Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫಿನ್‌ ಅಲೆನ್ ಔಟ್‌, ನಾಟೌಟ್‌? ಕ್ಯಾಚ್ ಪಡೆದಾಗ ಫೀಲ್ಡರ್‌ ಕಾಲು ಬೌಂಡರಿ ಲೈನ್‌ಗೆ ತಾಗಿತ್ತಾ?

ಕೋಲ್ಕತ್ತ: ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್‌) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ದೊಡ್ಡ ವಿವಾದವೊಂದು ಹುಟ್ಟಿಕೊಂಡಿದೆ. ಈ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಕೆಕೆಆರ್ ತಂಡಕ್ಕೆ ಸಿಕ್ಕಿತು. ಈ ವೇಳೆ ಫಿನ್ ಅಲೆನ್‌ ಬಾರಿಸಿದ ಚೆಂಡು ಆಗಸದೆತ್ತರಕ್ಕೆ ಚಿಮ್ಮಿತು. ಬೌಂಡರಿ ಲೈನ್‌ ಪಕ್ಕದಲ್ಲಿ ನಿಂತಿದ್ದ ಲಕ್ನೋ ಫಿಲ್ಡರ್‌ ದಿಗ್ವೇಶ್ ರಾಠಿ ಉತ್ತಮ ಕ್ಯಾಚ್ ಪಡೆದರು.

ದಿಗ್ವೇಶ್ ರಾಠಿ ಹಿಡಿದ ಕ್ಯಾಚ್ ಈಗ ಸಾಮಾಜಿಕ ತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಭಿಮಾನಿಗಳು ಮೂರನೇ ಅಂಪೈರ್ ನಿರ್ಧಾರ ಮತ್ತು ಮರು ಪರಿಶೀಲನೆ ಮಾಡುವಾಗ ಆದ ನ್ಯೂನತೆಯನ್ನು ಪ್ರಶ್ನಿಸುತ್ತಿದ್ದಾರೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ಇನ್ನಿಂಗ್ಸ್‌ನಲ್ಲಿ ಫಿನ್ ಅಲೆನ್ ವಿಕೆಟ್ ಪಡೆದಿದ್ದು ಕೋಲಾಹಲ ಸೃಷ್ಟಿಸಿದೆ.

Finn Allen

ಇನಿಂಗ್ಸ್‌ ಎರಡನೇ ಓವರ್‌ ಪ್ರಿನ್ಸ್‌ ಯಾದವ್ ಮಾಡಿದರು. ಈ ವೇಳೆ ಕೆಕೆಆರ್ ತಂಡಕ್ಕೆ ದೊಡ್ಡ ಆರಂಭವನ್ನು ನೀಡುವ ಹೊಣೆ ಫಿನ್ ಅಲೆನ್ ಹಾಗೂ ಅಜಿಂಕ್ಯ ರಹಾನೆ ಮೇಲೆ ಇತ್ತು. ಈ ಹಂತದಲ್ಲಿ ಪ್ರಿನ್ಸ್‌ ಯಾದವ್ ಎಸೆದ ಇನಿಂಗ್ಸ್‌ನ ನಾಲ್ಕನೇ ಎಸೆತವನ್ನು ಫಿನ್‌ ಅಲೆನ್ ಎದುರಿಸಿದರು. ಪ್ರಿನ್ಸ್‌ ಯಾದವ್ ಹಾರ್ಡ್‌ ಲೆಂತ್‌ ಔಟ್ ಸೈಡ್ ಆಫ್‌ ಸ್ಟಂಪ್‌ ಎಸೆದ ಎಸೆತವನ್ನು ತಪ್ಪಾಗಿ ಗ್ರಹಿಸಿದ ಫಿನ್ ಅಲೆನ್ ಅವರ ಬ್ಯಾಟ್‌ನ ಅಂಚಿಗೆ ಬಡಿದ ಚೆಂಡು ಡೀಪ್‌ ಥರ್ಡ್‌ ಮ್ಯಾನ್‌ನತ್ತ ಸಾಗಿತು. ಡೀಪ್‌ ಥರ್ಡ್ ಮ್ಯಾನ್‌ನಲ್ಲಿ ಫೀಲ್ಡ್‌ ಮಾಡುತ್ತಿದ್ದ ದಿಗ್ವೇಶ್ ರಾಠಿ ಕ್ಯಾಚ್‌ನ್ನು ಪಡೆದರು.

