Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup 2026: ಎಂಬಪ್ಪೆ ಮಿಂಚು; ಸೆಮಿಫೈನಲ್ ಪ್ರವೇಶಿಸಿದ ಫ್ರಾನ್ಸ್‌

ಬೋಸ್ಟನ್: ಜಿದ್ದಾಜಿದ್ದಿನಿಂದ ಕೂಡಿದ್ದ ಫಿಫಾ ವಿಶ್ವಕಪ್‌ ಕ್ವಾರ್ಟರ್‍‌ ಫೈನಲ್‌ ಪಂದ್ಯದಲ್ಲಿ ಫ್ರಾನ್ಸ್‌ 2-0 ಗೋಲುಗಳಿಂದ ಮೊರಾಕೊ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಟೂರ್ನಿಯ ಸೆಮಿಫೈನಲ್‌ ಹಂತಕ್ಕೆ ಪ್ರವೇಶ ಪಡೆದಿದೆ.

ಶುಕ್ರವಾರ ಬೋಸ್ಟನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡದ ಆಟಗಾರರು ಗೋಲು ಬಾರಿಸಿ ಮುನ್ನಡೆ ಸಾಧಿಸುವ ಲೆಕ್ಕಾಚಾರದೊಂದಿಗೆ ಕಣಕ್ಕೆ ಇಳಿದರು. ಆದರೆ ಎರಡೂ ತಂಡಗಳ ರಕ್ಷಣಾ ಆಟಗಾರರ ಅಮೋಘ ಪ್ರದರ್ಶನದ ಬಲದಿಂದ ಪಂದ್ಯ ರೋಚಕತೆ ಹೆಚ್ಚಿಸಿತ್ತು. ಫ್ರಾನ್ಸ್‌ ಸಹ ಈ ವೇಳೆ ಹಲವು ಅವಕಾಶಗಳನ್ನು ಕೈ ಚೆಲ್ಲಿತು. ಮೊರಾಕೊ ತಂಡದ ಆಟಗಾರರು ಸಹ ಈ ವೇಳೆ ಭರ್ಜರಿ ಪ್ರದರ್ಶನ ನೀಡಿತು. ಮೊರಾಕೊ ಸಹ ಗೋಲು ಬಾರಿಸುವ ಯೋಜನೆ ಫಲಿಸಲಿಲ್ಲ.

FIFA World Cup 2026

ಮೊದಲ ಅರ್ಧದಲ್ಲಿ ಫ್ರಾನ್ಸ್‌ ತಂಡಕ್ಕೆ ಪೆನಾಲ್ಟಿ ಅವಕಾಶ ಲಭಿಸಿತು. ಆದರೆ ಸ್ಟಾರ್ ಆಟಗಾರ ಕೈಲಿಯನ್ ಎಂಬಪ್ಪೆ ಅವರು ಗೋಲು ಬಾರಿಸುವಲ್ಲಿ ವಿಫಲರಾದರು. ಈ ಅವಧಿಯಲ್ಲಿ ಉಭಯ ತಂಡಗಳು ಗೋಲು ಬಾರಿಸುವಲ್ಲಿ ವಿಫಲವಾದವು. ಪರಿಣಾಮ ಪಂದ್ಯದ ರೋಚಕತೆ ಎರಡನೇ ಅರ್ಧಕ್ಕೆ ಶಿಫ್ಟ್ ಆಯಿತು.

