BCB: ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ರಾಜೀನಾಮೆ; ಜವಾಬ್ದಾರಿ ಹೊತ್ತಿಕೊಂಡ ಮಾಜಿ ನಾಯಕ
ಬಾಂಗ್ಲಾದೇಶದಲ್ಲಿ ಕಳೆದ ಹಲವು ದಿನಗಳಿಂದ ಮೀಸಲಾತಿ ಹಿಂಸಾಚಾರ ನಡೆಯುತ್ತಿವೆ. ದೇಶದೆಲ್ಲೆಡೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಇದರ ಪರಿಣಾಮ ಕ್ರೀಡಾ ಲೋಕದ ಮೇಲೂ ಬಿದ್ದಿದೆ. ಇತ್ತೀಚೆಗೆ ಐಸಿಸಿ ಮಹಿಳೆಯರ ಟಿ20 ವಿಶ್ವಕಪ್ 2024ರ ಟೂರ್ನಿಯನ್ನು ಬಾಂಗ್ಲಾದೇಶದಿಂದ ಯುಎಇಗೆ ಸ್ಥಳಾಂತರಿಸಲಾಗಿತ್ತು.
ಇದೀಗ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷ ನಜ್ಮುಲ್ ಹಸನ್ ಕೂಡ ತಮ್ಮ ಸ್ಥಾನವನ್ನು ತೊರೆದಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಹಿಂಸಾಚಾರದಿಂದಾಗಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ದೇಶ ತೊರೆದು ಭಾರತಕ್ಕೆ ಬಂದಿದ್ದರು. ಇದಾದ ನಂತರ ರಾಜಕೀಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಶೇಖ್ ಹಸೀನಾ ಅವರ ಆಪ್ತ ಮತ್ತು ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮಾಜಿ ನಾಯಕನಿಕ ಜವಾಬ್ದಾರಿ
ನಜ್ಮುಲ್ ಹಸನ್ ರಾಜೀನಾಮೆ ಬಳಿಕ, ಬಿಸಿಬಿ ಬುಧವಾರ ಬಾಂಗ್ಲಾದೇಶ ತಂಡದ ಮಾಜಿ ನಾಯಕ ಫಾರೂಕ್ ಅಹ್ಮದ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ. ಬಿಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಜಾಮುದ್ದೀನ್ ಚೌಧರಿ ಅವರು ರಾಜೀನಾಮೆಯನ್ನು ಖಚಿತಪಡಿಸಿದ್ದಾರೆ. ಹಸೀನಾ ಅವರ 15 ವರ್ಷಗಳ ಆಡಳಿತದಲ್ಲಿ ನಜ್ಮುಲ್ ಕ್ರೀಡಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
ನಜ್ಮುಲ್ ಅಧಿಕಾರವಧಿ
2012 ರಿಂದ ನಜ್ಮುಲ್ ಹಸನ್ ಬಿಸಿಬಿ ಅಧ್ಯಕ್ಷರಾಗಿದ್ದರು. ಅವರ ಕೊನೆಯ ಅಧಿಕಾರವಧಿಯೂ 2025ರಲ್ಲಿ ಪೂರ್ಣಗೊಳ್ಳುತ್ತಿತ್ತು . ಆದರೆ ಅವರು ಈ ಅವಧಿಗೂ ಮುನ್ನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಫಾರೂಕ್ ಅಹ್ಮದ್ ಅವರು 1994 ರ ಐಸಿಸಿ ಟ್ರೋಫಿಯಲ್ಲಿ ಬಾಂಗ್ಲಾದೇಶದ ನಾಯಕತ್ವ ವಹಿಸಿದ್ದರು. ಅವರ ವೃತ್ತಿಜೀವನದಲ್ಲಿ 7 ಏಕದಿನಗಳನ್ನು ಆಡಿದ್ದಾರೆ. ಇದಾದ ಬಳಿಕ 1999 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು.
ಬಾಂಗ್ಲಾದೇಶದ ಹತ್ಯಾಕಾಂಡ
ಪ್ರಧಾನಿ ಶೇಖ್ ಹಸೀನಾ ಅವರು ಆಗಸ್ಟ್ 5 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ದೇಶದಿಂದ ಪಲಾಯನ ಮಾಡಿದ್ದರು. ಇದಕ್ಕೂ ಮೊದಲು, ಹಸೀನಾ ಅವರ ಆಡಳಿತದ ವಿರುದ್ಧ ಒಂದು ತಿಂಗಳ ಕಾಲ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ 450 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications