Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup: ಆರಂಭಕ್ಕೂ ಮುನ್ನವೇ ವಿವಾದದ ಕಿಡಿ; ಸೋಫಿ ಸ್ಟೇಡಿಯಂನ 2,000 ಕಾರ್ಮಿಕರಿಂದ ಮುಷ್ಕರದ ಎಚ್ಚರಿಕೆ!

ಇನ್ನೇನು ಕೆಲವೇ ದಿನಗಳಲ್ಲಿ ಫಿಫಾ ವಿಶ್ವಕಪ್ ಆರಂಭವಾಗಲಿದೆ. ಈ ಮೆಗಾ ಟೂರ್ನಿಗೆ ಅಮೆರಿಕಾ, ಮೆಕ್ಸಿಕೋ ಹಾಗೂ ಕೆನಡಾ ದೇಶಗಳು ಸಂಪೂರ್ಣ ಸಿದ್ಧವಾಗಿವೆ. ಉತ್ತರ ಅಮೆರಿಕಾದಲ್ಲೂ ಈ ಟೂರ್ನಿಯ ಆಯೋಜನೆ ಸಿದ್ಧತೆಗಳು ಭರದಿಂದ ನಡೆಯುತ್ತಿರುವಾಗಲೇ, ವಿವಾದ ಕಿಡಿಯೊಂದು ಹೊತ್ತಿಕೊಂಡಿದೆ. ವಿವಾದಕ್ಕೆ ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಸೋಫಿ ಸ್ಟೇಡಿಯಂನಲ್ಲಿ ಕೆಲಸ ಮಾಡುವ ಸುಮಾರು 2,000 ಆತಿಥ್ಯ ವಲಯದ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಸೋಫಿ ಸ್ಟೇಡಿಯಂನಲ್ಲಿ ಫಿಫಾ ವಿಶ್ವಕಪ್‌ನ ಹಲವು ಪಂದ್ಯಗಳು ಆಯೋಜನೆ ಆಗಲಿವೆ. ಇದರಲ್ಲಿ ಅಮೆರಿಕ ಹಾಗ ಪರಾಗ್ವೆ ನಡುವಣ ಕಾದಾಟ ಸಹ ಸೇರಿದೆ.

FIFA World Cup

ಪ್ರತಿಭಟನೆಗೆ ಕಾರಣ ಏನು?

ಕಾರ್ಮಿಕರ ಈ ಆಕ್ರೋಶಕ್ಕೆ ಕೇವಲ ಕಡಿಮೆ ಸಂಬಳ ಮಾತ್ರ ಕಾರಣವಲ್ಲ, ಅದರ ಹಿಂದೆ ಬೇರೆ ಪ್ರಮುಖ ಕಾರಣಗಳು ಇವೆ. ಈ ಪ್ರತಿಭಟನೆಯಲ್ಲಿ ಬಾರ್ಟೆಂಡರ್‌ಗಳು, ಅಡುಗೆಯವರು, ಸರ್ವರ್‌ಗಳು ಮತ್ತು ಪಾತ್ರೆ ತೊಳೆಯುವವರು ಸೇರಿದ್ದಾರೆ. ಕ್ರೀಡಾಂಗಣದ ಆತಿಥ್ಯ ಸೇವೆ ನಿರ್ವಹಿಸುವ ಕಂಪನಿಯೊಂದಿಗೆ ನಡೆದ ಒಪ್ಪಂದದ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಕಾರ್ಮಿಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

1- ಅಮೆರಿಕದ ಪ್ರತಿಷ್ಠಿತ ಕ್ರೀಡಾಂಗಣದಲ್ಲಿ ಕೆಲಸ ಮಾಡುತ್ತಿದ್ದರೂ ತಮಗೆ ಬರುವ ಸಂಬಳದಲ್ಲಿ ಮನೆ ನಡೆಸಲು ಆಗುತ್ತಿಲ್ಲ. ಅಲ್ಲದೆ ಹೆಚ್ಚುತ್ತಿರುವ ವೆಚ್ಚದಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಮಿಕರ ಒಕ್ಕೂಟದ ಪ್ರತಿನಿಧಿಗಳು ದೂರಿದ್ದಾರೆ.

