್ಭ ಪಂತ್ ಅವರನ್ನು ಕೆಣಕುತ್ತಾ ಪೈನ್ 'ತಾನು ಹಾಕು ತನ್ನ ಪತ್ನಿ ಸಿನಿಮಾ ನೋಡಲು ಹೋದಾಗ ತನ್ನ ಮಗುವನ್ನು ನೋಡಿಕೊ' ಎಂದೆಲ್ಲಾ ಹೇಳಿ ಸುದ್ದಿಯಾಗಿದ್ದರು. ಬಳಿಕ ರಿಷಬ್ ಪಂತ್ ಕೂಡ ಇದಕ್ಕೆ ಟೆಂಪರರಿ ನಾಯಕ ಎಂದು ಪೈನ್‌ಗೆ ತಿರುಗೇಟು ನೀಡಿ ಸುದ್ದಿಯಾಗಿದ್ದರು.

ಪೈನ್ ಮಗುವಿನ ಜೊತೆಗೆ ಫೋಟೋ ಹಾಕಿಕೊಂಡಿದ್ದ ಪಂತ್

ಪೈನ್ ಮಗುವಿನ ಜೊತೆಗೆ ಫೋಟೋ ಹಾಕಿಕೊಂಡಿದ್ದ ಪಂತ್

ಈ ಸ್ಲಡ್ಜಿಂಗ್ ವೃತ್ತಾಂತ ಮತ್ತೊಂದು ಹಂತಕ್ಕೆ ಹೋಗಿದ್ದು ರಿಷಬ್ ಪಂತ್ ಟಿಮ್ ಪೈನ್ ಅವರ ಮಗುವಿನ ಜೊತೆಗೆ ಫೋಟೋ ತೆಗೆಸಿಕೊಂಡು ಟ್ವಿಟ್ಟರ್‌ನಲ್ಲಿ ಹರಿಯಬಿಟ್ಟಾಗ. ಹೌದು ಆಟದ ಸಂದರ್ಭದಲ್ಲಿ ಕಾಲೆಳೆದ ಮಾತನ್ನು ಪಂತ್ ನಿಜವಾಗಿಸಿ ಬಿಟ್ಟಿದ್ದರು. ಇದನ್ನು ಕ್ರಿಕೆಟ್ ಅಭಿಮಾನಿಗಳು ಎಂಜಾಯ್ ಮಾಡಿದ್ದರು.

ರಿಷಬ್ ಎಪಿಸೋಡ್ ಮುಂದುವರಿಸಿದ ಅಭಿಮಾನಿಗಳು

ರಿಷಬ್ ಎಪಿಸೋಡ್ ಮುಂದುವರಿಸಿದ ಅಭಿಮಾನಿಗಳು

ಒಂದೂವರೆ ವರ್ಷದ ಹಿಂದಿನ ಎಪಿಸೋಡನ್ನು ಕ್ರಿಕೆಟ್ ಅಭಿಮಾನಿಗಳು ಮತ್ತೆ ಮುಂದುವರಿಸಿದ್ದಾರೆ. ಟೀಮ್ ಇಂಡಿಯಾದಲ್ಲಿ ಅವಕಾಶವನ್ನು ಕಳೆದುಕೊಂಡ ಬಳಿಕ ರಾಹುಲ್ ಅವರನ್ನು ಮುಂದಿಟ್ಟುಕೊಂಡು ಅಭಿಮಾನಿಗಳು ಈ ರೀತಿ ಟ್ರೋಲ್ ಮಾಡುತ್ತಿದ್ದಾರೆ.

ಎಲ್ಲದಕ್ಕೂ ರಾಹುಲ್ ಸೈ

ಎಲ್ಲದಕ್ಕೂ ರಾಹುಲ್ ಸೈ

ಇನ್ನು ಕೆ.ಎಲ್ ರಾಹುಲ್ ಅವರ ಫಾರ್ಮ್ ಕಾರಣಕ್ಕೆ ಸಕಾರಾತ್ಮಕವಾಗಿಯೂ ಸಾಕಷ್ಟು ಟ್ರೋಲ್‌ಗಳನ್ನು ಮಾಡಲಾಗಿದೆ. ಆರಂಭಿಕನಿಂದ ಹಿಡಿದು ಆರನೇ ಕ್ರಮಾಂಕದವರೆಗೆ ಎಲ್ಲಾ ಕ್ರಮಾಂಕದಲ್ಲೂ ರಾಹುಲ್ ಅದ್ಭುತ ಪ್ರದರ್ಶನ ಕಾರಣಕ್ಕೆ ನಾಯಕನ ಆಜ್ಞೆಯನ್ನು ಪಾಲಿಸುವ ಆಟಗಾರ ಎಂಬಂತೆ ಟ್ರೋಲ್‌ಗಳನ್ನು ಮಾಡಲಾಯಿತು.

Story first published: Thursday, February 20, 2020, 18:28 [IST]
Other articles published on Feb 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+