WTC Final, India vs New Zealand, ಫಸ್ಟ್ ಸೆಶನ್ ಮಳೆಗೆ ಆಹುತಿ?!

ಸೌತಾಂಪ್ಟನ್: ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಭಾರತ-ನ್ಯೂಜಿಲೆಂಡ್ ಮಧ್ಯೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಜೂನ್ 18-22ರ ವರೆಗೆ ನಡೆಯಲಿದೆ. ಈ ಪಂದ್ಯದ ಆರಂಭಿಕ ಸೆಶನ್ ಮಳೆಗೆ ಆಹುತಿಯಾಗಲಿದೆ ಎಂದು ವರದಿಯೊಂದು ಹೇಳಿದೆ.
ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಆರಂಭಗೊಳ್ಳುವ ಜೂನ್ 18ರಂದು ಸೌತಾಂಪ್ಟನ್‌ನಲ್ಲಿ ತುಂಬಾ ಮಳೆ ಸುರಿಯುತ್ತಿದೆ. ಹೀಗಾಗಿ ಉದ್ದೇಶಿತ ಪಂದ್ಯದ ಆರಂಭಿಕ ಸೆಶನ್ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಮೂಲವೊಂದು ಹೇಳಿದೆ.
ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನ ಪಂದ್ಯ ನಡೆಯುವ ಮೊದಲ ದಿನ ಸೌತಾಂಪ್ಟನ್‌ನಲ್ಲಿ ಶುಕ್ರವಾರ ಕನಿಷ್ಠ 17 ಡಿಗ್ರೀ ಸೆಲ್ಶಿಯಸ್ ತಾಪಮಾನ ಇರಲಿದೆ. ಇದರರ್ಥ ಮಳೆಯ ಸಾಧ್ಯತೆ ತುಂಬಾ ಹೆಚ್ಚು . ಹೀಗಾಗಿ ಆರಂಭಿಕ ಪಂದ್ಯಕ್ಕೆ ಮಳೆಯಿಂದಾಗಿ ತುಂಬಾ ಸಮಸ್ಯೆಯಾಗಲಿದೆ. ಮೊದಲ ದಿನ ಬಹುತೇಕ ಪಂದ್ಯ ನಡೆಯದಿರಲೂಬಹುದು ಎನ್ನುತ್ತಿದೆ ಸೌತಾಂಪ್ಟನ್ ಹವಾಮಾನ ವರದಿ.
ಮೊದಲ ದಿನ ಪಂದ್ಯ ನಡೆಸಲು ಸಾಧ್ಯವೇ ಆಗದಿದ್ದರೆ ಪಂದ್ಯ ರಿಸರ್ವ್ಡ್ ಡೇಗೆ ಹೋಗುವ ಎಲ್ಲಾ ಸಾಧ್ಯತೆಗಳಿವೆ. ಅಂದರೆ ಐದು ದಿನಗಳಲ್ಲದೆ ಆರನೇ ದಿನವೂ ಪಂದ್ಯ ನಡೆಸುವ ಲಕ್ಷಣಗಳಿವೆ. ಶುಕ್ರವಾರವಂತೂ ಸೌತಾಂಪ್ಟನ್‌ನಲ್ಲಿ ಬಿಡದೆ ಗುಡುಗು ಸಹಿತ ಮಳೆಯಾಗುವುದರಿಂದ ಟಾಸ್ ಕೂಡ ನಡೆಯೋದು ಅನುಮಾನವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications