2025ರಲ್ಲಿ ಟೀಮ್ ಇಂಡಿಯಾದ 'ಕ್ಯಾಚ್ ಕಿಂಗ್' ವಿರಾಟ್ ಕೊಹ್ಲಿ!
ಇನ್ನೇನು ಕೆಲವೇ ದಿನಗಳಲ್ಲಿ ಈ ವರ್ಷ ಮುಗಿದು ಹೊಸ ವರ್ಷ ಆರಂಭವಾಗುತ್ತದೆ. ಈ ವರ್ಷ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಮ್ಮ ಭಾರತೀಯ ತಂಡ ಮಾಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಕಮಾಲ್ ಪ್ರದರ್ಶನ ನೀಡಿರುವ ಆಟಗಾರರು ಚಿತ್ತ ಕದ್ದಿದ್ದಾರೆ. ಹೀಗೆಯೇ ಫೀಲ್ಡರ್‌ಗಳು ಸಹ ತಮ್ಮ ಕ್ಲಾಸಿಕ್ ಫೀಲ್ಡಿಂಗ್‌ನಿಂದ ಹೆಸರು ಮಾಡಿದ್ದಾರೆ. ಈ ವರ್ಷ ಭಾರತದ ಪರ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದವರು ಯಾರು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಭಾರತದ ಪರ ಅತಿ ಹೆಚ್ಚು ಕ್ಯಾಚ್‌ಗಳನ್ನು 2025ರಲ್ಲಿ ವಿರಾಟ್ ಕೊಹ್ಲಿ ಪಡೆದಿದ್ದಾರೆ. ಇವರು ಆಡಿದ 14 ಪಂದ್ಯಗಳಲ್ಲಿ 16 ಕ್ಯಾಚ್ ಪಡೆದಿದ್ದಾರೆ. ಇವರು ಭಾರತದ ಪರ ಸದ್ಯ ಏಕದಿನ ಫಾರ್ಮೆಟ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್‌ಗೆ ನಿವೃತ್ತಿ ಹೇಳಿದ್ದರು. ಅಲ್ಲದೆ 2024ರ ಟಿ20 ವಿಶ್ವಕಪ್ ಬಳಿಕ ವಿದಾಯ ಘೋಷಿಸಿದ್ದರು. ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅತಿ ಹೆಚ್ಚು ಕ್ಯಾಚ್ ಪಡೆದ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಹ್ಯಾರಿ ಬ್ರೂಕ್ ಅಗ್ರ ಸ್ಥಾನದಲ್ಲಿದ್ದಾರೆ. ಇವರು ಆಡಿದ 37 ಪಂದ್ಯಗಳಲ್ಲಿ 38 ಕ್ಯಾಚ್ ಪಡೆದಿದ್ದಾರೆ. ಇನ್ನು ವಿಶ್ವದಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಆಟಗಾರರ ಟಾಪ್ 10 ಪಟ್ಟಿಯಲ್ಲಿ ಯಾವುದೇ ಭಾರತೀಯ ಆಟಗಾರನಿಲ್ಲ.

ಟೀಮ್ ಇಂಡಿಯಾದ ಪರ ಅತಿ ಹೆಚ್ಚು ಕ್ಯಾಚ್ ಪಡೆದ ಕೀರ್ತಿ ಕೆಎಲ್ ರಾಹುಲ್ ಎರಡನೇ ಸ್ಥಾನದಲ್ಲಿದ್ದಾರೆ. ಇವರು ಆಡಿದ 24 ಪಂದ್ಯಗಳಲ್ಲಿ 15 ಕ್ಯಾಚ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಟೀಮ್ ಇಂಡಿಯಾ ಏಕದಿನ ಹಾಗೂ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಇದ್ದು, ಇವರು ಆಡಿದ 35 ಪಂದ್ಯಗಳಲ್ಲಿ 15 ಕ್ಯಾಚ್ ಪಡೆದಿದ್ದಾರೆ. ಟೀಮ್ ಇಂಡಿಯಾದ ಭರವಸೆಯ ಆಟಗಾರ ತಿಲಕ್ ವರ್ಮಾ ಆಡಿದ 21 ಪಂದ್ಯಗಳಲ್ಲಿ 13 ಕ್ಯಾಚ್ ಪಡೆದು ಬೀಗಿದ್ದಾರೆ.
2025ರಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಪ್ಲೇಯರ್ಸ್
ಹ್ಯಾರಿ ಬ್ರೂಕ್, 37 ಪಂದ್ಯ, 38 ಕ್ಯಾಚ್
ಐಡನ್ ಮಾರ್ಕ್ರಾಮ್, 27 ಪಂದ್ಯ, 35 ಕ್ಯಾಚ್
ಮಿಚೆಲ್ ಬ್ರಾಸವೆಲ್, 41 ಪಂದ್ಯ, 34 ಕ್ಯಾಚ್
ಡ್ಯಾರಿಲ್ ಮಿಚೆಲ್, 42 ಪಂದ್ಯ, 27 ಕ್ಯಾಚ್
ಸಲ್ಮಾನ್ ಅಘಾ, 56 ಪಂದ್ಯ, 27 ಕ್ಯಾಚ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications