For Quick Alerts
ALLOW NOTIFICATIONS  
For Daily Alerts
 

World Cup 2023: ಎದುರಾಳಿಗಳ ನಿದ್ದೆಗೆಡಿಸುತ್ತಿರುವ ಭಾರತದ ಪಂಚ ಪಾಂಡವರು

By ನಾಗೇಶ್

ಪ್ರಸಕ್ತ ವರ್ಷ ಟೀಮ್ ಇಂಡಿಯಾ ಭರ್ಜರಿ ಫಾರ್ಮ್‌ ನಲ್ಲಿದೆ. ತಂಡದ ಬ್ಯಾಟರ್‌ ಗಳು ಸ್ಥಿರವಾಗಿ ರನ್‌ ಕಲೆ ಹಾಕುವಲ್ಲಿ ಸಫಲರಾದರೆ, ಬೌಲರ್‌ ಗಳು ವಿಕೆಟ್‌ ಬೇಟೆ ಹಾಗೂ ರನ್‌ ಗಳಿಗೆ ಕಡಿವಾಣ ಹಾಕಿ ಮಿಂಚುತ್ತಿದ್ದಾರೆ. 2023ರಲ್ಲಿ ಹಲವು ಸ್ಟಾರ್‌ ಆಟಗಾರರು ಫಾರ್ಮ್‌ ಕಂಡುಕೊಂಡಿದ್ದಾರೆ. ಯುವ ಆಟಗಾರರು ಭರವಸೆ ಮೂಡಿಸಿದ್ದಾರೆ. ಈ ಸಾಲಿನಲ್ಲಿ ಹಲವು ಆಟಗಾರರು ಎದ್ದು ಕಾಣುತ್ತಾರೆ.

ಇವರುಗಳು ಟೀಮ್ ಇಂಡಿಯಾದ ಗೆಲುವಿನಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸಿದ್ದಾರೆ. ಭಾರತದ ಜಯದಲ್ಲಿ ಮಿಂಚಿದ ಸ್ಟಾರ್‌ ಬೌಲರ್‌ ಗಳ ಪಟ್ಟಿ ಪ್ರಸಕ್ತ ಸಾಲಿನಲ್ಲಿ ದೊಡ್ಡದಿದೆ. ಇದರಲ್ಲಿ ಈ ಪಂಚ ಪಾಂಡವರು ನಿಜಕ್ಕೂ ಎದುರಾಳಿಗಳ ಗೇಮ್‌ ಪ್ಲ್ಯಾನ್‌ ಉಲ್ಟಾ ಮಾಡುವುದರಲ್ಲಿ ಪರಿಣಿತರು.

Five Indian All Rounders And Bowlers In Good Touch Best Performance Expected in ODI World Cup 2023
v

ಹಲವು ತಿಂಗಳುಗಳ ಕಾಲ ಟೀಮ್ ಇಂಡಿಯಾದಿಂದ ಹೊರಗಿದ್ದು, ಬಳಿಕ ಅವಕಾಶ ಸಿಕ್ಕಾಗ ಸದುಪಯೋಗ ಪಡಿಸಿಕೊಂಡ ಚೈನ್‌ ಮೆನ್‌ ಬೌಲರ್‌ ಕುಲ್‌ದೀಪ್‌ ಯಾದವ್‌ ಪ್ರಸಕ್ತ ವರ್ಷ ಮ್ಯಾಚ್‌ ವಿನ್ನರ್‌ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಸುದೀರ್ಘ ಸಮಯದ ನಂತರ ಫಾರ್ಮ್‌ ಗೆ ಮರಳಿರುವ ಕುಲ್‌ದೀಪ್‌ ಯಾದವ್ ಈ ವರ್ಷ ಇದುವರೆಗೆ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ.

ಕುಲ್‌ದೀಪ್‌ 2023 ರಲ್ಲಿ ಏಕದಿನ ಮಾದರಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಈ ವರ್ಷ ಕುಲ್‌ದೀಪ್‌ ಒಟ್ಟು 17 ಏಕದಿನ ಪಂದ್ಯಗಳಲ್ಲಿ 33 ವಿಕೆಟ್ ಪಡೆದಿದ್ದು, ವಿಶ್ವಕಪ್ ನಲ್ಲೂ ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆ ಹೊಂದಿದ್ದಾರೆ.

ಹೈದರಾಬಾದ್‌ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌

ಬರೀ ಟೆಸ್ಟ್‌ ಪಂದ್ಯಗಳಿಗೆ ಅಷ್ಟೇ ಸೀಮಿತವಾಗಿದ್ದ ಹೈದರಾಬಾದ್‌ ವೇಗದ ಬೌಲರ್‌ ಮೊಹಮ್ಮದ್‌ ಸಿರಾಜ್‌, ಪ್ರಸಕ್ತ ವರ್ಷ ಬ್ಲ್ಯೂ ಜೆರ್ಸಿಯಲ್ಲೂ ಕಮಾಲ್‌ ಪ್ರದರ್ಶನ ನೀಡಿದ್ದಾರೆ. ಗರಿಷ್ಠ ವಿಕೆಟ್‌ ಪಡೆದವರ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಎರಡನೇ ಸ್ಥಾನದಲ್ಲಿದ್ದಾರೆ.

ಸಿರಾಜ್ 2023ರಲ್ಲಿ ಟೀಮ್ ಇಂಡಿಯಾ ಪರ ಒಟ್ಟು 14 ಏಕದಿನ ಪಂದ್ಯಗಳನ್ನು ಆಡಿದ್ದು, ಒಟ್ಟು 30 ವಿಕೆಟ್‌ಗಳನ್ನು ಪಡೆದಿದ್ದಾರೆ. ವಿಶ್ವಕಪ್‌ನಲ್ಲಿ ಮ್ಯಾಜಿಕ್ ಪ್ರದರ್ಶಿಸಲು ಅವರು ಸಿದ್ಧರಾಗಿದ್ದಾರೆ.

ಆಲ್ ರೌಂಡರ್ ಶಾರ್ದೂಲ್ ಠಾಕೂರ್

ಟೀಮ್ ಇಂಡಿಯಾದ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಶಾರ್ದೂಲ್ ಈ ವರ್ಷ ಭಾರತ ತಂಡದ ಪರ ಒಟ್ಟು 13 ಏಕದಿನ ಪಂದ್ಯಗಳನ್ನು ಆಡುವ ಅವಕಾಶ ಪಡೆದಿದ್ದು, ಇದರಲ್ಲಿ 19 ವಿಕೆಟ್ ಪಡೆದಿದ್ದಾರೆ.

ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್‌ ಹಾಗೂ ಸೀಮಿತ ಓವರ್‌ಗಳಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಹಿಂದೆ ಬಿದ್ದಿಲ್ಲ. ಶಮಿ ಈ ವರ್ಷ ಟೀಮ್ ಇಂಡಿಯಾ ಪರ 12 ಏಕದಿನ ಪಂದ್ಯಗಳಲ್ಲಿ ಒಟ್ಟು 19 ವಿಕೆಟ್ ಪಡೆದಿದ್ದಾರೆ.

ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಪಾಂಡ್ಯ ಐದನೇ ಸ್ಥಾನ

ಹಾರ್ದಿಕ್ ಪಾಂಡ್ಯ ಈ ವರ್ಷ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ ಈ ವರ್ಷ ಟೀಮ್ ಇಂಡಿಯಾ ಪರ 16 ಏಕದಿನ ಪಂದ್ಯಗಳನ್ನಾಡಿದ್ದು, ಒಟ್ಟು 16 ವಿಕೆಟ್ ಕಬಳಿಸಿದ್ದು, ವಿಶ್ವಕಪ್ ನಲ್ಲೂ ಅದ್ಭುತವಾಗಿ ಬೌಲಿಂಗ್ ಮಾಡುವ ನಿರೀಕ್ಷೆ ಇದೆ.

Story first published: Sunday, October 1, 2023, 17:27 [IST]
Other articles published on Oct 1, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+