ಕೊನೆಯ ಐದು ನಿಮಿಷದಲ್ಲಿ ಅಬ್ಬರಿಸಿದ ಬೆಲ್ಜಿಯಂಗೆ ಪೆನಾಲ್ಟಿ ವರ
ಫಿಫಾ ವಿಶ್ವಕಪ್ ರೋಚಕತೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಈಗ ಮೆಗಾ ಟೂರ್ನಿಯಲ್ಲಿ ರೌಂಡ್ ಆಫ್ 32 ಪಂದ್ಯಗಳು ನಡೆಯುತ್ತಿವೆ. ಈ ಪಂದ್ಯಗಳು ನಿಜಕ್ಕೂ ಅಭಿಮಾನಿಗಳನ್ನು ರಂಜಿಸುತ್ತಿವೆ. ಇಂಗ್ಲೆಂಡ್ ತಂಡ 2-1 ಗೋಲುಗಳಿಂದ ಡಿಆರ್ ಕಾಂಗೊ ತಂಡವನ್ನು ಮಣಿಸಿ ಮುನ್ನಡೆ ಸಾಧಿಸಿತು. ಈ ಪಂದ್ಯದಲ್ಲಿ ಕೇನ್ ಅಬ್ಬರಿಸಿ ತಂಡಕ್ಕೆ ಮುನ್ನಡೆ ತಂದು ಕೊಟ್ಟರು. ಇದೇ ರೀತಿಯ ಆಟವನ್ನು ಬೆಲ್ಜಿಯಂ ಹಾಗೂ ಸೆನೆಗಲ್ ನಡುವಣ ಪಂದ್ಯದಲ್ಲೂ ಕಂಡು ಬಂದಿತು.
ಆರಂಭದಿಂದಲೂ ಸೆನೆಗಲ್ ಗುರುವಾರ ನಡೆದ ಪಂದ್ಯದಲ್ಲಿ ಮೇಲುಗೈ ಸಾಧಿಸಿತ್ತು. ಆದರೆ ಕೊನೆಯ ಕ್ಷಣದಲ್ಲಿ ಬೆಲ್ಜಿಯಂ ನೀಡಿದ ಕೆಚ್ಚೆದೆಯ ಹೋರಾಟ ಹಾಗೂ ವಿವಾದಾತ್ಮಕ ಪೆನಾಲ್ಟಿ ತಂಡಕ್ಕೆ ವರವಾಯಿತು. ಪಂದ್ಯದ ಆರಂಭದಿಂದ 86ನೇ ನಿಮಿಷದ ವರೆಗೂ ಸೆನೆಗಲ್ ಆಟಗಾರರ ಮುಖದಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ ಕೊನೆಯ ಕ್ಷಣದಲ್ಲಿ ಬೆಲ್ಜಿಯಂ ಆಟಗಾರರು ಆಡಿದ ಧಾಟಿಗೆ ಸೆನೆಗಲ್ ಸ್ಟನ್ ಆಯಿತು.

ಮೊದಲ ಅರ್ಧದಲ್ಲಿ ಸೆನೆಗಲ್ ಕೆಚ್ಚೆದೆಯ ಆಟವನ್ನು ಆಡಿ ಅವಕಾಶಗಳನ್ನು ಸೃಷ್ಟಿಸಿಕೊಂಡಿತು. ಆದರೆ ಫಲ ಲಭಿಸಲಿಲ್ಲ. 24ನೇ ನಿಮಿಷದಲ್ಲಿ ಇಸ್ಮಾಯಿಲಾ ಸಾರ್ ಅವರು ಅಮೋಘ ಪ್ರದರ್ಶನ ನೀಡಿ ಗೋಲು ಬಾರಿಸಲು ಮುಂದಾದರು. ಆದರೆ ಬೆಲ್ಜಿಯಂ ಗೋಲಿ ಇದನ್ನು ತಡೆಯುವಲ್ಲಿ ಸಫಲರಾದರು. ಆದರೆ ಗೋಲು ಪೆಟ್ಟಿಗೆಯ ಪಕ್ಕದಲ್ಲಿಯೇ ನಿಂತಿದ್ದ ಹಬೀಬ್ ದಿಯಾರಾ ಈ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸಿದರು.