2- ವಿಶ್ವಕಪ್ ಪಂದ್ಯಗಳು ನಡೆಯುವ ಕ್ರೀಡಾಂಗಣಗಳ ಸುತ್ತ ವಲಸೆ ಅಧಿಕಾರಿಗಳು ದಾಳಿ ನಡೆಸಬಹುದು ಎಂಬ ಭೀತಿ ಕಾರ್ಮಿಕರಲ್ಲಿ ಬಹುವಾಗಿ ಕಾಡುತ್ತಿದೆ. ಉಪಗುತ್ತಿಗೆ ಪದ್ಧತಿಯನ್ನು ನಿಲ್ಲಿಸಬೇಕು ಮತ್ತು ವಲಸೆ ಅಧಿಕಾರಿಗಳ ದಾಳಿಯಿಂದ ತಮಗೆ ರಕ್ಷಣೆ ನೀಡಬೇಕು ಎಂದು ಕಾರ್ಮಿಕರ ಒಕ್ಕೂಟ ಒತ್ತಾಯಿಸುತ್ತಿದೆ.

ಕ್ರೀಡಾಂಗಣದ ನಿರ್ವಾಹಕರು ಹೇಳುವುದೇನು?

ಕ್ರೀಡಾಂಗಣದ ಆತಿಥ್ಯ ಸೇವೆ ನಿರ್ವಹಿಸುವ ಲೆಜೆಂಡ್ಸ್ ಗ್ಲೋಬಲ್ ತನ್ನ ಒಪ್ಪಂದಕ್ಕೆ ಬದ್ಧವಾಗಿದೆ ಎಂದು ತಿಳಿಸಿದೆ. ನಾವು ಒಕ್ಕೂಟದೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದೇವೆ ಮತ್ತು ಒಪ್ಪಂದಕ್ಕೆ ಬದ್ಧರಾಗಿದ್ದೇವೆ" ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ವಿಶ್ವಕಪ್ ಪಂದ್ಯಗಳಿಗೆ ಹಾಜರಾಗುವ ಬೆಂಬಲಿಗರಿಗೆ ಉತ್ತಮ ಗುಣಮಟ್ಟದ ಅನುಭವವನ್ನು ಪಡೆಯಲಿದ್ದಾರೆ ಎಂದು ಕಂಪನಿ ತಿಳಿಸಿದೆ.

ಮುಷ್ಕರ ನಡೆಸುವ ಬಗ್ಗೆ ಇನ್ನೂ ದೃಢಪಟ್ಟಿಲ್ಲ. ಆದರೆ ಮಾತುಕತೆಗಳು ಸ್ಥಗಿತಗೊಂಡರೆ ಜೂನ್ 13 ರಿಂದ ಕೆಲಸದಿಂದ ಹೊರನಡೆಯುವುದಾಗಿ ಕಾರ್ಮಿಕರು ತಿಳಿಸಿದ್ದಾರೆ. ಲಕ್ಷಾಂತರ ಬೆಂಬಲಿಗರನ್ನು ಆಕರ್ಷಿಸುವ ನಿರೀಕ್ಷೆಯಿರುವ ಪಂದ್ಯಾವಳಿಗೆ ಮುಂಚಿತವಾಗಿ ಅನಗತ್ಯ ಗೊಂದಲವನ್ನು ಸೃಷ್ಟಿಯಾಗಿದೆ.

ಫಿಫಾ 2026 ವಿಶ್ವಕಪ್‌ ನಡೆಯುವುದು ಯಾವಾಗ?

ವಿಶ್ವಕಪ್ ಜೂನ್ 11 ಮತ್ತು ಜುಲೈ 19 ರ ವರೆಗೆ ನಡೆಯಲಿವೆ.

ಎಷ್ಟು ತಂಡಗಳು ಭಾಗವಹಿಸುತ್ತವೆ?

48 ದೇಶಗಳು ಈ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿವೆ.

ಎಷ್ಟು ಪಂದ್ಯಗಳು ನಡೆಯುತ್ತಿವೆ?

ಲೀಗ್‌, ಪ್ರಿ ಕ್ವಾರ್ಟರ್ ಫೈನಲ್‌, ಕ್ವಾರ್ಟರ್ ಫೈನಲ್‌, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ಸೇರಿದಂತೆ ಒಟ್ಟು ದಾಖಲೆಯ 104 ಪಂದ್ಯ ನಡೆಯಲಿವೆ.

Story first published: Sunday, June 7, 2026, 12:45 [IST]
Other articles published on Jun 7, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+