Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಸೆಲೆಕ್ಷನ್ ಕಮಿಟಿಗೆ ಘಟಾನುಘಟಿಗಳಿಂದ ಅರ್ಜಿ: ಯಾರೆಲ್ಲಾ ಇದ್ದಾರೆ ನೋಡಿ!

 Final List Of Candidates For Indian Team Selectors’ Posts

ಕ್ರಿಕೆಟ್ ಆಯ್ಕೆ ಮಂಡಳಿಗೆ ಅರ್ಜಿ ಸಲ್ಲಿಸಲು ಬಿಸಿಸಿಐ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಘಟಾನುಘಟಿಗಳು ಈ ಮಹತ್ವದ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು ಯಾರಿಗೆ ಅವಕಾಶ ದೊರೆಯಲಿದೆ ಎಂಬುದು ಸದ್ಯಕ್ಕಿರುವ ಕುತೂಹಲ. ನಿನ್ನೆ ಟೀಮ್ ಇಂಡಿಯಾದ ಮಾಜಿ ಆಟಗಾರ ಅಜಿತ್ ಅಗರ್ಕರ್ ಅರ್ಜಿಯನ್ನು ಸಲ್ಲಿಸಿದ್ದರು. ಇದೀಗ ಅರ್ಜಿ ಸಲ್ಲಿಸಿದವರ ಅಂತಿಮ ಪಟ್ಟಿ ಲಭ್ಯವಾಗಿದೆ.

ಕ್ರೀಡಾ ಸುದ್ದಿ ಸಂಸ್ಥೆ 'ಕ್ರಿಕ್ ಇನ್ಫೋ' ವರದಿಯ ಪ್ರಕಾರ ಆಯ್ಕೆ ಸಮಿತಿಗೆ ಸಲ್ಲಿಸಿರುವ ಅರ್ಜಿಗಳಲ್ಲಿ ಶಿವರಾಮಕೃಷ್ಣನ್ ಅವರು ಹಿರಿಯ ಅರ್ಜಿದಾರರಾಗಿದ್ದಾರೆ. ಮಾಜಿ ವಿಕೆಟ್ ಕೀಪರ್ ನಯನ್ ಮೋಂಗಿಯಾ ಕೂಡ ಆಯ್ಕೆ ಸಮಿತಿಗೆ ತಮ್ಮ ಅರ್ಜಿಯನ್ನು ಸಲ್ಲಿಸಿದ್ದಾರೆ. ವರದಿಯ ಪ್ರಕಾರ ವೆಂಕಟೇಶ್ ಪ್ರಸಾದ್, ರಾಜೇಶ್ ಚೌಹಾಣ್, ಅಮಯ್ ಕುರಾಸಿಯಾ ಕೂಡ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ

ನಾಲ್ಕು ವರ್ಷಗಳ ಕಾಲ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದ ಎಂ.ಎಸ್.ಕೆ ಪ್ರಸಾದ್ ಅವರ ಅವಧಿ ಕಳೆದ ನವೆಂಬರ್‌ನಲ್ಲಿ ಅಂತ್ಯವಾಗಿದೆ. ಆದರೆ ಸದ್ಯ ಹೊಸ ಆಯ್ಕೆ ಸಮಿತಿ ರಚನೆಯಾಗದ ಹಿನ್ನೆಲೆಯಲ್ಲಿ ಎಂ.ಎಸ್‌.ಕೆ ಪ್ರಸಾದ್ ಅವರೇ ಈ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಬಂದಿರುವ ಅರ್ಜಿಗಳಲ್ಲಿ ಮಾಜಿ ವಿಕೆಟ್ ಕೀಪರ್ ನಯನ್ ಮೋಂಗಿಯಾ ಅತಿ ಹೆಚ್ಚು ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿರುವ ಆಟಗಾರನಾದ್ದಾರೆ. ಅಜಿಲ್ ಅಗರ್ಕರ್ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಆಟಗಾರನಾಗಿದ್ದಾರೆ.

ಬಿಸಿಸಿಐ ನಿಯಮದ ಪ್ರಕಾರ ಬಂದಿರುವ ಅರ್ಜಿಗಳಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಪ್ರತಿನಿಧಿಸಿರುವ ಹಿರಿಯ ವ್ಯಕ್ತಿ ಸಮಿತಿಯ ಚೇರ್‌ಪರ್ಸನ್ ಆಗಿ ಆಯ್ಕೆಯಾಗಲಿದ್ದಾರೆ. ಪುರುಷರ ಹಿರಿಯರ ತಂಡಕ್ಕೆ ಆಯ್ಕೆಗಾರರರಾಗಬೇಕಾದರೆ 7 ಟೆಸ್ಟ್‌ ಪಂದ್ಯಗಳನ್ನು ಅಥವಾ 30 ಫಸ್ಟ್‌ ಕ್ಲಾಸ್ ಆಟವನ್ನು ಆಡಿರಬೇಕು ಅಥವಾ 10 ಅಂತಾರಾಷ್ಟ್ರೀಯ ಏಕದಿನ ಮತ್ತು 20 ಫಸ್ಟ್‌ ಕ್ಲಾಸ್ ಪಂದ್ಯಗಳನ್ನು ಆಡಿರಲೇ ಬೇಕು. ಹಿರಿಯರ ಮಹಿಳಾ ತಂಡಕ್ಕೆ ಆಯ್ಕೆಗಾರರಾಗಬೇಕಾದರೆ ಅಂತಾರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿರಲೇಬೇಕು. ಕಿರಿಯರ ತಂಡದ ಆಯ್ಕೆಗಾರರ ತಂಡ ಸೇರಬೇಕಾದರೆ ಕನಿಷ್ಟ 25 ಫಸ್ಟ್‌ ಕ್ಲಾಸ್ ಪಂದ್ಯಗಳನ್ನು ಆಡಿರಬೇಕು ಎಂಬ ನಿಯಮಗಳು ಇದೆ.

Story first published: Saturday, January 25, 2020, 14:15 [IST]
Other articles published on Jan 25, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+