Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

India vs Sri Lanka: ಏಕದಿನ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಇಲ್ಲದ ದಾಖಲೆ ಸೃಷ್ಟಿಸಿದ ಭಾರತ!

ಮಂಗಳವಾರ, ಸೆಪ್ಟೆಂಬರ್ 12ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ 2023ರ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡವು ಭಾರತದ ಎದುರು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿತು.

ಯುವ ಆಟಗಾರ ದುನಿತ್ ವೆಲ್ಲಾಲಗೆ ನೇತೃತ್ವದ ಶ್ರೀಲಂಕಾ ಬೌಲಿಂಗ್ ಪಡೆ ಭಾರತ ತಂಡವನ್ನು 49.1 ಓವರ್‌ಗಳಲ್ಲಿ ಕೇವಲ 213 ರನ್‌ಗಳಿಗೆ ಆಲೌಟ್ ಮಾಡಿತು. ಏಕದಿನ ಕ್ರಿಕೆಟ್‌ನಲ್ಲಿ ದುನಿತ್ ವೆಲ್ಲಾಲಗೆ ತಮ್ಮ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದರು. ಭಾರತದ ಅಗ್ರ ಬ್ಯಾಟರ್‌ಗಳ ವಿಕೆಟ್ ಪಡೆದು, ಬೃಹತ್ ಮೊತ್ತಕ್ಕೆ ಕಡಿವಾಣ ಹಾಕಿದರು.

ದುನಿತ್ ವೆಲ್ಲಾಲಗೆ 10 ಓವರ್‌ಗಳಲ್ಲಿ 40 ರನ್‌ ನೀಡಿ 5 ವಿಕೆಟ್‌ ಕಬಳಿಸಿದ ಅವರು, ಒಂದು ಮೇಡನ್ ಓವರ್ ಸಹ ಎಸೆದರು. ಇನ್ನು ಅರೆಕಾಲಿಕ ಬೌಲರ್ ಚರಿತ್ ಅಸಲಂಕಾ ಕೂಡ ನಾಲ್ಕು ವಿಕೆಟ್‌ ಪಡೆದು ಮಿಂಚಿದರು. ಉಳಿದಂತೆ ಮಹೇಶ್ ತೀಕ್ಷಣ ಒಂದು ವಿಕೆಟ್ ಪಡೆದರು.

first-in-indian-odi-cricket

ಭಾರತದ ಎಲ್ಲಾ ವಿಕೆಟ್‌ಗಳನ್ನು ಶ್ರೀಲಂಕಾದ ಸ್ಪಿನ್ನರ್‌ಗಳು ಪಡೆದರು. ಇದು ಏಕದಿನ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್ ತಂಡವು ಸ್ಪಿನ್ನರ್‌ಗಳ ವಿರುದ್ಧ ಆಲೌಟ್ ಆಗಿದ್ದು ಇದೇ ಮೊದಲ ನಿದರ್ಶನವಾಗಿದೆ.

ಇದೇ ವೇಳೆ ಶ್ರೀಲಂಕಾ ಕೂಡ ಬೃಹತ್ ದಾಖಲೆ ನಿರ್ಮಿಸಿದ್ದು, ಶ್ರೀಲಂಕಾ ಸತತ 14 ಏಕದಿನ ಪಂದ್ಯಗಳಲ್ಲಿ ಎದುರಾಳಿ ತಂಡವನ್ನು ಆಲೌಟ್ ಮಾಡಿದ ಮೊದಲ ತಂಡವೆನಿಸಿದೆ.

2023ರ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಹಿಂದಿನ ಪಂದ್ಯದಲ್ಲಿ ಭಾರತ 350 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತ್ತು. ಆದರೆ, ಶ್ರೀಲಂಕಾ ವಿರುದ್ಧ ಅದೇ ಮೈದಾನದಲ್ಲಿ ನಿಧಾನಗತಿಯ ಬೌಲರ್‌ಗಳಿಗೆ ಸಹಾಯ ಮಾಡುವ ಪಿಚ್‌ನಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಶ್ರೀಲಂಕಾ ಸ್ಪಿನ್ನರ್‌ಗಳ ವಿರುದ್ಧ ಸಂಪೂರ್ಣ ಕುಸಿತ ಕಂಡಿತು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ 48 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 53 ರನ್ ಗಳಿಸಿದ್ದು, ಇದು ಐವತ್ತರ ಗಡಿ ದಾಟಿದ ಏಕೈಕ ಆಟಗಾರನಾದರು.

ಇಶಾನ್ ಕಿಶನ್ 33 ಮತ್ತು ಕೆಎಲ್ ರಾಹುಲ್ 39 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಕೇವಲ 3 ರನ್ ಗಳಿಸಿ ಸಿಂಗಲ್ ಡಿಜಿಟ್‌ಗೆ ಔಟಾದರು. ಸ್ಪಿನ್ನರ್‌ಗಳ ವಿರುದ್ಧ ಸ್ಕೋರ್ ಗಳಿಸುವುದು ಕಷ್ಟಪಟ್ಟರು.

ತನ್ನ ಐದು ಸ್ಪಿನ್ನರ್‌ಗಳನ್ನು ಬಳಸಿಕೊಂಡ ಶ್ರೀಲಂಕಾ ತಂಡ ಭಾರತದ ಬ್ಯಾಟರ್‌ಗಳನ್ನು ಇನ್ನಿಂಗ್ಸ್‌ನುದ್ದಕ್ಕೂ ಬ್ಯಾಕ್ ಫುಟ್‌ನಲ್ಲಿ ಇರಿಸಿದ್ದರು. ಭಾರತ ಮೊದಲ ವಿಕೆಟ್‌ಗೆ 80 ರನ್ ಕಲೆಹಾಕುವ ಮೂಲಕ ಉತ್ತಮ ಆರಂಭವನ್ನು ಪಡೆದಿತ್ತು.

12ನೇ ಓವರ್‌ನಲ್ಲಿ ಬೌಲಿಂಗ್ ದಾಳಿಗೆ ಇಳಿದ ದುನಿತ್ ವೆಲ್ಲಾಲಗೆ ಪಂದ್ಯದ ಸ್ವರೂಪವನ್ನೇ ಬದಲಿಸಿದರು. 16ನೇ ಓವರ್‌ನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 80 ರನ್ ಗಳಿಸಿದ್ದ ಭಾರತ, ನಂತರ 3 ವಿಕೆಟ್‌ಗೆ 91 ರನ್‌ಗೆ ತಲುಪಿತು.

ದುನಿತ್ ವೆಲ್ಲಾಲಗೆ ಅವರು ತಮ್ಮ ಮೊದಲ ಮೂರು ಓವರ್‌ಗಳಲ್ಲಿ ಕ್ರಮವಾಗಿ ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದೊಡ್ಡ ಬ್ಯಾಟರ್‌ಗಳನ್ನು ಬಲೆಗೆ ಬೀಳಿಸಿದರು.

Story first published: Tuesday, September 12, 2023, 22:53 [IST]
Other articles published on Sep 12, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+