ಇತಿಹಾಸದಲ್ಲೇ ಅತ್ಯಂತ ದುಬಾರಿ ಫಿಫಾ ವಿಶ್ವಕಪ್; 6,240 ಕೋಟಿ ರೂ. ಬಹುಮಾನದ ಮೊತ್ತ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ನವದೆಹಲಿ: ವಿಶ್ವಕಪ್ ಫುಟ್ಬಾಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಮೆಗಾ ಈವೆಂಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ವಿಶ್ವದ ಗಮನ ಸೆಳೆಯಲು 48 ದೇಶಗಳು ಸಿದ್ಧವಾಗಿವೆ. ಈ ಬಾರಿಯ ವಿಶ್ವಕಪ್ ಫುಟ್ಬಾಲ್‌ನ್ನು ಅಮೆರಿಕ, ಕೆನಡಾ, ಮೆಕ್ಸಿಕೋ ಆಯೋಜಿಸುತ್ತಿವೆ. ಈ ಬಾರಿಯೂ ಎಲ್ಲರ ಕಣ್ಣುಗಳು ಸ್ಟಾರ್ ಆಟಗಾರರ ಮೇಲೆ ನೆಟ್ಟಿರಲಿವೆ. ತಮ್ಮ ತಮ್ಮ ನೆಚ್ಚಿನ ತಂಡಗಳನ್ನು ಹುರಿದುಂಬಿಸಲು ಅಭಿಮಾನಿಗಳು ಸಿದ್ಧರಾಗಿದ್ಧಾರೆ.
ಫಿಫಾ ವಿಶ್ವಕಪ್ ಎಂದರೆ ಈ ಟೂರ್ನಿಯಲ್ಲಿ ಹಣದ ಹೊಳೆಯನ್ನು ಹರಿಸಲಾಗುತ್ತದೆ. ಈ ಬಾರಿಯೂ ಫಿಫಾ ಈ ಟೂರ್ನಿಗೆ ದೊಡ್ಡ ಮೊತ್ತವನ್ನು ತೆಗೆದಿಟ್ಟಿದೆ. ಹಾಗಿದ್ದರೆ ಈ ಬಾರಿಯ ಫುಟ್ಬಾಲ್ ವಿಶ್ವಕಪ್‌ನ ಬಹುಮಾನದ ಮೊತ್ತವು ದಾಖಲೆ ಮುರಿಯಲಿದೆ. ಈ ಬಗ್ಗೆ ವರದಿ ಇಲ್ಲಿದೆ.

ಕಳೆದ ಬಾರಿಗಿಂತಲೂ ಈ ಬಾರಿಯ ವಿಶ್ವಕಪ್ ಬಲು ದುಬಾರಿ
ಕತಾರ್‌ನಲ್ಲಿ 2022ರಲ್ಲಿ ಫಿಫಾ ವಿಶ್ವಕಪ್ ಆಯೋಜಿಸಲಾಗಿತ್ತು. ಕಳೆದ ವರ್ಷದ ಟೂರ್ನಿಯಲ್ಲಿ ಒಟ್ಟು ಬಹುಮಾನದ ಮೊತ್ತ $440 ಮಿಲಿಯನ್ ಆಗಿತ್ತು. ಈ ಬಾರಿ, ಫಿಫಾ ವಿಶ್ವಕಪ್ ಬಹುಮಾನದ ಮೊತ್ತ $655 ಮಿಲಿಯನ್ ಆಗಿದೆ. ಅಂದರೆ ಭಾರತದ ರೂಪಾಯಿಗೆ ಹೋಲಿಸಿದರೆ, ಇದು ಸರಿಸುಮಾರು 6240 ಕೋಟಿ ರೂ.ಗೆ ಸಮಾನವಾಗಿದೆ.
ವಿಜೇತ ತಂಡಕ್ಕೆ ಸಿಗುವ ಹಣವೆಷ್ಟು?
ಈ ಬಾರಿ ಫಿಫಾ ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ತಂಡಕ್ಕೆ $50 ಮಿಲಿಯನ್ ನೀಡಲಾಗುತ್ತದೆ. ಅಂದರೆ ಭಾರತೀಯ ರೂಪಾಯಿಗೆ ಹೋಲಿಸಿದರೆ, ಇದು 476 ಕೋಟಿ ಆಗುತ್ತದೆ. ಕಳೆದ ಬಾರಿ ವಿಜೇತ ತಂಡ ಅರ್ಜೆಂಟೀನಾ $42 ಮಿಲಿಯನ್ ಪಡೆದಿತ್ತು.
ಅರ್ಹತೆ ಪಡೆದ ತಂಡಗಳಿಗೆ ಸಿಗುವ ಹಣವೆಷ್ಟು?
ಫಿಫಾ ವಿಶ್ವಕಪ್‌ನಲ್ಲಿ ಅರ್ಹತೆ ಪಡೆದರೆ ಜಾಕ್‌ಪಾಟ್ ಹೊಡೆಯುತ್ತದೆ. ಈ ಮೆಗಾ ಟೂರ್ನಿಗೆ ಅರ್ಹತೆ ಪಡೆಯುವುದೇ ದೊಡ್ಡ ಪ್ರತಿಷ್ಠೆಯಾಗಿದೆ. ಈ ಟೂರ್ನಿಗೆ ಅರ್ಹತೆ ಪಡೆದ ತಂಡಗಳು $10 ಮಿಲಿಯನ್ ಪಡೆಯುತ್ತದೆ. ಇದರ ನಂತರ, ತಯಾರಿಗಾಗಿ $2.5 ಮಿಲಿಯನ್ ನೀಡಲಾಗುತ್ತದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ 48 ತಂಡಗಳಿಗೆ ಒಟ್ಟು $871 ಮಿಲಿಯನ್ ಅಥವಾ ಸರಿಸುಮಾರು ರೂ.8299 ಕೋಟಿಯನ್ನು ವಿತರಿಸಲಾಗುತ್ತದೆ.
ಕ್ರಿಕೆಟ್ ವಿಶ್ವಕಪ್‌ಗೆ ಹೋಲಿಸಿದರೆ ತುಂಬಾ ದುಬಾರಿ
ಭಾರತ 2023ರಲ್ಲಿ ಏಕದಿನ ವಿಶ್ವಕಪ್ ಆಯೋಜಿಸಿತ್ತು. ಈ ಟೂರ್ನಿಯ ಒಟ್ಟು ಬಹುಮಾನದ ಮೊತ್ತ $10 ಮಿಲಿಯನ್ ಆಗಿತ್ತು. ಈ ಮೊತ್ತವು ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದ ತಂಡಗಳಿಗಿಂತಲೂ ಕಡಿಮೆಯಾಗುತ್ತದೆ. ಕಳೆದ ಬಾರಿ ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಆಸ್ಟ್ರೇಲಿಯಾ ಅಲಂಕರಿಸಿತ್ತು. ಈ ತಂಡ $4 ಮಿಲಿಯನ್ ಮತ್ತು ರನ್ನರ್-ಅಪ್ ಭಾರತ $2 ಮಿಲಿಯನ್ ಪಡೆದುಕೊಂಡಿತ್ತು.
ಫಿಫಾ ವಿಶ್ವಕಪ್‌ನಲ್ಲಿ ನೀಡಲಾಗುವ ಬಹುಮಾನ ಮೊತ್ತ
| ಸ್ಥಾನ | ಬಹುಮಾನದ ಮೊತ್ತ |
|---|---|
| ವಿಜೇತರು | $50 ಮಿಲಿಯನ್ |
| ರನ್ನರ್ಸ್-ಅಪ್ | $33 ಮಿಲಿಯನ್ |
| ಮೂರನೇ ಸ್ಥಾನ | $29 ಮಿಲಿಯನ್ |
| ನಾಲ್ಕನೇ ಸ್ಥಾನ | $27 ಮಿಲಿಯನ್ |
| ಕ್ವಾರ್ಟರ್ ಫೈನಲ್ ತಲುಪಿದವರು (5 ರಿಂದ 8 ನೇ ಸ್ಥಾನ) | ಪ್ರತಿಯೊಬ್ಬರಿಗೂ $19 ಮಿಲಿಯನ್ |
| ರೌಂಡ್ ಆಫ್ 16 ತಲುಪಿದವರು (9 ರಿಂದ 16 ನೇ ಸ್ಥಾನ) | ಪ್ರತಿಯೊಬ್ಬರಿಗೂ $15 ಮಿಲಿಯನ್ |
| ರೌಂಡ್ ಆಫ್ 32 ತಲುಪಿದವರು (17 ರಿಂದ 32 ನೇ ಸ್ಥಾನ) | ಪ್ರತಿಯೊಬ್ಬರಿಗೂ $11 ಮಿಲಿಯನ್ |
| ಗ್ರೂಪ್ ಹಂತದಿಂದ ಹೊರಬಿದ್ದವರು (33 ರಿಂದ 48 ನೇ ಸ್ಥಾನ) | ಪ್ರತಿಯೊಬ್ಬರಿಗೂ $10 ಮಿಲಿಯನ್ |
| ಸಿದ್ಧತಾ ಅನುದಾನ | ಪ್ರತಿ ತಂಡಕ್ಕೆ $2.5 ಮಿಲಿಯನ್ |
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications