Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸ್ಟ್ರೇಲಿಯಾ: ಮೊದಲ ಸರಣಿ ಗೆಲುವಿನ ಹರ್ಷ ವ್ಯಕ್ತಪಡಿಸಿದ ವೇಗಿ ಟಿ ನಟರಾಜನ್

First series win for my country memorable and special: Natarajan

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಟೀಮ್ ಇಂಡಿಯಾ ಮೊದಲ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ಏಕದಿನ ಸರಣಿಯ ಸೋಲಿಗೆ ಸೇಡು ತೀರಿಸಿಕೊಂಡಿದೆ. ಈ ಸರಣಿಯಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡಿ ವೇಗಿ ನಟರಾಜನ್ ಮನಗೆದ್ದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದ ಗೆಲುವಿನ ನಂತರ ನಟರಾಜನ್ ಸಾಮಾಜಿಕ ಜಾಲತಾಣದಲ್ಲಿ ಸರಣಿ ಗೆಲುವಿಗೆ ಹರ್ಷ ವ್ಯಕ್ತಪಡಿಸಿದ್ದಾರೆ. ದೇಶಕ್ಕಾಗಿ ಮೊದಲ ಸರಣಿ ಗೆದ್ದಿರುವುದು ಸ್ಮರಣೀಯ ಸಂಗತಿ ಎಂದು ಟ್ವಿಟ್ಟರ್‌ನಲ್ಲಿ ನಟರಾಜನ್ ಸಂತಸ ಹಂಚಿಕೊಂಡಿದ್ದಾರೆ.

"ದೇಶಕ್ಕಾಗಿ ಮೊದಲ ಸರಣಿ ಗೆಲುವು, ಸ್ಮರಣೀಯ ಹಾಗೂ ವಿಶೇಷ" ಎಂದು ಟಿ ನಟರಾಜನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದರ ಜೊತೆಗೆ ಎರಡನೇ ಪಂದ್ಯದ ಕೆಲ ಚಿತ್ರಗಳನ್ನು ಟಿ ನಟರಾಜನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಎರಡನೇ ಟಿ20 ಪಂದ್ಯದಲ್ಲಿ ನಟರಾಜನ್ ಎರಡು ವಿಕೆಟ್ ಪಡೆಯುವ ಮೂಲಕ ತಂಡಕ್ಕೆ ಬ್ರೇಕ್ ನೀಡಿದ್ದರು. ಜೊತೆಗೆ ಅದ್ಭುತ ದಾಳಿ ಸಂಘಟಿಸಿ ಎದುರಾಳಿ ಬ್ಯಾಟ್ಸ್‌ಮನ್‌ಗಳು ರನ್ ಗಳಿಸದಂತೆಯೂ ನೋಡಿಕೊಳ್ಳುವಲ್ಲಿ ನಟರಾಜನ್ ಯಶಸ್ವಿಯಾದರು.

ನಟರಾಜನ್ ಬೌಲಿಂಗ್ ವೀಕ್ಷಿಸಿದ ಆಸ್ಟ್ರೇಲಿಯಾದ ದಿಗ್ಗಜ ವೇಗಿ ಗ್ಲೆನ್ ಮೆಕ್‌ಗ್ರಾಥ್ "ನಟರಾಜನ್ ಅದ್ಭುತ ಆಟದಿಂದ ನಾನು ಪ್ರಭಾವಿತನಾಗಿದ್ದೇನೆ. ಆತ ನಿಜಕ್ಕೂ ಕೂಟ ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತಕ್ಕೆ ಸಿಕ್ಕ ಪ್ರತಿಭೆ. ಆತ ಮುಂದುವರಿಸುವ ಭರವಸೆಯಿದೆ" ಎಂದು ಕಾಮೆಂಟರಿ ಹೇಳುವ ಸಂದರ್ಭದಲ್ಲಿ ನೆಚ್ಚುಗೆ ವ್ಯಕ್ತಪಡಿಸಿದರು.

Story first published: Monday, December 7, 2020, 21:43 [IST]
Other articles published on Dec 7, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+