For Quick Alerts
ALLOW NOTIFICATIONS  
For Daily Alerts
 

ಆಂಗ್ಲರ ವಿರುದ್ಧ ಅಬ್ಬರಿಸಿದ ಆರ್​​ಸಿಬಿ ‍ಬ್ಯಾಟರ್ : ಮುಂದಿನ ಬಾರಿಯಾದ್ರು ಸಿಗುತ್ತಾ ಅವಕಾಶ?

ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಫಿನ್ ಅಲೆನ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದಾರೆ. ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಂನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಅವರು 53 ಎಸೆತಗಳಲ್ಲಿ 4 ಬೌಂಡರಿ 6 ಸಿಕ್ಸರ್ ಸಹಿತ 83 ರನ್ ಗಳಿಸಿದರು.

ಗ್ಲೆನ್ ಫಿಲಿಫ್ಸ್ ಕೂಡ 34 ಎಸೆತಗಳಲ್ಲಿ 5 ಬೌಂಡರಿ 5 ಸಿಕ್ಸರ್ ಸಹಿತ 69 ರನ್ ಗಳಿಸಿದರು, ಇವರಿಬ್ಬರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿತು.

finn-allens-explosive-batting

ಈ ಬೃಹತ್ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 18.3 ಓವರ್ ಗಳಲ್ಲಿ 128 ರನ್‌ ಗಳಿಸುವಷ್ಟರಲ್ಲಿ ಆಲೌಟ್ ಆಗುವ ಮೂಲಕ 74 ರನ್‌ಗಳ ಸೋಲೊಪ್ಪಿಕೊಂಡಿತು. ಈ ಮೂಲಕ ನ್ಯೂಜಿಲೆಂಡ್ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ. ಇಂಗ್ಲೆಂಡ್ ಸದ್ಯ ಸರಣಿಯಲ್ಲಿ 2-1 ಅಂತರದಲ್ಲಿ ಮುಂದಿದೆ. ಸರಣಿಯ ಕೊನೆಯ ಮತ್ತು ನಿರ್ಣಾಯಕ ಪಂದ್ಯ ಸೆಪ್ಟೆಂಬರ್ 5ರಂದು ನಾಟಿಂಗ್‌ಹ್ಯಾಂನಲ್ಲಿ ನಡೆಯಲಿದೆ.

ಮುಂದಿನ ಐಪಿಎಲ್‌ನಲ್ಲಿ ಸಿಗುತ್ತಾ ಅವಕಾಶ?

ಫಿನ್ ಅಲೆನ್ ಆರಂಭಿಕ ಆಟಗಾರ, ಟಿ20 ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟರ್ ಎನಿಸಿಕೊಂಡಿದ್ದಾರೆ. 2020ರ ಐಪಿಎಲ್ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡ ಅವರನ್ನು 80 ಲಕ್ಷ ರೂಪಾಯಿ ನೀಡಿ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತ್ತು.

ದುರದೃಷ್ಟ ಎಂದರೆ ಅವರು ಈವರೆಗೂ ಒಂದೂ ಪಂದ್ಯವನ್ನು ಆರ್ ಸಿಬಿ ತಂಡಕ್ಕಾಗಿ ಆಡಿಲ್ಲ, ಆದರೂ ಅವರನ್ನು ಪ್ರತಿವರ್ಷ ತಂಡದಲ್ಲಿ ಉಳಿಸಿಕೊಂಡು ಬಂದಿದೆ. ಫಿನ್ ಅಲೆನ್ ಟಿ20 ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದುವರೆಗೆ 31 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು 23.32 ಸರಾಸರಿಯಲ್ಲಿ 723 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 153 ಇದೆ.

2024ರ ಐಪಿಎಲ್‌ನಲ್ಲಿಯಾದರೂ ಫಿನ್ ಅಲೆನ್ ಅವರಿಗೆ ತಂಡದಲ್ಲಿ ಅವಕಾಶ ಸಿಗುತ್ತಾ ಎನ್ನುವ ಪ್ರಶ್ನೆ ಕಾಡುತ್ತಿದೆ. 2023ರ ಐಪಿಎಲ್‌ನಲ್ಲೇ ದಿನೇಶ್ ಕಾರ್ತಿಕ್ ಅವರ ಬದಲಾಗಿ ಫಿನ್ ಅಲೆನ್‌ಗೆ ಅವಕಾಶ ಕೊಡಬೇಕು ಎನ್ನುವ ವಾದ ಕೇಳಿಬಂದಿದ್ದರೂ, ಆಲ್‌ರೌಂಡರ್, ಬೌಲರ್ ಗಳು ಅವಕಾಶ ಪಡೆದ ಕಾರಣ ಫಿನ್ ಅಲೆನ್ ಮೊದಲ ಪಂದ್ಯ ಆಡಲು ಇನ್ನೂ ಒಂದು ವರ್ಷ ಕಾಯಬೇಕಾಯಿತು.

ಸದ್ಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದು 2024ರ ಐಪಿಎಲ್‌ನಲ್ಲಿ ಅವರಿಗೆ ಒಂದೆರಡು ಪಂದ್ಯಗಳಲ್ಲಿ ಆದರೂ ಅವಕಾಶ ನೀಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ. ಮತ್ತೊಬ್ಬ ಸ್ಫೋಟಕ ಆಲ್‌ರೌಂಡರ್ ಇಂಗ್ಲೆಂಡ್‌ನ ವಿಲ್ ಜ್ಯಾಕ್ಸ್ ಕೂಡ ಮುಂದಿನ ಆವೃತ್ತಿಗೆ ತಂಡವನ್ನು ಸೇರಿಕೊಳ್ಳುವ ಅವಕಾಶ ಇದೆ.

Story first published: Monday, September 4, 2023, 19:46 [IST]
Other articles published on Sep 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+