Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Breaking News: ಸನ್‌ರೈಸರ್ಸ್‌ ಹೈದರಾಬಾದ್ ಆಟಗಾರರು ತಂಗಿದ್ದ ಹೊಟೇಲ್‌ನಲ್ಲಿ ಬೆಂಕಿ

ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಪಂಚತಾರಾ ಹೊಟೇಲ್‌ನಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದೆ. ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಬೆಂಕಿ ತಗಲಿರುವ ಹಯಾತ್‌ ಹೊಟೇಲ್‌ನಲ್ಲಿಯೇ ಸನ್‌ರೈಸರ್ಸ್ ತಂಡ ತಂಗಿತ್ತು. ಬೆಂಕಿ ಕಾಣಿಸಿಕೊಂಡಂತೆ ಎಸ್‌ಆರ್‌ಎಚ್‌ ಆಟಗಾರರನ್ನು ಈ ಹೊಟೇಲ್‌ನಿಂದ ಬೇರೆ ಕಡೆಗಿ ಶಿಫ್ಟ್ ಮಾಡಲಾಗಿದೆ. ಹೊಟೇಲ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ, ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ಕಾಲ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕದಳ ಸ್ಥಳಕ್ಕೆ ಆಗಮಿಸಿ ಅಗ್ನಿ ನಂದಿಸುವಲ್ಲಿ ಶ್ರಮಿಸಿತು. ಅಲ್ಲದೆ ಬೆಂಕಿಯನ್ನು ನಂದಿಸುವಲ್ಲಿ ಸಫಲವಾಯಿತು. ಈ ಹೊಟೇಲ್‌ನ ಮೊದಲನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದಾಗಿ ತಿಳಿದು ಬಂದಿದೆ. ಈ ಬೆಂಕಿ ಹತ್ತಿಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಹೊಟೇಲ್‌ನಲ್ಲಿ ತಂಗಿದ್ದ ಜನರು ಹೊರ ಬರಲು ಆರಂಭಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಧಿಕಾರಿಯಿಬ್ಬರು, ಎಸ್‌ಆರ್‌ಎಚ್‌ ತಂಡವನ್ನು ಈ ಹೊಟೇಲ್‌ನಿಂದ ಮತ್ತೊಂದು ಹೊಟೇಲ್‌ಗೆ ಕರೆದುಕೊಂಡು ಹೋಗಲಾಗಿದೆ.

Fire Breaks Out at Hyderabad s Hyatt Hotel Sunrisers Hyderabad Players Evacuated Safely

ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ಏನು ಎಂಬುದು ಇನ್ನು ತಿಳಿದು ಬಂದಿಲ್ಲ. ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೊಟೇಲ್‌ನ ಮೊದಲ ಮಹಡಿಯಲ್ಲಿ ಹತ್ತಿಕೊಂಡ ಬೆಂಕಿ, ನೋಡು ನೋಡುವಷ್ಟರಲ್ಲಿ ಹಲವೆಡೆ ಆವರಿಸಿಕೊಂಡಿತು. ಅಲ್ಲದೆ ಇದರಿಂದ ಹೊಗೆ ಸಹ ಎಲ್ಲ ಕಡೆ ವ್ಯಾಪಿಸಿಕೊಂಡಿದೆ.

ಹೊಟೇಲ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಇಲ್ಲಿ ತಂಗಿದ್ದ ಜನ ಭಯಗೊಂಡು, ಹೊರಬರಲು ಆರಂಭಿಸಿದರು. ಹೊಟೇಲ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಇನ್ನು ಈ ಘಟನೆಯಲ್ಲಿ ಯಾವುದೇ ಹಾನಿ ಆಗದಿರುವ ಬಗ್ಗೆ ತಿಳಿದು ಬಂದಿದೆ.

Story first published: Monday, April 14, 2025, 15:22 [IST]
Other articles published on Apr 14, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+