ಬೌಂಡರಿ ಲೈನ್‌ನಲ್ಲಿ ನಿಂತಿದ್ದ ದಿಗ್ವೇಶ್ ರಾಠಿ ತಮ್ಮ ಎಡಕ್ಕೆ ಓಡಿ ಅದ್ಭುತ ಕ್ಯಾಚ್ ಪಡೆದರು. ಕ್ಯಾಚ್ ಹಿಡಿಯುವಾಗ ರಾಠಿ ಅವರ ಕಾಲು ಬೌಂಡರಿ ಕುಶನ್‌ಗೆ ಬಹಳ ಹತ್ತಿರದಲ್ಲಿತ್ತು ಎಂದು ಮರು ವೀಕ್ಷಣೆಯ ವೇಳೆ ಕಂಡು ಬಂದಿತು. ಈ ವೇಳೆ ಇನ್ನೊಂದು ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ ರಾಠಿ ಅವರ ಶೂ ಬೌಂಡರಿ ಲೈನ್‌ಗೆ ತಾಗಿತು ಎಂದು ಕಂಡು ಬಂದಿದೆ.

ಇದರಲ್ಲಿ ಯಾರ ತಪ್ಪು?

ಮೈದಾನದಲ್ಲಿನ ಅಂಪೈರ್‌ಗಳು ಈ ಬಗ್ಗೆ ಪರಿಶೀಲನೆ ನಡೆಸಬೇಕಿತ್ತು. ಕೆಕೆಆರ್ ತಂಡದ ಬ್ಯಾಟರ್ ಸಹ ಸ್ವಲ್ಪ ಮಟ್ಟಿಗೆ ತಪ್ಪಿತಸ್ಥರಾಗುತ್ತಾರೆ. ಬ್ಯಾಟರ್‌ ಸಹ ಕಾಯಬಹುದಿತ್ತು ಮತ್ತು ಕ್ಯಾಚ್‌ ಹಿಡಿದಿದ್ದರ ಬಗ್ಗೆ ಪ್ರಶ್ನೆ ಮಾಡಬಹುದಿತ್ತು. ಇನ್ನು ದಿಗ್ವೇಶ್ ಠಾಠಿ ಅವರಿಗೆ ತಮ್ಮ ಕಾಲು ಬೌಂಡರಿ ಲೈನ್‌ಗೆ ತಾಗಿದ್ದರೆ ಪ್ರಾಮಾಣಿಕತೆಯಿಂದ ಹೇಳಬಹುದಿತ್ತು.

ಕೆಕೆಆರ್‌ ತಂಡದ ಅನುಭವಿ ಬ್ಯಾಟರ್ ಫಿನ್ ಅಲೆನ್ ರನ್‌ ಕಲೆ ಹಾಕಲು ಪರದಾಟ ನಡೆಸಿದ್ದಾರೆ. ಇವರು ಆಡಿದ 4 ಪಂದ್ಯಗಳಲ್ಲಿ 80 ರನ್‌ ಸಿಡಿಸಿದ್ದಾರೆ. ಇದರಲ್ಲಿ 13 ಬೌಂಡರಿ, 4 ಸಿಕ್ಸರ್‌ ಸಿಡಿಸಿದ್ದಾರೆ. ಇವರ ಲಯ ಕೆಕೆಆರ್ ತಂಡಕ್ಕೆ ಮಹತ್ವದಾಗಿದೆ. ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲೂ ಫಿನ್‌ ಅಲೆನ್ 9 ರನ್‌ ಬಾರಿಸಿ ಔಟ್ ಆದರು. ಈ ವೇಳೆ 2 ಬೌಂಡರಿ ಬಾರಿಸಿದ್ದಾರೆ.

Story first published: Thursday, April 9, 2026, 20:47 [IST]
Other articles published on Apr 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+