ಅಡಿಲೇಡ್‌ನಲ್ಲಿ ಇತಿಹಾಸ ನಿರ್ಮಿಸಲಿದೆ ಈ ಮಹಿಳಾ ಅಂಪೈರ್ ಜೋಡಿ!

ಸಿಡ್ನಿ, ಫೆಬ್ರವರಿ 14: ಪುರುಷರ ಪ್ರಥಮದರ್ಜೆ ಪ್ರೀಮಿಯರ್ (ಕ್ಲಬ್) ಕ್ರಿಕೆಟ್ ಪಂದ್ಯದಲ್ಲಿ ಅಂಪೈರ್ ಜವಾಬ್ದಾರಿ ನಿರ್ವಹಿಸುವ ಮೂಲಕ ಎಲೋಯಿಸ್ ಶೆರಿಡನ್ ಮತ್ತು ಮೇರಿ ವಾಲ್ಡ್ರನ್ ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ. ಈ ವಾರಾಂತ್ಯದಲ್ಲಿ ಈ ಪಂದ್ಯ ನಡೆಯಲಿದೆ.
ಅಡಿಲೇಡ್ ಕ್ರಿಕೆಟ್ ಮೈದಾನದದಲ್ಲಿ ನಡೆಯಲಿರುವ 'ಟೀ ಟ್ರೀ ಗಲ್ಲಿ' ಮತ್ತು 'ನಾರ್ತರ್ನ್ ಡಿಸ್ಟ್ರಿಕ್ಟ್ಸ್' ತಂಡಗಳ ನಡುವಿನ ಪಂದ್ಯದ ವೇಳೆ ಶೆರಿಡನ್ ಮತ್ತು ವಾಲ್ಡ್ರನ್ ಅಂಪೈರ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಆಸ್ಟ್ರೇಲಿಯಾ ಉಪನಾಯಕ ಟ್ರಾವಿಸ್ ಹೆಡ್ ಕೂಡ ಈ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹಾಗೆ ನೋಡಿದರೆ ಶೆರಿಡನ್ ಪಾಲಿಗೆ ಇದು ಪುರುಷರ ಪಂದ್ಯದ ಚೊಚ್ಚಲ ಅಂಪೈರ್ ಕೆಲಸವಲ್ಲ. ಸುಮಾರು 18 ತಿಂಗಳ ಹಿಂದೆಷ್ಟೇ ಅವರು ಸೌತ್ ಆಸ್ಟ್ರೇಲಿಯನ್ ಪ್ರೀಮಿಯರ್ ಕ್ರಿಕೆಟ್ ಫಸ್ಟ್ ಗ್ರೇಡ್ ಪಂದ್ಯದಲ್ಲಿ ಕಾರ್ಯ ನಿರ್ವಹಿಸಿದ್ದರು. ಅದಕ್ಕೂ ಮುನ್ನ ನ್ಯೂ ಸೌತ್ ವೇಲ್ಸ್ ಅಂಪೈರ್ ಕ್ಲೇರ್ ಪೊಲೊಸಾಕ್ ಜೊತೆ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಅಂಪೈರ್ ಆಗಿ ಸೈ ಅನ್ನಿಸಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications