Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೇವರಿಟ್ಸ್‌ ಎಂದ ಮಾತ್ರಕ್ಕೆ ಭಾರತ ಪ್ರಶಸ್ತಿ ಗೆದ್ದಂತಲ್ಲ: ಶಾಕಿಬ್‌!

Favourites tag wont win India or England the WC: Shakib

ಲಂಡನ್‌, ಮೇ 23: ಆತಿಥೇಯ ಇಂಗ್ಲೆಂಡ್‌ ಮತ್ತು ಮಾಜಿ ಚಾಂಪಿಯನ್ಸ್‌ ಟೀಮ್‌ ಇಂಡಿಯಾ ಈ ಬಾರಿಯ ವಿಶ್ವಕಪ್‌ ಗೆಲ್ಲುವ ಫೇವರಿಟ್‌ ತಂಡಗಳಾಗಿವೆ. ಆದರೆ, ಫೇವರಿಟ್ಸ್‌ ಎಂದ ಮಾತ್ರಕ್ಕೆ ಇಂಗ್ಲೆಂಡ್‌ ಮತ್ತು ಭಾರತ ಪ್ರಶಸ್ತಿ ಗೆದ್ದಾಗಿದೆ ಎಂದಲ್ಲ ಎಂದು ಬಾಂಗ್ಲಾದೇಶ ತಂಡದ ಆಲ್‌ರೌಂಡರ್‌ ಶಾಕಿಬ್‌ ಅಲ್‌ ಹಸನ್‌ ಕುಟುಕಿದ್ದಾರೆ

ಕ್ರಿಕೆಟ್‌ ಆಟವನ್ನು ಮೈದಾನದಲ್ಲಿ ಆಡಲಾಗುತ್ತದೆ ಪೇಪರ್‌ ಮೇಲೆ ಅಲ್ಲ ಎಂದಿರುವ ವಿಶ್ವದ ನಂ. 1 ಆಲ್‌ರೌಂಡರ್‌, ಮೇ 30ರಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆಯಲಿರುವ 12ನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಯಾವುದೇ ತಂಡ ಗೆಲ್ಲುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

"ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಫೇವರಿಟ್ಸ್‌ ಸರಿ. ಹೀಗೆಂದ ಮಾತ್ರಕ್ಕೆ ಆ ತಂಡಗಳು ಪ್ರಶಸ್ತಿ ಗೆದ್ದಾಗಿದೆ ಎಂದಲ್ಲ. ವಿಶ್ವಕಪ್‌ ಗೆಲ್ಲಲು ಕಠಿಣ ಹಾದಿಯಲ್ಲಿ ಮುನ್ನಡೆಯಬೇಕು. ಆಸ್ಟ್ರೇಲಿಯಾ ತಂಡ ಇತ್ತೀಚೆಗೆ ಉತ್ತಮ ಫಾರ್ಮ್‌ ಕಂಡುಕೊಂಡಿದೆ. ವೆಸ್ಟ್‌ ಇಂಡೀಸ್‌ ಕೂಡ ಲಯಕ್ಕೆ ಮರಳಿದೆ. ನಿಜ ಹೇಳುವುದಾದರೆ ದಿಟ್ಟ ಹೋರಾಟ ನಡೆಸಲು ಎಲ್ಲಾ ತಂಡಗಳು ಸಜ್ಜಾಗಿವೆ. ಯಾವ ತಂಡ ಉತ್ತಮ ಪ್ರದರ್ಶನ ನೀಡುತ್ತದೋ ಆ ತಂಡಕ್ಕೆ ಯಶಸ್ಸು ಕೈ ಹಿಡಿಯಲಿದೆ.,'' ಎಂದು 32 ವರ್ಷದ ಅನುಭವಿ ಆಲ್‌ರೌಂಡರ್‌ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಇತ್ತೀಚೆಗೆ ಬಿಡುಗಡೆ ಮಾಡಿದ ಐಸಿಸಿ ಏಕದಿನ ಕ್ರಿಕೆಟ್‌ ಆಲ್‌ರೌಂಡರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಬಾಂಗ್ಲಾದ ಆಲ್‌ರೌಂಡರ್‌ ಶಾಕಿಬ್‌, ಅಫಘಾನಿಸ್ತಾನದ ರಶೀದ್‌ ಖಾನ್‌ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದರು.

"ನಮ್ಮ ತಂಡಕ್ಕೆ ಪ್ರಶಸ್ತಿ ಗೆಲ್ಲುವ ಉತ್ತಮ ಅವಕಾಶವಿದೆ. ಟೂರ್ನಿಯ ಹೊಸ ಮಾದರಿಯನ್ನು ಗಮನದಲ್ಲಿರಿಸಿ ಸ್ಥಿರ ಪ್ರದರ್ಶನ ನೀಡುವ ಅಗತ್ಯವಿದೆ. ಇದು ಸಾಧ್ಯವಾದರೆ ನಾಕ್‌ಔಟ್‌ ಹಂತಕ್ಕೆ ಮುನ್ನಡೆಯಲಿದ್ದೇವೆ. ಬಳಿಕ ಮುಂದಿನ ಹಾದಿಯ ಬಗ್ಗೆ ಚಿಂತಿಸುತ್ತೇವೆ. ಈ ಬಾರಿಯ ವಿಶ್ವಕಪ್‌ನಲ್ಲಿ ನಮ್ಮ ತಂಡ ಉತ್ತಮ ಪ್ರದರ್ಶನ ನೀಡುತ್ತದೆ ಎಂಬ ವಿಶ್ವಾಸ ನನ್ನಲ್ಲಿದೆ,'' ಎಂದು ಬಾಂಗ್ಲಾ ತಂಡದ ಪ್ರದರ್ಶನ ಕುರಿತಾಗಿ ಶಾಕಿಬ್‌ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

Story first published: Thursday, May 23, 2019, 16:38 [IST]
Other articles published on May 23, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+