ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ತಂದೆ ಪೌಲ್ ಸ್ಟಾರ್ಕ್ ನಿಧನ

ಸಿಡ್ನಿ: ಆಸ್ಟ್ರೇಲಿಯಾದ ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ ಅವರ ತಂದೆ ಪೌಲ್ ಸ್ಟಾರ್ಕ್ ಅವರು ಮಂಗಳವಾರ (ಫೆಬ್ರವರಿ 24) ನಿಧನರಾಗಿದ್ದಾರೆ. ಕ್ರಿಕೆಟ್ ನ್ಯೂ ಸೌತ್ ವೇಲ್ಸ್ ಇದನ್ನು ಖಾತರಿಪಡಿಸಿದೆ. ಹೀಗಾಗಿ ಶೆಫೀಲ್ಡ್ ಶೀಲ್ಡ್ ಪಂದ್ಯವನ್ನು ಸ್ಟಾರ್ಕ್ ಮಿಸ್ ಮಾಡಿಕೊಳ್ಳಲಿದ್ದಾರೆ.
ಮಿಚೆಲ್ ಸ್ಟಾರ್ ತಂದೆ ಪೌಲ್ ಸ್ಟಾರ್ಕ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಆದ್ದರಿಂದ ಬ್ಯಾಂಕ್ಸ್‌ಟೌನ್ ಓವಲ್‌ನಲ್ಲಿ ಮಂಗಳವಾರ ನಡೆದಿದ್ದ ಶೆಫೀಲ್ಡ್ ಶೀಲ್ಡ್ ನಲ್ಲಿ ವಿಕ್ಟೋರಿಯಾ ವಿರುದ್ಧದ ಪಂದ್ಯದಿಂದ ಮಿಚೆಲ್ ಹೊರ ನಡೆದಿದ್ದರು.
ಅಸಲಿಗೆ ಸ್ಟಾರ್ ತಂದೆಗೆ ಕ್ಯಾನ್ಸರ್ ಇದ್ದಿದ್ದು ಕಳೆದ ಡಿಸೆಂಬರ್‌ನಲ್ಲಿ ಭಾರತ ವಿರುದ್ಧ ಟಿ20ಐ ಸರಣಿ ನಡೆಯುತ್ತಿದ್ದಾಗಲೇ ಕಂಡುಬಂದಿತ್ತು. ಇದೇ ಕಾರಣಕ್ಕಾಗಿ ಸ್ಟಾರ್ಕ್ ಅಂದು ಆಸ್ಟ್ರೇಲಿಯಾದ ಬಯೋಬಬಲ್ ತೆರೆದು ಕುಂಟುಂಬಸ್ಥರ ಜೊತೆಗಿದ್ದರು.
'ಜಗತ್ತಿನಲ್ಲಿ ಕುಟುಂಬಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ ಮತ್ತು ಈ ಸಂದರ್ಭದಲ್ಲಿ ಮಿಚೆಲ್ ಕೂಡ ಇದಕ್ಕೆ ಹೊರತಾಗಿಲ್ಲ,' ಎಂದು ಆಸ್ಟ್ರೇಲಿಯಾದ ಮುಖ್ಯಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ. ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಅಲ್ಲಿ ಟಿ20 ಸರಣಿ ಆಡುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications