ರೋಹಿತ್ ಶರ್ಮಾ ವೈಫಲ್ಯ ಮಯಾಂಕ್ ಅಗರ್ವಾಲ್‌ಗೆ ದಾರಿಯಾಗುತ್ತ?

ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಪ್ರದರ್ಶನ ಅಷ್ಟೊಂದು ಚೆನ್ನಾಗಿರಲಿಲ್ಲ. ಪ್ರಮುಖ ಬ್ಯಾಟ್ಸ್‌ಮನ್‌ಗಳು ಉತ್ತಮ ಆಟ ಪ್ರದರ್ಶಿಸಲಿಲ್ಲ. ಹೀಗಾಗಿ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ಸರಣಿ ಮುನ್ನಡೆಯ ಹುಮ್ಮಸ್ಸಿನಲ್ಲಿದೆ.
ಭಾರತದ ಹಿನ್ನಡೆಗೆ ಕಾರಣ ತಂಡದ ಪ್ರಮುಖ ಆಟಗಾರರು ಅಂದೆವಲ್ಲ, ರೋಹಿತ್ ಶರ್ಮಾ ಕೂಡ ಈ ಪಟ್ಟಿಯಲ್ಲಿದ್ದಾರೆ. ಚೆನ್ನೈ ಟೆಸ್ಟ್‌ನಲ್ಲಿ ರೋಹಿತ್, ಬ್ಯಾಟಿಂಗ್, ಫೀಲ್ಡಿಂಗ್‌ನಲ್ಲಿ ಅಂಥ ಉತ್ತಮ ಪ್ರದರ್ಶನ ನೀಡಲಿಲ್ಲ. ಬ್ಯಾಟಿಂಗ್‌ನಲ್ಲಂತೂ ಎರಡು ಇನ್ನಿಂಗ್ಸ್‌ಗಳಲ್ಲಿ 6, 12 ರನ್ ಬಾರಿಸಿದ್ದರು.
ಆರಂಭಿಕ ಟೆಸ್ಟ್‌ನಲ್ಲಿ ಮಯಾಂಕ್ ಅಗರ್ವಾಲ್ ಅವರಿಗೆ ಅವಕಾಶ ನೀಡಿರಲಿಲ್ಲ. ಆದರೆ ರೋಹಿತ್ ವೈಫಲ್ಯ ಮಯಾಂಕ್ ಕಡೆಗೆ ಯೋಚಿಸುವಂತೆ ಮಾಡಿದೆ. ಬಹಳಷ್ಟು ಮಂದಿ ಅಭಿಮಾನಿಗಳು ಟ್ವೀಟ್ ಮೂಲಕ ಮುಂದಿನ ಪಂದ್ಯದಲ್ಲಿ ರೋಹಿತ್ ಬದಲು ಮಯಾಂಕ್‌ಗೆ ಅವಕಾಶ ನೀಡುವಂತೆ ಕೋರಿಕೊಂಡಿದ್ದಾರೆ.
ರೋಹಿತ್ ಶರ್ಮಾಗೆ ವಯಸ್ಸಾಗುತ್ತಾ ಬಂತು. ಹೀಗಾಗಿ ಮಯಾಂಕ್ ಅವರನ್ನು ಪರಿಗಣಿಸಬೇಕು ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ರೋಹಿತ್ ವೈಟ್‌ಬಾಲ್‌ಗೆ ಬೆಸ್ಟ್, ರೆಡ್ ಬಾಲ್‌ಗೆ ಮಯಾಂಕ್ ಒಳ್ಳೇದು ಎಂದು ಬರೆದುಕೊಂಡಿದ್ದಾರೆ. ದ್ವಿತೀಯ ಪಂದ್ಯದಲ್ಲಿ ತಂಡ ಬದಲಾವಣೆ ಯಾಗುತ್ತಾ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications