For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾ ವಿರುದ್ಧ ಟೀಮ್ ಇಂಡಿಯಾದ ಐವರು ಆಟಗಾರರ ಅಬ್ಬರಸಿದರೆ ಗೆಲುವು ಫಿಕ್ಸ್‌

ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶಗಳ ನಡುವಣ ಟೆಸ್ಟ್‌ ಗುರುವಾರದಿಂದ ಆರಂಭವಾಗಲಿದೆ. ಈ ಟೆಸ್ಟ್‌ ಪಂದ್ಯದಲ್ಲಿ ಗೆಲುವು ದಾಖಲಿಸಿ, ದಾಖಲೆಯ ಪುಟಕ್ಕೆ ಸ್ಥಾನ ಪಡೆಯುವ ಕನಸು ಟೀಮ್ ಇಂಡಿಯಾದ್ದಾಗಿದೆ. ಸ್ಟಾರ್‌ ಆಟಗಾರರು ಈಗಾಗಲೇ ಮೈದಾನದಲ್ಲಿ ಬೆವರು ಹರಿಸುತ್ತಿದ್ದು, ಬಾಂಗ್ಲಾ ಕಾಡಲು ಸಜ್ಜಾಗಿದ್ದಾರೆ.

ಗುರುವಾರದಿಂದ ಆರಂಭವಾಗುವ ಟೆಸ್ಟ್‌ ಪಂದ್ಯದಲ್ಲಿ ಎಲ್ಲರ ಕಣ್ಣು ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಮೇಲೆ ನೆಟ್ಟಿದೆ. ಬಾಂಗ್ಲಾದೇಶದ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾ ಗೆಲುವು ದಾಖಲಿಸಬೇಕಿದ್ದಲ್ಲಿ ಈ ಆಟಗಾರರು ಭರ್ಜರಿ ಪ್ರದರ್ಶನ ನೀಡುವುದು ಅನಿವಾರ್ಯವಾಗಿದೆ. ಆ ಐವರು ಆಟಗಾರರು ಯಾರು ಇಲ್ಲಿದೆ ವರದಿ.

Five Key Players to Watch in Team India s Test Battle Against Bangladesh

ವಿರಾಟ್‌ ಕೊಹ್ಲಿ

ಸುಮಾರು 37 ವಾರಗಳ ಬಳಿಕ ಟೆಸ್ಟ್‌ ಪಂದ್ಯವನ್ನು ಆಡುತ್ತಿರುವ ವಿರಾಟ್ ಕೊಹ್ಲಿ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇವರು ತವರಿನಲ್ಲಿ ಬಾಂಗ್ಲಾ ಬೌಲರ್‌ಗಳನ್ನು ಕಾಡಲು ಸಿದ್ಧರಾಗಿದ್ದಾರೆ. ಸ್ಪಿನ್ ಬೌಲರ್ ಆಗಿರಲಿ, ಪೇಸರ್ ಆಗಿರಲಿ, ವಿರಾಟ್ ಕೊಹ್ಲಿ ಸರಾಗವಾಗಿ ರನ್ ಕಲೆ ಹಾಕಬಲ್ಲರು. ಇವರು ಬಾಂಗ್ಲಾ ವಿರುದ್ಧ ಈಗಾಗಲೇ ಒಂದು ಬಾರಿ ದ್ವಿಶತಕದ ಸಾಧನೆ ಮಾಡಿದ್ದಾರೆ. ಹೀಗಾಗಿ ಇವರ ಮೇಲೆ ಭರವಸೆ ಹೆಚ್ಚಿದೆ.

ರೋಹಿತ್ ಶರ್ಮಾ

ಟೆಸ್ಟ್‌ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರ ಅಂಕಿ ಅಂಶ ಏನೆ ಇರಬಹುದು. ಆದರೆ ಪ್ರಸಕ್ತ ಫಾರ್ಮ್‌ ಮಾತ್ರ ಎದುರಾಳಿಗಳ ನಿದ್ದೆಗೆಡಿಸಿದೆ. ಇನಿಂಗ್ಸ್ ಆರಂಭದಿಂದಲೂ ರೋಹಿತ್‌ ಅಮೋಘ ಬ್ಯಾಟಿಂಗ್ ನಡೆಸಬಲ್ಲ ಕ್ಷಮತೆಯನ್ನು ಕರಗತ ಮಾಡಿಕೊಂಡಿದ್ದಾರೆ. ತವರು ನೆಲದಲ್ಲಿ ಅವರು ಬಾಂಗ್ಲಾ ಬೌಲರ್‌ಗಳಿಗೆ ಕಾಡಬಹುದು. ಇವರ ಫಾರ್ಮ್‌ ಪ್ರವಾಸಿ ತಂಡಕ್ಕೆ ತಲೆನೋವಾಗಿ ಪರಿಣಮಿಸ ಬಹುದು.

