For Quick Alerts
ALLOW NOTIFICATIONS  
For Daily Alerts
 

ಇಂದು ಟಿ20 ವಿಶ್ವಕಪ್ ಭವಿಷ್ಯದ ಮೇಲೆ ಐಪಿಎಲ್ ವೇಳಾಪಟ್ಟಿ ನಿರ್ಧಾರ

Fate of World T20, IPL could be decided today

ನವದೆಹಲಿ, ಮೇ 28: ಗುರುವಾರ (ಮೇ 28) ನಡೆಯುವ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಟಿ20 ವಿಶ್ವಕಪ್ ಭವಿಷ್ಯ ನಿರ್ಧಾರವಾಗಲಿದೆ. ಟಿ20 ವಿಶ್ವಕಪ್ ಟೂರ್ನಿ ಅಕ್ಟೋಬರ್ 18ರಿಂದ ನವೆಂಬರ್ 15ರ ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಸಲು ದಿನಾಂಕ ನಿಗದಿಯಾಗಿತ್ತು. ಆದರೆ ಕೊರನಾವೈರಸ್ ಕಾರಣ ಟೂರ್ನಿ ಆಯೋಜನೆಗೆ ಭೀತಿ ಎದುರಾಗಿದೆ.

ಐಸಿಸಿ ಪ್ಲ್ಯಾನ್ ಪ್ರಕಾರ 2020ರ ಟಿ20 ವಿಶ್ವಕಪ್, 3 ಸ್ಲಾಟ್‌ಗಳಲ್ಲಿ ಮುಂದೂಡಲ್ಪಡುವ ನಿರೀಕ್ಷೆಯಿದೆ. ಮೂರು ಸ್ಲಾಟ್‌ಗಳೆಂದರೆ ಫೆಬ್ರವರಿ-ಮಾರ್ಚ್ 2021, ಅಕ್ಟೋಬರ್ 2021 ಅಥವಾ ಅಕ್ಟೋಬರ್ 2022. ಐಸಿಸಿಯ ಶ್ರೀಮಂತ ಅಂಗಸಂಸ್ಥೆಯಾಗಿರುವ ಬಿಸಿಸಿಐ ಮೊದಲೆರಡು ಆಯ್ಕೆಗಳನ್ನು ಬಯಸಿಲ್ಲ.

'ವಿಶ್ವಕಪ್‌ ಅನ್ನು 2021ರ ಫೆಬ್ರವರಿ ಮಾರ್ಚ್‌ಗೆ ಮುಂದೂಡಿದರೆ ಅದರಿಂದ ನಮ್ಮ ದ್ವಿಪಕ್ಷೀಯ ಸರಣಿಗೆ ತೊಂದರೆಯಾಗಲಿದೆ (ಈ ಅವಧಿಯಲ್ಲಿ ಟೀಮ್ ಇಂಡಿಯಾ ಫ್ಯೂಚರ್ ಟೂರ್ ಪ್ರೋಗ್ರಾಮ್ ಅಡಿಯಲ್ಲಿ ಇಂಗ್ಲೆಂಡ್‌ನಲ್ಲಿ ಆಡಲಿದೆ). ಈಗಾಗಲೇ ಕೋವಿಡ್ -19 ನಿಂದ ತೊಂದರೆಗೀಡಾಗಿರುವ ದ್ವಿಪಕ್ಷೀಯ ಸ್ಪರ್ಧೆಗಳನ್ನು ಮತ್ತಷ್ಟು ಹೆಚ್ಚಿಸಲು ಐಸಿಸಿ ಈವೆಂಟ್‌ಗೆ ಅವಕಾಶ ನೀಡುವುದು ಜಾಣತನವಲ್ಲ,' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಟಿ20 ವಿಶ್ವಕಪ್‌ ಅನ್ನು 2022ಕ್ಕೆ ಮುಂದೂಡಿದರೂ ಭಾರತ ಕೇವಲ 6 ತಿಂಗಳ ಅವಧಿಯಲ್ಲಿ ಎರಡೆರಡು ವಿಶ್ವಕಪ್‌ ಟೂರ್ನಿಗಳನ್ನು ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ. 'ಫೆಬ್ರವರಿ-ಮಾರ್ಚ್ 2023ಕ್ಕೆ 50 ಓವರ್‌ಗಳ ವಿಶ್ವಕಪ್‌ ನಡೆಸಲು ಭಾರತಕ್ಕೆ ಹಂಚಿಕೆಯಾಗಿರುವುದರಿಂದ ಬರೀ 6 ತಿಂಗಳ ಅವಧಿಯಲ್ಲಿ ಎರಡು ವಿಶ್ವಕಪ್‌ಗಳನ್ನು ಭಾರತ ಆಯೋಜಿಸಬೇಕಾಗುತ್ತದೆ,' ಎಂದು ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.

Story first published: Thursday, May 28, 2020, 12:17 [IST]
Other articles published on May 28, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+