Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಂಗ್ಲಾದೇಶದ ವಿರುದ್ಧ 18 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ ಆರ್‌ಸಿಬಿ ದಾಂಡಿಗ

Finn Allen scores second fastest T20I fifty for New Zealand, RCB fans react ahead of IPL 2021

ಬಾಂಗ್ಲಾದೇಶದ ವಿರುದ್ಧ ನಡೆದ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ನ್ಯೂಜಿಲೆಂಡ್ ಭರ್ಜರಿ ಗೆಲುವು ಸಾಧಿಸಿದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಮೂಲಕ ವಶಕ್ಕೆ ಪಡೆದುಕೊಂಡಿದೆ. ಆಕ್ಲಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಈ ಪಂದ್ಯಕ್ಕೆ ಮಳೆ ಅಡ್ಡಿಯಾದ ಪರಿಣಾಮವಾಗಿ ಕೇವಲ 10 ಓವರ್‌ಗಳ ಪಂದ್ಯವಷ್ಟೇ ನಡೆದಿತ್ತು. ಆದರೆ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ರನ್ ಮಳೆಯನ್ನೇ ಹರಿಸಿದೆ. ನಿಗದಿತ 10 ಓವರ್‌ಗಳಲ್ಲಿ 141 ರನ್ ಬಾರಿಸಿತು.

ನ್ಯೂಜಿಲೆಂಡ್‌ನ ಈ ಬೃಹತ್ ರನ್‌ಗೆ ಕಾರಣವಾಗಿದ್ದು ಕಿವೀಸ್‌ನ ಆರಂಭಿಕ ಆಟಗಾರರು. ಅನುಭವಿ ಮಾರ್ಟಿನ್ ಗಪ್ಟಿಲ್ ಹಾಗೂ ಇತ್ತೀಚೆಗೆ ಆರ್‌ಸಿಬಿ ತಂಡಕ್ಕೆ ಸೇರಿಕೊಂಡಿರುವ ಫಿನ್ ಅಲೆನ್ ಮೊದಲ ವಿಕೆಟ್‌ಗೆ ಕೇವಲ 34 ಎಸೆತಗಳಲ್ಲಿ 85 ರನ್‌ಗಳನ್ನು ಸಿಡಿಸಿದರು.

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಕಣಕ್ಕಿಳಿಯಲಿರುವ ಫಿನ್ ಅಲೆನ್ ಕೇವಲ 29 ಎಸೆತಗಳನ್ನು ಎದುರಿಸಿ 71 ರನ್‌ಗಳನ್ನು ಗಳಿಸಿದರು. ಕೇವಲ 18 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ ಅಲನ್ ನ್ಯೂಜಿಲೆಂಡ್ ತಂಡದ ಪರವಾಗಿ ಎರಡನೇ ಅತಿ ವೇಗದ ಅರ್ಧ ಶತಕ ಬಾರಿಸಿದರು. ಇದರಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡಿತ್ತು. ಕೀವಿಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾದೇಶ 9.3 ಓವರ್‌ಗಳಲ್ಲಿ ಕೇವಲ 76 ರನ್‌ಗಳಿಗೆ ಆಲೌಟ್ ಆಗಿ ಶರಣಾಯಿತು.

ಇನ್ನು ಆರ್‌ಸಿಬಿ ತಂಡಕ್ಕೆ ಸೇರಿಕೊಳ್ಳಲಿರುವ ಫಿನ್ ಅಲೆನ್ ಪ್ರದರ್ಶನ ಆರ್‌ಸಿಬಿ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಆರ್‌ಸಿಬಿ ಪರವಾಗಿ ಅಬ್ಬರಿಸುವುದನ್ನು ನೋಡಲು ಕಾತರಿಸುತ್ತಿರುವುದಾಗಿ ಅಭಿಮಾನಿಗಳು ಟ್ವೀಟ್ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.

ಫಿನ್ ಅಲೆನ್ ಶೀಘ್ರದಲ್ಲಿಯೇ ಆರ್‌ಸಿಬಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕ್ವಾರಂಟೈನ್ ಮುಗಿಸು ಆರ್‌ಸಿಬಿ ಬಯೋಬಬಲ್‌ಗೆ ಸೇರಿಕೊಲಿರುವ ಫಿನ್ ಅಲೆನ್ ಆರ್‌ಸಿಬಿ ಪರವಾಗಿ ಮಿಂಚುವ ವಿಶ್ವಾಸವನ್ನು ಅಭಿಮಾನಿಗಳು ಹೊಂದಿದ್ದಾರೆ.

Story first published: Thursday, April 1, 2021, 18:10 [IST]
Other articles published on Apr 1, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+