ಎರಡನೇ ಅರ್ಧದಲ್ಲಿ ಫ್ರಾನ್ಸ್‌ ಚೆಂಡಿನ ಮೇಲೆ ಹಿಡಿತ ಸಾಧಿಸಿತು. ಈ ಅವಧಿಯಲ್ಲಿ ಫ್ರಾನ್ಸ್‌ ಸಿಕ್ಕ ಅವಕಾಶವನ್ನು ಬಳಸಿಕೊಂಡು ತಂಡದ ಮುನ್ನಡೆಗೆ ಸ್ಟಾರ್ ಆಟಗಾರ ಎಂಬಪ್ಪೆ ನೆರವಾದರು. ಇವರಿಗೆ 60ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಎಂಬಪ್ಪೆ ಅಬ್ಬರಿಸಿದರು. ಮೊರಾಕೊ ತಂಡದ ರಕ್ಷಣಾ ಆಟಗಾರರನ್ನು ವಂಚಿಸಿ ಮೊದಲ ಗೋಲಿನ ನಗೆ ಬೀರಿತು. ಪರಿಣಾಮ ಫ್ರಾನ್ಸ್‌ 1-0 ಮುನ್ನಡೆ ಸಾಧಿಸಿತು.

ಎಂಬಪ್ಪೆ ದಾಖಲಿಸಿದ ಮೊದಲ ಗೋಲು ದಾಖಲಿಸಿದ್ದ ಫ್ರಾನ್ಸ್‌ ತನ್ನ ಗೋಲುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ಪಂದ್ಯದ 66ನೇ ನಿಮಿಷದಲ್ಲಿ ಔಸ್ಮಾನೆ ಡೆಂಬೆಲೆ ಸೊಗಸಾದ ಫೀಲ್ಡ್‌ ಗೋಲು ಬಾರಿಸಿ ತಂಡದ ಮುನ್ನಡೆಯನ್ನು ಮತ್ತಷ್ಟು ಹಿಗ್ಗಿಸಿದರು. ಪರಿಣಾಮ ಫ್ರಾನ್ಸ್‌ 2-0 ಮುನ್ನಡೆ ಸಾಧಿಸಿತು.

FIFA World Cup 2026

ಕೊನೆಯ ಕ್ಷಣದವರೆಗೂ ಗೋಲು ಬಾರಿಸಿ ಫ್ರಾನ್ಸ್ ತಂಡಕ್ಕೆ ಶಾಕ್ ನೀಡುವ ಯೋಜನೆಯಲ್ಲಿದ್ದ ಮೊರಾಕೊ ತಂಡದ ಆಸೆ ಫಲಿಸಲಿಲ್ಲ. ಪರಿಣಾಮ ಮೊರಾಕೊ ಕ್ವಾರ್ಟರ್‌ ಫೈನಲ್‌ನಲ್ಲೇ ಟೂರ್ನಿಗೆ ಗುಡ್‌ ಬಾಯ್‌ ಹೇಳಿತು.

ಎಂಬಪ್ಪೆ ಸಾಧನೆ

ಫಿಫಾ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಫ್ರಾನ್ಸ್‌ ತಂಡದ ಸ್ಟಾರ್ ಆಟಗಾರ ಕೈಲಿಯನ್ ಎಂಬಪ್ಪೆ ಟೂರ್ನಿಯಲ್ಲಿ ಅಬ್ಬರಿಸುತ್ತಿದ್ದಾರೆ. ಇವರು ಈ ಟೂರ್ನಿಯಲ್ಲಿ ಸದ್ಯ 8 ಗೋಲು ಗಳನ್ನು ಬಾರಿಸಿದ್ದು ಅಧಿಕ ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಲಿಯೋನೆಲ್‌ ಮೆಸ್ಸಿ ಅವರೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಅಲ್ಲದೆ ಗೋಲ್ಡನ್ ಬೂಟ್‌ ಮೇಲೆ ಕಣ್ಣು ನೆಟ್ಟಿದ್ದಾರೆ. ಕತಾರ್‌ನಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ನಲ್ಲಿ ಈಗಾಗಲೇ ಎಂಬಪ್ಪೆ ಅವರು ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಗೆದ್ದಿದ್ದರು. ಈಗ ಮತ್ತೊಮ್ಮೆ ಈ ಸಾಧನೆ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.

Story first published: Friday, July 10, 2026, 10:46 [IST]
Other articles published on Jul 10, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+