For Quick Alerts
ALLOW NOTIFICATIONS  
For Daily Alerts
 

IPL 2025: ಐಪಿಎಲ್‌ನಿಂದ ಹೊರಬಿದ್ದ 5 ಸ್ಟಾರ್ ಪ್ಲೇಯರ್ಸ್; ಬದಲಿ ಆಟಗಾರರ ಕೈ ಹಿಡಿದ ಅದೃಷ್ಟ

ಐಪಿಎಲ್ 2025ರ ಟೂರ್ನಿ ಆರಂಭಕ್ಕೆ ಇನ್ನು 3 ದಿನಗಳು ಬಾಕಿ ಇವೆ. ಎಲ್ಲಾ ತಂಡಗಳು ಸಿದ್ಧತೆಗಳಲ್ಲಿ ನಿರತವಾಗಿವೆ. ಆಟಗಾರರು ಕೂಡ ಐಪಿಎಲ್ 2025ರಲ್ಲಿ ಮಿಂಚಲು ರೆಡಿಯಾಗುತ್ತಿದ್ದಾರೆ. ಈ ಮೆಗಾ ಲೀಗ್‌ನಿಂದ ಕೆಲವು ಆಟಗಾರರನ್ನು ಕೈ ಬಿಟ್ಟಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಐಪಿಎಲ್ 2025 ರಿಂದ ಹೊರಗುದಿರುವ ಆಟಗಾರರ ಪಟ್ಟಿ ಉದ್ದವಾಗುತ್ತಿರುವಂತೆ ಕಾಣುತ್ತಿದೆ. ಇಲ್ಲಿಯವರೆಗೆ 5 ಸ್ಟಾರ್ ಆಟಗಾರರು ಹೊರಬಿದ್ದಿದ್ದಾರೆ.

ಕೆಲವು ಆಟಗಾರರು ವೈಯಕ್ತಿಕ ಕಾರಣಗಳಿಂದ ಐಪಿಎಲ್ 2025ರ ಟೂರ್ನಿಯನ್ನು ತೊರೆದರೆ, ಇನ್ನುಳಿದ ಆಟಗಾರರು ಗಾಯಗೊಂಡು ಲೀಗ್‌ನಿಂದ ಹೊರಗುಳಿದಿದ್ದಾರೆ. ಈ ಟಾಪ್-5 ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.

Five star players have been dropped from IPL 2025 and their replacements have been announced 2025

ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ಲಿಜಾದ್ ವಿಲಿಯಮ್ಸ್ ಮೊಣಕಾಲಿನ ಗಾಯದಿಂದಾಗಿ 2025ರ ಐಪಿಎಲ್‌ನಿಂದ ಹೊರ ನಡೆದಿದ್ದಾರೆ. ಅವರ ಸ್ಥಾನಕ್ಕೆ ಮುಂಬೈ ದಕ್ಷಿಣ ಆಫ್ರಿಕಾದ ಕಾರ್ಬಿನ್ ಬಾಷ್ ಅವರನ್ನು ಸೇರಿಸಿಕೊಂಡಿದೆ. ಬಾಷ್ ದಕ್ಷಿಣ ಆಫ್ರಿಕಾ ಪರ ಒಂದು ಟೆಸ್ಟ್ ಮತ್ತು ಎರಡು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇತ್ತೀಚೆಗೆ ಟಿ20 ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಟೀಮ್ ಇಂಡಿಯಾ ವೇಗದ ಬೌಲರ್ ಉಮ್ರಾನ್ ಮಲಿಕ್ ಐಪಿಎಲ್ 2025ರ ಸೀಸನ್ ಆರಂಭಕ್ಕೂ ಮುನ್ನ ಗಾಯಗೊಂಡಿದ್ದಾರೆ. ಪರಿಣಾಮ ಅವರು ಐಪಿಎಲ್ 2025 ರಿಂದ ಹೊರಗುಳಿದಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಉಮ್ರಾನ್ ಅವರನ್ನು ಹಾಲಿ ಚಾಂಪಿಯನ್ ಕೆಕೆಆರ್ 75 ಲಕ್ಷ ರೂ.ಗೆ ಖರೀದಿಸಿತು. ಈಗ ಅವರ ಬದಲಿಗೆ ಚೇತನ್ ಸಕಾರಿಯಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅವರು 19 ಐಪಿಎಲ್ ಪಂದ್ಯಗಳಲ್ಲಿ 20 ವಿಕೆಟ್‌ಗಳನ್ನು ಪಡೆದಿದ್ದಾರೆ.

