Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ದಿನಾಂಕ ಘೋಷಣೆಯ ಬೆನ್ನಲ್ಲೇ ಬಿಸಿಸಿಐ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ

Fans Want To Boycott Ipl 2020 As Chinese Sponsors Retained In Cricket Carnival

ಐಪಿಎಲ್ ಆಯೋಜನೆಗೆ ಕೇಂದ್ರ ಸರ್ಕಾರದ ಅನುಮತಿ ದೊರೆಯುತ್ತಿದ್ದಂತೆಯೇ ಟೂರ್ನಿಯ ಚಟುವಟಿಕೆಗಳು ಗರಿಗೆದರತೊಡಗಿದೆ. ಆದರೆ ಈ ಮಧ್ಯೆ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ತೆಗೆಸುಕೊಂಡಿರುವ ಒಂದು ನಿರ್ಧಾರಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಐಪಿಎಲ್ ಬಹಿಷ್ಕರಿಸುವ ಅಭಿಯಾನವನ್ನು ಟ್ವಿಟ್ಟರ್‌ನಲ್ಲಿ ಆರಂಭಿಸಿದ್ದಾರೆ.

ಕ್ರಿಕೆಟ್ ಅಭಿಮಾನಿಗಳ ಈ ಆಕ್ರೋಶಕ್ಕೆ ಕಾರಣ ಬಿಸಿಸಿಐ ತೆಗೆದುಕೊಂಡಿರುವ ಒಂದು ನಿರ್ಧಾರ. ಈ ಬಾರಿಯ ಐಪಿಎಲ್‌ನಲ್ಲಿ ಎಲ್ಲಾ ಹಿಂದಿನ ಪ್ರಾಯೋಜಕರು ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಭಾನುವಾರ ಸ್ಪಷ್ಟಪಡಿಸಿತ್ತು.

ಈ ಮೂಲಕ ಚೀನಾದ ಪ್ರಮುಖ ಮೊಬೈಲ್ ಸಂಸ್ಥೆಯಾದ ವಿವೋ ಈ ಬಾರಿಯ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕರಾಗಿಯೇ ಮುಂದುವರಿಯುವು ಖಚಿಪಡಿಸಿತ್ತು. ಬಿಸಿಸಿಐನ ಈ ನಿರ್ಧಾರ ಈಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕಾಗಿ ಬಿಸಿಸಿಐಗೆ ಮಂಗಳಾರತಿ ಮಾಡುತ್ತಿದ್ದಾರೆ ಅಭಿಮಾನಿಗಳು.

ನೀವು ನಿಮ್ಮ ಮುಖ್ಯ ಪ್ರಾಯೋಜಕರನ್ನು ಐಪಿಎಲ್‌ನಿಂದ ಬಹಿಷ್ಕರಿಸದಿದ್ದರೆ ನಾವು ಇಡೀ ಐಪಿಎಲ್‌ಅನ್ನು ಬಹಿಷ್ಕರಿಸುತ್ತೇವೆ ಎಂದು ಕೆಲ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಟ್ವಿಟ್ಟರ್‌ನಲ್ಲಿ #ಬಾಯ್ಕಾಟ್ಐಪಿಎಲ್ ಅಭಿಯಾನವನ್ನು ನಡೆಸುತ್ತಿದ್ದಾರೆ.

ಇನ್ನೂ ಕೆಲವು ಅಭಿಮಾನಿಗಳು ನಾವು ಐಪಿಎಲ್‌ನ ದೊಡ್ಡ ಅಭಿಮಾನಿ. ಆದರೆ ಚೀನಾ ಕಂಪನಿಯನ್ನು ಬಹಿಷ್ಕರಿಸದಿದ್ದರೆ ನಾವು ಈ ಬಾರಿಯ ಐಪಿಎಲ್ ವೀಕ್ಷಿಸಲಾರೆವು ಎಂದು ಹೇಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿರುವ ಈ ಅಭಿಯಾನವನ್ನು ಬಿಸಿಸಿಐ ಯಾವ ರೀತಿ ಪರಿಗಣಿಸುತ್ತದೆ ಎಂದು ಕಾದು ನೋಡಬೇಕಿದೆ.

Story first published: Monday, August 3, 2020, 14:47 [IST]
Other articles published on Aug 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+