For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌: ಭಾರತ vs ದ.ಆಫ್ರಿಕಾ ನಡುವಣ 5 ಅದ್ಭುತ ODI ಪಂದ್ಯಗಳಿವು

Five most memorable ODIs between India and South Africa

ಬೆಂಗಳೂರು, ಜೂನ್‌ 05: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ವಿಶ್ವಕಪ್‌ನಲ್ಲಿ ಹೆಚ್ಚುಬಾರಿ ಮುಖಾಮುಖಿಯಾಗಿಲ್ಲ. ಬುಧವಾರದ ಪಂದ್ಯಕ್ಕೂ ಮುನ್ನ ಇತ್ತಂಡಗಳು ವಿಶ್ವಕಪ್‌ನಲ್ಲಿ ಕೇವಲ ನಾಲ್ಕು ಬಾರಿಯಷ್ಟೇ ಮುಖಾಮುಖಿಯಾಗಿವೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ಆದರೆ, ವಿಶ್ವಕಪ್‌ ಹೊರತಾಗಿ ಹಲವು ಬಾರಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯಗಳು ಕ್ರಿಕೆಟ್‌ ಅಭಿಮಾನಿಗಳಿಗೆ ಸರದೌರಣವನ್ನೇ ಬಡಿಸಿವೆ. ಕ್ರಿಕೆಟ್‌ ಜಗತ್ತಿನ ದೈತ್ಯ ತಂಡಗಳೆರಡರ ನಡುವಣ ಕಾದಾಟ ಅಭಿಮಾನಿಗಳ ಕಣ್ಣಿಗೆ ಹಬ್ಬವೇ ಸರಿ.

ಅಂದಹಾಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮೂಡಿ ಬಂದಿರುವ ಐದು ಅತ್ಯುತ್ತುಮ ಪಂದ್ಯಗಳನ್ನು ಮೈಖೇಲ್‌ ಇಲ್ಲಿ ವಿವರಿಸಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಇನ್ನಿತರ ರೋಚಕ ಪಂದ್ಯಗಳು ಯಾವುವು ಎಂಬುದನ್ನು ಕಾಂಮೆಂಟ್‌ ಮೂಲಕ ತಿಳಿಸಿ.

ಹೀರೊ ಕಪ್‌ ಸೆಮಿಫೈನಲ್ಸ್‌ (1993)

ಹೀರೊ ಕಪ್‌ ಸೆಮಿಫೈನಲ್ಸ್‌ (1993)

ಕೋಲ್ಕೊತಾದ ಈಡನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಪಂದ್ಯದಲ್ಲಿ 196 ರನ್‌ಗಳನ್ನು ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡ ಕೊನೆಯ ಓವರ್‌ನಲ್ಲಿ 6 ರನ್‌ಗಳನ್ನು ಮಾತ್ರವೇ ಗಳಿಸಬೇಕಿತ್ತು. ಈ ಸಂದರ್ಭದಲ್ಲಿ ಚೆಂಡನ್ನು ತಮಗೆ ನೀಡುವಂತೆ ನಾಯಕ ಮೊಹಮ್ಮದ್‌ ಅಝರುದ್ದೀನ್‌ ಅವರಲ್ಲಿ ಕೇಳಿಕೊಂಡ ಸಚಿನ್‌ ತೆಂಡೂಲ್ಕರ್‌, ಮೊದಲ ಎಸೆತದಲ್ಲೇ ಫ್ಯಾನಿ ಡಿ'ವಿಲಿಯರ್ಸ್‌ ಅವರನ್ನು ರನ್‌ಔಟ್‌ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ತಮ್ಮ ಅದ್ಭುತ ಲೆಗ್‌ ಸ್ಪಿನ್‌ ಎಸೆತಗಳೊಂದಿಗೆ ಸಚಿನ್‌, ಸ್ಟ್ರೈಕ್‌ನಲ್ಲಿದ್ದ ನಂ.11 ಬ್ಯಾಟ್ಸ್‌ಮನ್‌ ಅಲಾನ್‌ ಡೊನಾಲ್ಡ್‌ ಎದುರು ಅತ್ಯಮೂಲ್ಯ ಮೂರು ಡಾಟ್‌ ಬಾಲ್‌ಗಳನ್ನು ಎಸೆದಿದ್ದರು. ಬಳಿಕ ಬ್ರಿಯಾನ್‌ ಮೆಕ್‌ಮಿಲಾನ್‌ ಸ್ಟ್ರೈಕ್‌ ಪಡೆದಾಗ 1 ಎಸೆತದಲ್ಲಿ 4 ರನ್‌ಗಳ ಅಗತ್ಯವಿತ್ತು. ಇಲ್ಲಿ ಮೂರು ರನ್‌ ಗಳಿಸಿದ್ದರೂ ದ. ಆಫ್ರಿಕಾ ಫೈನಲ್‌ ತಲುಪಉತ್ತಿತ್ತು. ಆದರೆ, ಸಚಿನ್‌ ತಮ್ಮ ನಾಯಕನಿಗೆ ನೀಡಿದ ಭರವಸೆಯನ್ನು ಕಾಪಾಡಿಕೊಂಡರು. ಭಾರತ ತಂಡ 2 ರನ್‌ಗಳಿಂದ ಗೆದ್ದು ಫೈನಲ್‌ಗೆ ದಾಪುಗಾಲಿಟ್ಟಿತ್ತು.
ಸಂಕ್ಷಿಪ್ತ ಸ್ಕೋರ್‌
ಭಾರತ: 50 ಓವರ್‌ಗಳಲ್ಲಿ 195/10 (ಅಝರುದ್ದೀನ್‌ 90, ಪ್ರವೀಣ್‌ ಆಮ್ರೆ 48; ಡಿ'ವಿಲಿಯರ್ಸ್‌ 19ಕ್ಕೆ 3, ಸ್ನೆಲ್‌ 33ಕ್ಕೆ 3).
ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 193/9 (ಹಡ್ಸನ್‌ 62, ಮೆಕ್‌ಮಿಲನ್‌ ಔಟಾಗದೆ 48).

ಚಾಂಪಿಯನ್ಸ್‌ ಟ್ರೋಫಿ ಸೆಮಿಫೈನಲ್ಸ್‌ (2002)

ಚಾಂಪಿಯನ್ಸ್‌ ಟ್ರೋಫಿ ಸೆಮಿಫೈನಲ್ಸ್‌ (2002)


ಕೊಲಂಬೋದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಗೆದ್ದು ಬೀಗಿತ್ತು. 262 ರನ್‌ಗಳ ಸವಾಲಿನ ಮೊತ್ತವನ್ನು ಬೆನ್ನತ್ತಿದ ಹರಿಣ ಪಡೆ ಒಂದು ಹಂತದಲ್ಲಿ 192ಕ್ಕೆ 1 ವಿಕೆಟ್‌ ಮಾತ್ರ ಕಳೆದುಕೊಂಡು ಸುಲಭವಾಗಿ ಗುರಿಯತ್ತ ಮುನ್ನಡೆದಿತ್ತು. ಆದರೆ, ಯುವರಾಜ್‌ ಸಿಂಗ್‌ ಅವರ ಮಿಂಚಿನ ಫೀಲ್ಡಿಂಗ್‌ನಿಂದಾಗಿ ಜಾಂಟಿ ರೋಡ್ಸ್‌ ಔಟಾದರೆ, ಶತಕವೀರ ಹರ್ಷಲ್‌ ಗಿಬ್ಸ್‌ ಗಾಯಗೊಂಡು ನಿವೃತ್ತಿ ಹೊಂದಿದ್ದರು. ಬಳಿಕ ವೀರೇಂದ್ರ ಸೆಹ್ವಾಗ್‌ ಅವರ ಸ್ಪಿನ್‌ ಮೋಡಿ ಎದುರು ತಬ್ಬಿಬ್ಬಾದ ದ. ಆಫ್ರಿಕಾ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 251 ರನ್‌ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿ 10 ರನ್‌ಗಳ ಅಂತರದಲ್ಲಿ ಸೋಲುಂಡಿತ್ತು.
ಸಂಕ್ಷಿಪ್ತ ಸ್ಕೋರ್‌
ಭಾರತ: 50 ಓವರ್‌ಗಳಲ್ಲಿ 261/9 (ಯುವರಾಜ್‌ ಸಿಂಗ್‌ 62, ಸೆಹ್ವಾಗ್ 59; ಶಾನ್‌ ಪೊಲಾಕ್‌ 43ಕ್ಕೆ 3).
ದ. ಆಫ್ರಿಕಾ: 50 ಓವರ್‌ಗಳಲ್ಲಿ 251/6 (ಹರ್ಷಲ್‌ ಗಿಬ್ಸ್‌ 116, ಜಾಕ್‌ ಕಾಲಿಸ್‌ 97, ಸೆಹ್ವಾಗ್‌ 25ಕ್ಕೆ 3).

2ನೇ ಏಕದಿನ ಪಂದ್ಯ (2010-2011ರ ದ.ಆಫ್ರಿಕಾ ಪ್ರವಾಸ)

2ನೇ ಏಕದಿನ ಪಂದ್ಯ (2010-2011ರ ದ.ಆಫ್ರಿಕಾ ಪ್ರವಾಸ)

ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಈ ಪಂದ್ಯದಲ್ಲೂ ಭಾರತ ಅಲ್ಪ ಮೊತ್ತ ದಾಖಲಿಸಿದರೂ ವಿಜಯಿಯಾಗಿ ಹೊರಹೊಮ್ಮಿತ್ತು. 191 ರನ್‌ಗಳ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡ 189 ರನ್‌ಗಳಿಗೆ ನಾಟಕೀಯ ರೀತಿಯಲ್ಲಿ ಕುಸಿದು ಭಾರತಕ್ಕೆ 1 ರನ್‌ ಗೆಲುವನ್ನು ಬಿಟ್ಟುಕೊಟ್ಟಿತು. ಟೀಮ್‌ ಇಂಡಿಯಾ ನಾಯಕ ಎಂ.ಎಸ್‌ ಧೋನಿ ಕೊನೆಯ ಓವರ್‌ ಎಸೆಯಲು ಮುನಾಫ್‌ ಪಟೇಲ್‌ಗೆ ಚೆಂಡನ್ನು ನೀಡಿದ್ದರು. ಸ್ಟ್ರೈಕ್‌ಗೆ ಬಂದ ಮೊರ್ನೆ ಮಾರ್ಕೆಲ್‌ ಮತ್ತು ವೇಯ್ನ್‌ ಪಾರ್ನೆಲ್‌ ಇಬ್ಬರೂ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್‌ ಒಪ್ಪಿಸಿದರಲ್ಲೇ ಸುಲಭದ ಗೆಲುವನ್ನು ಕೈಚೆಲ್ಲಿದ್ದರು.
ಸಂಕ್ಷಿಪ್ತ ಸ್ಕೋರ್‌
ಭಾರತ: 47.2 ಓವರ್‌ಗಳಲ್ಲಿ 190/10 (ಯುವರಾಜ್‌ಸಿಂಗ್‌ 53, ಲೊನ್ವಾಬೊ ಸೊಸೊಬೆ 22ಕ್ಕೆ 4).
ದ.ಆಫ್ರಿಕಾ: 43 ಓವರ್‌ಗಳಲ್ಲಿ 189/10 (ಗ್ರೇಮ್‌ ಸ್ಮಿತ್‌ 77; ಮುನಾಫ್‌ ಪಟೇಲ್‌ 29ಕ್ಕೆ 4).

ವಿಶ್ವಕಪ್‌ ಗ್ರೂಪ್‌ ಹಂತದ ಪಂದ್ಯ (2011)

ವಿಶ್ವಕಪ್‌ ಗ್ರೂಪ್‌ ಹಂತದ ಪಂದ್ಯ (2011)

ನಾಗ್ಪುರದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಸಚಿನ್‌ ತೆಂಡೂಲ್ಕರ್‌ ಮತ್ತು ವೀರೇಂದ್ರ ಸೆಹ್ವಾಗ್‌ ಮೊದಲ ವಿಕೆಟ್‌ಗೆ 142 ರನ್‌ಗಳ ಭರ್ಜರಿ ಜೊತೆಯಾಟವಾಡಿದ್ದರು. ಆದರೆ, ಸಚಿನ್‌ ನಿರ್ಗಮಿಸುತ್ತಿದ್ದಂತೆಯೇ ಭಾರತ ತಂಡ ಕೇವಲ 29 ರನ್‌ಗಳನ್ನು ಗಳಿಸುವಷ್ಟರಲ್ಲಿ 9 ವಿಕೆಟ್‌ಗಳನ್ನು ಕೈಚೆಲ್ಲಿತ್ತು. ಡೇಲ್‌ ಸ್ಟೇನ್‌ 5 ವಿಕೆಟ್‌ ಉರುಳಿಸಿ ಭಾರತವನ್ನು 296ಕ್ಕೆ ನಿಯಂತ್ರಿಸಿದ್ದರು. ಬಳಿಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾಕ್ಕೆ ಕೊನೆಯ ಓವರ್‌ನಲ್ಲಿ 13 ರನ್‌ಗಳ ಅಗತ್ಯವಿತ್ತು. ಆಶೀಶ್‌ ನೆಹ್ರಾ ಬೌಲಿಂಗ್‌ನಲ್ಲಿ ಚೆಂಡನ್ನು ಕ್ರಿಡಾಂಗಣದ ಮೂಲೆ ಮೂಲೆಗೆ ಸೇರಿಸಿದ ರಾಬಿನ್‌ ಪೀಟರ್ಸನ್‌ ತಂಡಕ್ಕೆ 3 ವಿಕೆಟ್‌ ಜಯ ತಂದುಕೊಟ್ಟರು.
ಸಂಕ್ಷಿಪ್ತ ಸ್ಕೋರ್‌
ಭಾರತ: 48.4 ಓವರ್‌ಗಳಲ್ಲಿ 296/10 (ಸಚಿನ್‌ ತೆಂಡೂಲ್ಕರ್‌ 111, ಸೆಹ್ವಾಗ್‌ 73; ಸ್ಟೇನ್‌ 50ಕ್ಕೆ 5).
ದ.ಆಫ್ರಿಕಾ: 49.4 ಓವರ್‌ಗಳಲ್ಲಿ 300/7 (ಕಾಲಿಸ್‌ 69, ಹಶೀಮ್‌ ಆಮ್ಲಾ 61, ಹರ್ಭಜನ್‌ 53ಕ್ಕೆ 3).

ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ (2015-2016)

ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ (2015-2016)

ಕಾನ್ಪುರದಲ್ಲಿ ನಡೆದ ಈ ಪಂದ್ಯದಲ್ಲಿ ಎಬಿ ಡಿ'ವಿಲಿಯರ್ಸ್‌ ಮತ್ತು ರೋಹಿತ್‌ ಶರ್ಮ ಅಮೋಘ ಶತಕಗಳನ್ನು ದಾಖಲಿಸಿದ್ದರು. 304 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ ತಂಡಕ್ಕೆ ಕೊನೆಯ 4 ಓವರ್‌ಗಳಲ್ಲಿ ಕೈಲಿದ್ದ 7 ವಿಕೆಟ್‌ಗಳಿಂದ 35 ರನ್‌ಗಳನ್ನು ಗಳಿಸುವ ಅಗತ್ಯವಿತ್ತು. ಈ ಹಂತದಲ್ಲಿ ದಾಳಿಗಿಳಿದ ಇಮ್ರಾನ್‌ ತಾಹಿರ್‌ ಕ್ರೀಸ್‌ನಲ್ಲಿ ನೆಲೆನಿಂತಿದ್ದ ರೋಹಿತ್‌ ಮತ್ತು ಸುರೇಶ್‌ ರೈನಾ ಇಬ್ಬರ ವಿಕೆಟ್‌ ಪಡೆದು ದ. ಆಫ್ರಿಕಾಕ್ಕೆ ಮೇಲುಗೈ ನೀಡಿದರು. ಅಂತಿಮವಾಗಿ ಕಗಿಸೊ ರಬಾಡ ಕೊನೆಯ ಓವರ್‌ನಲ್ಲಿ 11 ರನ್‌ಗಳನ್ನು ಯಶಸ್ವಿಯಾಗಿ ಕಾಯ್ದುಕೊಳ್ಳುವ ಮೂಲಕ ತಂಡಕ್ಕೆ 5 ರನ್‌ಗಳ ಜಯ ತಂದುಕೊಟ್ಟರು.
ಸಂಕ್ಷಿಪ್ತ ಸ್ಕೋರ್‌
ದ.ಆಫ್ರಿಕಾ: 50 ಓವರ್‌ಗಳಲ್ಲಿ 303/5 (ಎಬಿ ಡಿ'ವಿಲಿಯರ್ಸ್‌ 104*, ಫಾಫ್‌ ಡು'ಪ್ಲೆಸಿಸ್‌ 62).
ಭಾರತ: 50 ಓವರ್‌ಗಳಲ್ಲಿ 298/7 (ರೋಹಿತ್‌ ಶರ್ಮಾ 150, ಅಹಿಂಕ್ಯ ರಹಾನೆ 60).

Story first published: Wednesday, June 5, 2019, 18:55 [IST]
Other articles published on Jun 5, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+