ಅಫ್ಘಾನಿಸ್ತಾನದ ಯುವ ಸ್ಪಿನ್ನರ್ ಅಲ್ಲಾ ಗಜನ್ಫರ್ ಕೂಡ ಬೆನ್ನುನೋವಿನಿಂದಾಗಿ ಐಪಿಎಲ್ 2025 ರಿಂದ ಹೊರ ನಡೆದಿದ್ದಾರೆ. ಅವರ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ಮುಜೀಬ್-ಉರ್-ರೆಹಮಾನ್ ಅವರನ್ನು ಬರ ಮಾಡಿಕೊಂಡಿದೆ. ಮುಜೀಬ್ 19 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಅವರ ಹೆಸರಿನಲ್ಲಿ 19 ವಿಕೆಟ್‌ಗಳಿವೆ. ಅವರನ್ನು ಮುಂಬೈ 2 ಕೋಟಿ ರೂ.ಗೆ ಖರೀದಿಸಿದೆ.

ಇಂಗ್ಲೆಂಡ್ ತಂಡದ ವೇಗದ ಬೌಲರ್ ಬ್ರೈಡನ್ ಕಾರ್ಸ್ ಕೂಡ ಗಾಯಗೊಂಡಿರುವುದರಿಂದ ಐಪಿಎಲ್ 2025 ರಿಂದ ಹೊರಗುಳಿದಿದ್ದಾರೆ. ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದರು. ಅವರ ಬದಲಿಯಾಗಿ ವಿಯಾನ್ ಮುಲ್ಡರ್ ಅವರನ್ನು ಆಯ್ಕೆ ಮಾಡಲಾಗಿದೆ. ವಿಯಾನ್ ಮುಲ್ಡರ್18 ಟೆಸ್ಟ್ ಮತ್ತು 25 ಏಕದಿನ ಪಂದ್ಯಗಳನ್ನು ಹೊರತುಪಡಿಸಿ, 11 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 60 ವಿಕೆಟ್‌ಗಳನ್ನು ಪಡೆದಿದ್ದು, 970 ರನ್‌ಗಳನ್ನು ಗಳಿಸಿದ್ದಾರೆ.

ಇಂಗ್ಲೆಂಡ್ ಅನುಭವಿ ಬ್ಯಾಟರ್ ಹ್ಯಾರಿ ಬ್ರೂಕ್ ಕೂಡ ಐಪಿಎಲ್ 2025 ರಲ್ಲಿ ಆಡುತ್ತಿಲ್ಲ. ಅವರಿಗೆ ಯಾವುದೇ ಗಾಯವಾಗಿಲ್ಲ. ಆದರೆ ಸ್ವತಃ ಐಪಿಎಲ್‌ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ. ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು 6.25 ಕೋಟಿ ರೂ.ಗೆ ಖರೀದಿಸಿದೆ. ಬ್ರೂಕ್ ಸತತ ಎರಡನೇ ಬಾರಿಗೆ ಐಪಿಎಲ್‌ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ. ಈ ಕಾರಣದಿಂದಾಗಿ ಬಿಸಿಸಿಐ ಅವರನ್ನು ಐಪಿಎಲ್‌ನಿಂದ 2 ವರ್ಷಗಳ ಕಾಲ ನಿಷೇಧಿಸಿದೆ. ಪ್ರಸ್ತುತ ಅವರ ಬದಲಿ ಆಟಗಾರನನ್ನು ಡೆಲ್ಲಿ ಘೋಷಿಸಲಾಗಿಲ್ಲ.

Story first published: Wednesday, March 19, 2025, 12:25 [IST]
Other articles published on Mar 19, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+