ಹೀರೋಸ್ ತಂಡಕ್ಕೆ ಹೀರೋ ಆದ ಎಂಎಸ್ ಧೋನಿ
ಲಂಡನ್, ಸೆ.18: ಸುಮಾರು ಮೂರು ತಿಂಗಳುಗಳ ಕ್ರಿಕೆಟ್ ನಿಂದ ಹೊರಗುಳಿದಿದ್ದ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಅವರು ಮತ್ತೊಮ್ಮೆ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ತಾವೊಬ್ಬ 'ಬೆಸ್ಟ್ ಫಿನಿಷರ್' ಎಂಬುದನ್ನು ಸಾಬೀತುಪಡಿಸಿದ್ದಾರೆ.
ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ, ವಿರೇಂದರ್ ಸೆಹ್ವಾಗ್ ಹಾಗೂ ಪಾಕಿಸ್ತಾನ ಟಿ 20 ನಾಯಕ ಶಹೀದ್ ಅಫ್ರಿದಿ ಅವರು ಒಂದೇ ತಂಡದಲ್ಲಿ ಆಡಿರುವುದನ್ನು ನೋಡಿ ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ಕ್ರಿಕೆಟ್ ಲೋಕದ ತಾರೆಗಳ ತಂಡದ ವಿರುದ್ಧ ವಿಶ್ವದ ಇತರೆ ಆಟಗಾರರು ಈ ಸಹಾಯಾರ್ಥ ಪಂದ್ಯದಲ್ಲಿ ಆಡಿದರು.
ಹೀರೋ XI ಹಾಗೂ ಇತರೆ ವಿಶ್ವ XI ತಂಡದ ನಡುವೆ ಈ ಪಂದ್ಯ ನಡೆಯಲಿದ್ದು, ಹೀರೋ XI ತಂಡವನ್ನು ಆಂಡ್ರ್ಯೂ ಸ್ಟ್ರಾಸ್ ಮುನ್ನಡೆಸಿದರು. 34 ವರ್ಷ ವಯಸ್ಸಿನ ಧೋನಿ ಅವರು ಕಳೆದ ಜೂನ್ ತಿಂಗಳಿನಲ್ಲಿ ಬಾಂಗ್ಲಾ ಪ್ರವಾಸದ ನಂತರ ಏಕದಿನ ಕ್ರಿಕೆಟ್ ಆಡಿರಲಿಲ್ಲ. ಈಗ ಹೀರೋ ತಂಡದ ಪರ ಆಡಿ ಗೆಲುವಿನ ರನ್ ಗಳಿಸಿದರು.
38 ರನ್ ಗಳಿಸಿ ಅಜೇಯವಾಗಿ ಉಳಿದ ಧೋನಿ ಅವರು ಇನ್ನೂ 3 ಎಸೆತಗಳು ಬಾಕಿ ಇರುವಂತೆಯೇ ಬೌಂಡರಿ ಸಿಡಿಸಿ ಗೆಲುವಿನ ರನ್ ಗಳಿಸಿ 15 ರನ್ ಚೇಸಿಂಗ್ ಫಿನಿಷ್ ಮಾಡಿದರು. ಕಳೆದ ಡಿಸೆಂಬರ್ ನಲ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ಧೋನಿ ಅವರು ಈ ಪಂದ್ಯದ ಶ್ರೇಷ್ಠ ಅಟಗಾರ ಎನಿಸಿಕೊಂಡರು.
ಗೆಲುವಿನ ಸಂಭ್ರಮದಲ್ಲಿ ಧೋನಿ ಜೊತೆ ಹೀರೋಸ್ ತಂಡದಲ್ಲಿ ಹರ್ಷಲ್ ಗಿಬ್ಸ್, ವಿರೇಂದರ್ ಸೆಹ್ವಾಗ್, ಡೇಮಿಯನ್ ಮಾರ್ಟಿನ್, ಶಹೀದ್ ಅಫ್ರಿದಿ, ಗ್ರಹಾಂ ಸ್ವಾನ್, ಸಿಮನ್ಸ್ ಜೋನ್ಸ್, ಮ್ಯಾಥ್ಯೂ ಹೊಗಾರ್ಡ್ ಮುಂತಾದವರಿದ್ದರು.

ಬೆಸ್ಟ್ ಫಿನಿಷರ್ ಧೋನಿ
ಕ್ರಿಕೆಟ್ ಲೋಕದ ತಾರೆಗಳ ತಂಡದ ವಿರುದ್ಧ ವಿಶ್ವದ ಇತರೆ ಆಟಗಾರರು ಈ ಸಹಾಯಾರ್ಥ ಪಂದ್ಯದಲ್ಲಿ ಆಡಿದರು. ಧೋನಿ ಅವರು ಮತ್ತೊಮ್ಮೆ ಏಕದಿನ ಕ್ರಿಕೆಟ್, ಟಿ20 ಕ್ರಿಕೆಟ್ ಪಂದ್ಯದಲ್ಲಿ ತಾವೊಬ್ಬ 'ಬೆಸ್ಟ್ ಫಿನಿಷರ್' ಎಂಬುದನ್ನು ಸಾಬೀತುಪಡಿಸಿದರು.
ಸೆಹ್ವಾಗ್ ಬ್ಯಾಟಿಂಗ್ ಭಂಗಿ ನೋಡಿ
ಧೋನಿ ಜೊತೆ ಬಹುಕಾಲದ ನಂತರ ಆಡಿದ ಸೆಹ್ವಾಗ್ ಅವರು 30ರನ್ ಗಳಿಸಿದರು.
ಸಹಾಯಾರ್ಥ ಪಂದ್ಯದ ನಂತರ ಎರಡು ತಂಡಗಳು
ಸಹಾಯಾರ್ಥ ಪಂದ್ಯದ ನಂತರ ಎರಡು ತಂಡಗಳ ಆಟಗಾರರು ಪೋಸ್ ನೀಡಿದ್ದು ಹೀಗೆ...
ಹೀರೋಸ್ ತಂಡದ ನಾಯಕ ಸ್ಟ್ರಾಸ್
ಹೀರೋಸ್ ತಂಡದ ನಾಯಕ ಸ್ಟ್ರಾಸ್ ಕಪ್ ನೊಂದಿಗೆ ಪೋಸ್. 26ರನ್ ಗಳಿಸಿದ ನಾಯಕ ಸ್ಟ್ರಾಸ್
ಮೆಕಲಮ್ ತಂಡ 158/6, 20 ಓವರ್ಸ್
ವಿಶ್ವದ ಇತರೆ ಆಟಗಾರರ ತಂಡಕ್ಕೆ ಮೆಕಲಮ್ ನಾಯಕರಾಗಿದ್ದರು. 158/6, 20 ಓವರ್ಸ್ ಗಳಿಸಿತು. ಜಯವರ್ದನೆ 48ರನ್ ಗಳಿಸಿದರು. ಬ್ರಿಯಾನ್ ಲಾರಾ, ಮ್ಯಾಥ್ಯೂ ಹೇಡನ್, ಡೇನಿಯಲ್ ವೆಟ್ಟೋರಿ, ಗ್ರಹಾಂ ಸ್ಮಿತ್ ತಂಡದಲ್ಲಿದ್ದರು.
ಹೆಲ್ಪ್ ಫಾರ್ ಹೀರೋಸ್
ಸುಮಾರು 300,000 ಪೌಂಡ್ ದೇಣಿಗೆ ಸಂಗ್ರಹಿಸಿದ ಆಯೋಜಕರಾದ ರಿಚರ್ಡ್ ಗೌಲ್ಡ್ ಅವರು ಗೆಲುವಿನ ತಂಡಕ್ಕೆ ಶುಭಹಾರೈಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications