Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅರುಣ್ ಜೇಟ್ಲಿ ಸ್ಟೇಡಿಯಂನ ಸ್ಟ್ಯಾಂಡ್‌ವೊಂದಕ್ಕೆ ವಿರಾಟ್ ಕೊಹ್ಲಿ ಹೆಸರು

ಅರುಣ್ ಜೇಟ್ಲಿ ಸ್ಟೇಡಿಯಂನ ಸ್ಟ್ಯಾಂಡ್‌ವೊಂದಕ್ಕೆ ವಿರಾಟ್ ಕೊಹ್ಲಿ ಹೆಸರು | Oneindia Kannada
Feroz Shah Kotla Renamed Arun Jaitley Stadium, Stand Named After Virat Kohli

ನವದೆಹಲಿ, ಸೆಪ್ಟೆಂಬರ್ 12: ನವದೆಹಲಿಯ ಫಿರೋಜ್‌ ಷಾ ಕೋಟ್ಲಾ ಸ್ಟೇಡಿಯಂ ಹೆಸರನ್ನು ಇತ್ತೀಚೆಗೆ ಅರುಣ್ ಜೇಟ್ಲಿ ಹೆಸರಿಗೆ ಬದಲಿಸಲಾಗಿತ್ತು. ಅದೇ ಸ್ಟೇಡಿಯಂನ ಸ್ಟ್ಯಾಂಡ್‌ ಒಂದಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರು ಇಡಲಾಗಿದೆ. ಇನ್ನು ಸ್ಟೇಡಿಯಂನಲ್ಲಿ ಈ ಹೆಸರುಗಳು ಬದಲಾಗದೆ ಉಳಿಯಲಿವೆ.

ಫಿರೋಜ್‌ ಷಾ ಕೋಟ್ಲಾ ಮೈದಾನದ ಹೆಸರನ್ನು ಕಳೆದ ತಿಂಗಳು ಸಾವನ್ನಪ್ಪಿದ್ದ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಹೆಸರಿಗೆ ಬದಲಿಸಲಾಗಿತ್ತು. 1999ರಿಂದ 2013ರ ವರೆಗೆ ಡೆಲ್ಲಿ ಆ್ಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಶನ್‌ನ ಅಧ್ಯಕ್ಷರಾಗಿದ್ದ ಜೇಟ್ಲಿ ಹೆಸರನ್ನು ಗೌರವಾರ್ಥವಾಗಿ ಸ್ಟೇಡಿಯಂಗೆ ಇಡಲಾಗಿತ್ತು.

ಹೊಸದಾಗಿ ಹೆಸರಿಸಲಾಗಿರುವ ಅರುಣ್ ಜೇಟ್ಲಿ ಸ್ಟೇಡಿಯಂನ ಸ್ಟ್ಯಾಂಡ್‌ ಒಂದಕ್ಕೆ ಈಗ 'ವಿರಾಟ್ ಕೊಹ್ಲಿ ಪೆವಿಲಿಯನ್' ಎಂದು ನಾಮಕರಣ. ನವದೆಹಲಿಯ ಜವಾಹರ ಲಾಲ್ ನೆಹರೂ ಸ್ಟೇಡಿಯಂನ ವೇಟ್‌ ಲಿಫ್ಟಿಂಗ್ ಅಡಿಟೋರಿಯಂನಲ್ಲಿ ಈ ಕುರಿತ ಕಾರ್ಯಕ್ರಮ ಗುರುವಾರ (ಸೆಪ್ಟೆಂಬರ್ 12) ನಡೆಯಿತು.

'ಇವತ್ತು ನಾನು ಮನೆಯಿಂದ ಹೊರಡುವಾಗ ನನ್ನ ಕುಟುಂಬಸ್ಥರ ಜೊತೆ ಹೇಳಿದೆ; 2001ರಲ್ಲಿ ಆಟವೊಂದಕ್ಕೆ ಟಿಕೇಟ್ ಪಡೆದುಕೊಂಡಿದ್ದೆ ಮತ್ತು ಕ್ರಿಕೆಟಿಗರಲ್ಲಿ ಆಟೋಗ್ರಾಫ್‌ಗಾಗಿ ವಿನಂತಿಸಿಕೊಂಡಿದ್ದೆ. ಇವತ್ತು ಅದೇ ಸ್ಟೇಡಿಯಂನಲ್ಲಿ ನನ್ನ ಹೆಸರಿನಲ್ಲಿ ಪೆವಿಲಿಯನಲ್ಲಿ ಪೆವಿಲಿಯನ್ ಆಗಿದೆ. ಇದು ನನಗೆ ಬಹಳ ಹೆಮ್ಮೆಯ ವಿಚಾರ,' ಎಂದು ಕೊಹ್ಲಿ ಹೇಳಿದ್ದಾರೆ.

Story first published: Thursday, September 12, 2019, 21:33 [IST]
Other articles published on Sep 12, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+