ಸೆನೆಗಲ್ ಬಿಗಿ ಹಿಡಿತ
ಎರಡನೇ ಅರ್ಧದಲ್ಲಿ ಸೆನೆಗಲ್ ತನ್ನ ಆಟಕ್ಕೆ ಚುರುಕು ಮುಟ್ಟಿಸಿತು. ಈ ಅವಧಿಯಲ್ಲಿ ಸೆನೆಗಲ್ 51ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಇಸ್ಮಾಯಿಲಾ ಸಾರ್ ಬಳಸಿಕೊಂಡು ಬೆಲ್ಜಿಯಂ ಗೋಲ್ ಕೀಪರ್ ಅವರನ್ನು ವಂಚಿಸಿ ತಂಡದ ಮುನ್ನಡೆಯನ್ನು ಹೆಚ್ಚಿಸಿದರು. ಸೆನೆಗಲ್ 2-0 ಮುನ್ನಡೆ ಸಾಧಿಸಿತು.
ಬೆಲ್ಜಿಯಂ ಕಮಾಲ್
ಪಂದ್ಯ ಮುಗಿಯಲು ಕೇವಲ 4 ನಿಮಿಷಗಳಿದ್ದಾಗ ಬೆಲ್ಜಿಯಂನ ಡಿಫೆಂಡರ್ ಥಾಮಸ್ ಮುನಿಯರ್ ಅವರು ಬಲಗಡೆಯಿಂದ ಸೆನೆಗಲ್‌ನ ಪೆನಾಲ್ಟಿ ಬಾಕ್ಸ್ ಕಡೆಗೆ ಪಾಸ್ ನೀಡಿದರು. ಆ ಸಮಯದಲ್ಲಿ ಚುರುಕಾಗಿ ಸ್ಪಂದಿಸಿದ ಲುಕಾಕು, ಸೆನೆಗಲ್ ಡಿಫೆಂಡರ್‌ಗಳ ಕಣ್ಣುತಪ್ಪಿಸಿ ಗೋಲ್‌ಪೋಸ್ಟ್‌ನ ಸಮೀಪಕ್ಕೆ ಧಾವಿಸಿ, ಗೋಲುಪೆಟ್ಟಿಗೆಯೊಳಗೆ ರೊಮೆಲೊ ಲುಕಾಕ್ ತಳ್ಳಿದರು. ಬೆಲ್ಜಿಯಂ ಮೊದಲ ಗೋಲಿನ ನಗೆ ಬೀರಿತು.

ಇದೇ ಅವಧಿಯಲ್ಲಿ ಬೆಲ್ಜಿಯಂ ಪರ ಯೂರಿ ಟೈಲೆಮನ್ಸ್ ಮತ್ತೊಂದು ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಅಬ್ಬರಿಸಿದರು. ಪರಿಣಾಮ ಬೆಲ್ಜಿಯಂ ಪಂದ್ಯದಲ್ಲಿ ಸಮಬಲ ಸಾಧಿಸಿತು.
ನಿಗದಿತ ಸಮಯದಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಈ ಪಂದ್ಯವನ್ನು ಪೆನಾಲ್ಟಿ ಶೂಟೌಟ್‌ನತ್ತ ಮುಖ ಮಾಡುತ್ತದೆ ಎಂದು ಎಲ್ಲರು ಭಾವಿಸಿದ್ದರು. ಆದರೆ 122ನೇ ನಿಮಿಷದಲ್ಲಿ ದೊಡ್ಡ ಹೈಡ್ರಾಮಾ ನಡೆಯಿತು. ಸೆನೆಗಲ್‌ನ ಆಟಗಾರ ಲಮೈನ್ ಕಮಾರಾ ಅವರು ಬೆಲ್ಜಿಯಂ ನಾಯಕ ಯೂರಿ ಟೀಲೆಮನ್ಸ್ ಅವರ ಹಿಮ್ಮಡಿಗೆ ಒದ್ದಿದ್ದರು ಎಂಬ ಆಕ್ಷೇಪ ಕೇಳಿಬಂತು. ಮೈದಾನದ ರೆಫರಿ ಮೊದಲು ಇದನ್ನು ಫೌಲ್ ಎಂದು ಪರಿಗಣಿಸಿರಲಿಲ್ಲ. ಆದರೆ, ವಿಡಿಯೋ ಅಸಿಸ್ಟೆಂಟ್ ರೆಫರಿ (ವಿಎಆರ್) ಸೂಚನೆಯ ಮೇರೆಗೆ ರೆಫರಿ ಮೈದಾನದ ಪಕ್ಕದಲ್ಲಿದ್ದ ಮಾನಿಟರ್ ಪರಿಶೀಲಿಸಿದರು. ಬಳಿಕ ರೆಫರಿ ಬೆಲ್ಜಿಯಂಗೆ ಪೆನಾಲ್ಟಿ ಅವಕಾಶ ನೀಡಿದರು. ಇದು ಬೆಲ್ಜಿಯಂಗೆ ವರವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications