FIFA World Cup: ಭಾರತ ಅರ್ಹತೆ ಪಡೆದಿಲ್ಲ, ಆದರೆ ಭಾರತೀಯ ಮೂಲದ ಆಟಗಾರರು ಕಣಕ್ಕೆ
ಇನ್ನೇನು ಕೆಲವೇ ದಿನಗಳಲ್ಲಿ ಫಿಫಾ ವಿಶ್ವಕಪ್ ಆರಂಭವಾಗಲಿದೆ. ಈ ಬಾರಿಯ ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ ಭಾರತ ಅರ್ಹತೆ ಪಡೆಯುವಲ್ಲಿ ವಿಫಲರಾಗಿದೆ. ಭಾರತ 1950 ರ ಬ್ರೆಜಿಲ್ ವಿಶ್ವಕಪ್‌ಗೆ ಅರ್ಹತೆ ಪಡೆದಿತ್ತು. ಆದರೆ ಭಾರತೀಯ ತಂಡ ಫುಟ್ಬಾಲ್ ವಿಶ್ವಕಪ್ ಆಡಲು ಹೋಗಲಿಲ್ಲ ಮತ್ತು ಇದರ ನಂತರ ಭಾರತೀಯ ತಂಡವು ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಭಾರತೀಯ ಮೂಲದ ಆಟಗಾರರು ಬೇರೆ ಬೇರೆ ದೇಶಗಳ ಪರ ಕಣಕ್ಕೆ ಇಳಿಯಲಿದ್ದಾರೆ. ಭಾರತೀಯ ಮೂಲದ ನಾಲ್ವರು ಆಟಗಾರರು ಬೇರೆ ಬೇರೆ ದೇಶಗಳ ಕಣಕ್ಕೆ ಇಳಿಯಲಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಸರಪ್ರೀತ್ ಸಿಂಗ್, ಸ್ಯಾಮ್ಯುವೆಲ್ ಮುತ್ತುಸ್ವಾಮಿ, ನಿಶಾನ್ ವೇಲುಪಿಳ್ಳೈ ಮತ್ತು ತಹಸೀನ್ ಮೊಹಮ್ಮದ್ ಅವರು ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಬೇರೆ ಬೇರೆ ದೇಶಗಳ ಪರ ಕಣಕ್ಕೆ ಇಳಿಯಲಿದ್ದಾರೆ.

ತಹ್ಸೀನ್ ಮೊಹಮ್ಮದ್ ಜಮ್ಶೆಡ್
19 ವರ್ಷದ ಕೇರಳ ಮೂಲದ ತಹ್ಸೀನ್ ಜಮ್ಶೆಡ್ ಅವರನ್ನು ಕತಾರ್ ತಂಡದಲ್ಲಿ ಹೆಸರಿಸಿದಾಗ ಭಾರತದ ಫುಟ್‌ಬಾಲ್ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ತಹ್ಸೀನ್ ಕೇರಳದ ಕಣ್ಣೂರಿನಲ್ಲಿ ಜನಿಸಿದರು. ಅವರ ಪೋಷಕರು ಕೇರಳದ ಮಲಯಾಳಿ ಕುಟುಂಬದವರು. ತಹ್ಸೀನ್ ಅವರ ತಂದೆ ಕತಾರ್‌ನ ಅಂಡರ್-17 ಮತ್ತು ಅಂಡರ್-19 ತಂಡಗಳಿಗೆ ಫುಟ್ಬಾಲ್ ಆಡಿದ್ದಾರೆ. ಇದು ತಹ್ಸೀನ್ ಅವರ ಫುಟ್ಬಾಲ್ ಪ್ರೀತಿ ಬೆಳವಣಿಗೆಗೆ ಪೂರಕವಾಯಿತು. ಇವರು ಫುಟ್ಬಾಲ್ ಮೈದಾನದಲ್ಲಿ ಫಾರ್ವಡ್ ಕ್ಷೇತ್ರದಲ್ಲಿ ಹೆಸರು ಮಾಡುತ್ತಿದ್ದಾರೆ. ತಂದೆಯ ಮಾರ್ಗದರ್ಶನದಲ್ಲಿ ಇವರು ಫುಟ್ಬಾಲ್ ವ್ಯಾಕವರಣವನ್ನು ಕಲಿತಿದ್ದಾರೆ.
ನಿಶಾನ್ ವೇಲುಪಿಳ್ಳೈ
ಆಸ್ಟ್ರೇಲಿಯಾ ಪರ ಫಿಫಾ ವಿಶ್ವಕಪ್‌ನಲ್ಲಿ ಆಡುವ ಅವಕಾಶವನ್ನು ಪಡೆದ ಭಾರತೀಯ ಆಟಗಾರ ತಮಿಳುನಾಡು ಮೂಲದ ನಿಶಾನ್ ವೇಲುಪಿಳ್ಳೈ. 25 ವರ್ಷದ ನಿಶಾನ್ ವಿಂಗರ್-ಸ್ಟ್ರೈಕರ್. ಸಿಕ್ಕ ಅವಕಾಶವನ್ನು ಬಳಸಿಕೊಂಡು ಮಿಂಚಿದ ಆಟಗಾರ. ಚೀನಾ ವಿರುದ್ಧದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗೋಲು ಬಾರಿಸಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ ಚತುರ. ಅವರ ತಂದೆ-ತಾಯಿ ಆಂಗ್ಲೋ-ಇಂಡಿಯನ್ ಆಗಿದ್ದಾರೆ. ನಿಶಾನ್ ಆಸ್ಟ್ರೇಲಿಯಾದಲ್ಲಿ ಫುಟ್ಬಾಲ್ ಆಡುತ್ತಾ ಬೆಳೆದವರು. ಇವರು ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡದ ಪರ ಫಿಫಾ ವಿಶ್ವಕಪ್‌ನಲ್ಲಿ ಆಡಲು ಅವಕಾಶ ಪಡೆದಿದ್ದಾರೆ.
ಸರಪ್ರೀತ್ ಸಿಂಗ್
27 ವರ್ಷದ ಸರಪ್ರೀತ್ ಸಿಂಗ್ ನ್ಯೂಜಿಲೆಂಡ್ ತಂಡದ ಭರವಸೆಯ ಮಿಡ್‌ಫಿಲ್ಡರ್. ಇವರು ಮೂಲತಹ ಪಂಜಾಬ್‌ನ ಜಲಂಧರ್‌ನವರು ಎಂದು ಹೇಳಲಾಗುತ್ತದೆ. ಸರಪ್ರೀತ್ ಸಿಂಗ್ ನ್ಯೂಜಿಲೆಂಡ್‌ನಲ್ಲಿ ಜನಿಸಿದರು. ಇವರು ನ್ಯೂಜಿಲೆಂಡ್ ಪರ 8 ವರ್ಷಗಳಿಂದ ಕಣಕ್ಕೆ ಇಳಿಯುತ್ತಿದ್ದಾರೆ. ಅಲ್ಲದೆ ಕಿವೀಸ್ ತಂಡದ ಪರ 24 ಪಂದ್ಯಗಳನ್ನು ಆಡಿದ್ದು 3 ಗೋಲು ಬಾರಿಸಿದ್ದಾರೆ. ಇವರು ಬೇಯರ್ನ್ ಮ್ಯೂನಿಚ್‌ನಂತಹ ಪ್ರಸಿದ್ಧ ಜರ್ಮನ್ ಕ್ಲಬ್‌ಗಳಿಗೂ ಆಡಿದ್ದಾರೆ.
ಸ್ಯಾಮ್ಯುಯೆಲ್ ಮುತುಸ್ಸಾಮಿ
ಫ್ರಾನ್ಸ್‌ನಲ್ಲಿ ಜನಿಸಿದ 29 ವರ್ಷದ ಸ್ಯಾಮ್ಯುಯೆಲ್ ಮುತುಸ್ಸಾಮಿ ಮಿಡ್‌ಫಿಲ್ಡರ್ ಆಗಿ ಹೆಸರು ಮಾಡಿದ ಆಟಗಾರ. ಅವರು ಪ್ರಸ್ತುತ ಗ್ರೀಕ್ ಸೂಪರ್ ಲೀಗ್ ಮತ್ತು ಆಫ್ರಿಕನ್ ದೇಶವಾದ ಕಾಂಗೋದ ಆರ್ಟಿಮೋಸ್ ಪರ ಆಡಿದ ಅನುಭವ ಹೊಂದಿದ್ದಾರೆ. 2017 ಹಾಗೂ 2019ರಲ್ಲಿ 20 ವರ್ಷದೊಳಗಿನವರ ಫಿಫಾ ವಿಶ್ವಕಪ್ ಟೂರ್ನಿಗಳಲ್ಲಿ ಕಾಂಗೊ ದೇಶದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications