For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಜಸ್‌ಪ್ರೀತ್ ಬೂಮ್ರಾ ಐಪಿಎಲ್ ಪದಾರ್ಪಣೆಗೆ 8 ವರ್ಷ

Feels like just yesterday: Jasprit Bumrah on completing 8 years in IPL

ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ವೇಗಿ ಜಸ್‌ಪ್ರೀತ್ ಬೂಮ್ರಾ ಐಪಿಎಲ್‌ಗೆ ಪದಾರ್ಪಣೆ ಮಾಡಿ ಭಾನುವಾರಕ್ಕೆ 8 ವರ್ಷಗಳು ಆಗಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಸಂತಸವನ್ನು ಹಂಚಿಕೊಂಡಿದ್ದಾರೆ.

ಜಸ್‌ಪ್ರೀತ್ ಬೂಮ್ರಾ 2013ರ ಏಪ್ರಿಲ್ 4ರಂದು ಮೊದಲ ಬಾರಿಗೆ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಮುಂಬೈ ಇಂಡಿಯನ್ಸ್ ಪರವಾಗಿ ಕಣಕ್ಕಿಳಿದಿದ್ದ ಬೂಮ್ರಾ ಆರ್‌ಸಿಬಿ ವಿರುದ್ಧ ತನ್ನ ಚೊಚ್ಚಲ ಪಂದ್ಯವನ್ನು ಆಡಿದ್ದರು. ತನ್ನ ಮೊದಲ ವಿಕೆಟ್ ಆಗಿ ದೊಡ್ಡ ಬಲಿ ಪಡೆಯುವ ಮೂಲಕ ಬೂಮ್ರಾ ಸ್ಮರಣೀಯ ಆರಂಭವನ್ನು ಪಡೆದುಕೊಂಡರು.

ಜಸ್‌ಪ್ರೀತ್ ಬೂಮ್ರಾ ಎಸೆದ ಪ್ರಪ್ರಥಮ ಓವರ್‌ನಲ್ಲಿ ವಿರಾಟ್ ಕೊಹ್ಲಿ ಮೊದಲಿಗೆ ಸರರ ಮೂರು ಬೌಂಡರಿ ಬಾರಿಸಿದರು. ಆದರೆ ಅದೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವಲ್ಲಿ ನೂಮ್ರಾ ಯಶಸ್ವಿಯಾಗಿದ್ದರು. ಈ ಮೂಲಕ ತನ್ನ ಪ್ರಥಮ ಓವರ್‌ನಲ್ಲಿಯೇ ಬೂಮ್ರಾ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ದೊಡ್ಡ ಯಶಸ್ಸನ್ನು ತಂದಿತ್ತರು. ಕುತೂಹಲಕಾರಿ ಸಂಗತಿಯೆಂದರೆ ಐಪಿಎಲ್‌ನಲ್ಲಿ ಬೂಮ್ರಾ ಅವರ 100ನೇ ವಿಕೆಟ್ ಕೂಡ ವಿರಾಟ್ ಕೊಹ್ಲಿಯೇ ಆಗಿದ್ದಾರೆ.

ಜಸ್ಪ್ರೀತ್ ಬೂಮ್ರಾ ಟ್ವಿಟ್ಟರ್‌ನಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಪಡೆದ ಕ್ಷಣದ ಎರಡು ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ "8 ವರ್ಷಗಳ ಹಿಂದೆ, ಆದರೆ ನಿನ್ನೆ ನಡೆದಂತಿದೆ. ಮತ್ತೊಂದು ಬಾರಿ ವಿಕೆಟ್ ಕಬಳಿಸಲು ಕಾಯುವುದಕ್ಕೆ ಸಾಧ್ಯವಿಲ್ಲ" ಎಂದು ಬೂಮ್ರಾ ಬರೆದುಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುತ್ತಾ ಲಸಿತ್ ಮಲಿಂಗಾ ಅವರಂತಾ ದಿಗ್ಗಜ ಆಟಗಾರನ ಜೊತೆಗೆ ಬೌಲಿಂಗ್ ದಾಳಿಗೆ ಬೂಮ್ರಾ ಕಳೆದ 7 ವರ್ಷಗಳಲ್ಲಿ ಆಡಿದ್ದರು. ಇದು ಬೂಮ್ರಾ ಅವರ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು. ಈಗ ಔಆರತ ರಾಷ್ಟ್ರೀಯ ತಂಡಲ್ಲೂ ಬೂಮ್ರಾ ಪ್ರಮುಖ ಅಸ್ತ್ರವಾಗಿ ಗುರುತಿಸಿಕೊಂಡಿದ್ದಾರೆ.

Story first published: Monday, April 5, 2021, 10:45 [IST]
Other articles published on Apr 5, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+