Five Key Players to Watch in Team India s Test Battle Against Bangladesh

ರಿಷಭ್ ಪಂತ್

ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಧಮಾಕೆದಾರ್‌ ಪ್ರದರ್ಶನ ನೀಡುತ್ತಿರುವ ರಿಷಭ್‌ ಪಂತ್, ಟೆಸ್ಟ್‌ ಫಾರ್ಮೆಟ್‌ನಲ್ಲೂ ಅಬ್ಬರಿಸಲು ಸಿದ್ಧತೆ ನಡೆಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ನೀಡಿದ ಪ್ರದರ್ಶನ ಇವರ ಮೇಲಿನ ಭರವಸೆಯನ್ನು ಹೆಚ್ಚಿಸಿದೆ. ಇನ್ನು ದುಲೀಪ್ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಸ್ಥಿರ ಆಟದಿಂದ ಬಿಸಿಸಿಐ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ. ಹೀಗಾಗಿ ಇವರ ಮೇಲೆ ಬಾಂಗ್ಲಾ ಬೌಲರ್‌ಗಳು ಕಣ್ಣು ನೆಟ್ಟಿರುತ್ತಾರೆ.

ಜಸ್ಪ್ರಿತ್ ಬುಮ್ರಾ

ಟೀಮ್ ಇಂಡಿಯಾದ ಯಾರ್ಕರ್‌ ಸ್ಪೇಷಲಿಸ್ಟ್ ಖ್ಯಾತಿಯ ಜಸ್ಪ್ರಿತ್‌ ಬುಮ್ರಾ, ಬಾಂಗ್ಲಾ ಬ್ಯಾಟರ್‌ಗಳಿಗೆ ತಲೆ ನೋವಾಗಿ ಕಾಣಿಸಿಕೊಳ್ಳಬಹುದು. ಇವರು ಯಾವುದೇ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಪೆಟ್ಟು ನೀಡಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಇನ್ನು ಚೆನ್ನೈ ಪಿಚ್ ಕೊಂಚ ವೇಗದ ಬೌಲರ್‌ಗಳಿಗೆ ಸಹಾಯ ಮಾಡಲಿದೆ ಎಂದು ತಿಳಿದು ಬಂದಿದ್ದು, ಈ ಸಮಯದಲ್ಲಿ ಬುಮ್ರಾ ಅವರನ್ನು ಎದುರಿಸುವುದು ತುಸು ಕಷ್ಟ.

Five Key Players to Watch in Team India s Test Battle Against Bangladesh

ಆರ್‌.ಅಶ್ವಿನ್

ಟೀಮ್ ಇಂಡಿಯಾ ಟೆಸ್ಟ್‌ ಸರಣಿಯನ್ನು ತವರಿನಲ್ಲಿ ಗೆಲ್ಲುವಲ್ಲಿ ಅಶ್ವಿನ್ ಪಾತ್ರ ಮುಖ್ಯ. ಇವರು ತಮ್ಮ ಪಿರ್ಕಿ ಮೂಲಕ ಬಾಂಗ್ಲಾ ಬ್ಯಾಟರ್‌ಗಳಿಗೆ ಕಾಟ ನೀಡಬಲ್ಲರು. ಸ್ಪಿನ್ ಸ್ನೇಹಿ ಪಿಚ್ ಆಗಿದ್ದರಿಂದ ಇವರ ಅಬ್ಬರ ಜೋರಾಗಿರುತ್ತದೆ. ಅಶ್ವಿನ್‌ ಭಾರತದಲ್ಲಿ ಮಾರಕ ಬೌಲಿಂಗ್ ನಡೆಸಬಲ್ಲ ಬೌಲರ್‌ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ತಮ್ಮ ತವರು ನೆಲದಲ್ಲಿ ಟೆಸ್ಟ್‌ ನಡೆಯುತ್ತಿದ್ದರಿಂದ ಇವರ ಮೇಲೆ ಅಪಾರ ಭರವಸೆ ಇಟ್ಟುಕೊಳ್ಳಲಾಗಿದೆ.

Story first published: Wednesday, September 18, 2024, 9:10 [IST]
Other articles published on Sep 18, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+