For Quick Alerts
ALLOW NOTIFICATIONS  
For Daily Alerts
 

IPL: ಐಪಿಎಲ್ 2025ರ ನಂತರ 5 ಸೂಪರ್‌ಸ್ಟಾರ್ಸ್ ವೃತ್ತಿಜೀವನ ಅಂತ್ಯ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಟೂರ್ನಿಗೆ ಎಲ್ಲಾ ಸಿದ್ಧತೆಗಳು ಆರಂಭವಾಗಿವೆ. ಈ ಬಾರಿ ಐಪಿಎಲ್ 2025ರಲ್ಲಿ ಅನೇಕ ಸ್ಟಾರ್ ಆಟಗಾರರು ಆಡುವುದನ್ನು ಕಾಣಬಹುದಾಗಿದೆ. ಆದರೆ ಈ ವಯಸ್ಸಿನಲ್ಲಿ ಅವರ ವೃತ್ತಿಜೀವನದ ಅಂತ್ಯವೂ ಹತ್ತಿರದಲ್ಲಿದೆ ಎಂಬುದು ಅಭಿಮಾನಿಗಳ ಮನದಲ್ಲಿದೆ. ಐಪಿಎಲ್ 2025ರ ನಂತರ ನಿವೃತ್ತಿ ಘೋಷಿಸುವ ಅನೇಕ ಆಟಗಾರರಿದ್ದಾರೆ. ಐಪಿಎಲ್ 2025ರ ನಂತರ ನಿವೃತ್ತಿ ಘೋಷಿಸದಬಹುದಾದ ಅಂತಹ 5 ಸ್ಟಾರ್ ಆಟಗಾರರ ಬಗ್ಗೆ ಇಲ್ಲಿ ಮಾಹಿತಿ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಐಪಿಎಲ್ 2025ರಲ್ಲಿ ಆಡಲಿರುವ ಅತ್ಯಂತ ಹಿರಿಯ ಆಟಗಾರನಾಗಿದ್ದಾರೆ. ಧೋನಿ 43ನೇ ವಯಸ್ಸಿನಲ್ಲಿಯೂ ಮೈದಾನಕ್ಕೆ ಬರುತ್ತಿರುವುದು ಅವರ ಅಭಿಮಾನಿಗಳಿಗೆ ಸಿಕ್ಕ ಉಡುಗೊರೆಯಾಗಿದೆ. ಸಿಎಸ್‌ಕೆ ತಂಡವನ್ನು ಐದು ಬಾರಿ ಐಪಿಎಲ್ ಚಾಂಪಿಯನ್ ಮಾಡಿರುವ ಧೋನಿ ಮತ್ತೊಂದು ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಅವರ ವಯಸ್ಸನ್ನು ಪರಿಗಣಿಸಿದರೆ, ಇದು ಅವರ ಕೊನೆಯ ಸೀಸನ್ ಆಗಿರಬಹುದು ಎಂದು ವರದಿಗಳಾಗಿವೆ.

Five superstars careers to end after IPL 2025

ಭಾರತ ತಂಡ ಅನುಭವಿ ವೇಗಿ ಇಶಾಂತ್ ಶರ್ಮಾ ಐಪಿಎಲ್ ಹರಾಜಿನಲ್ಲಿ ಇತಿಹಾಸ ನಿರ್ಮಿಸಿದರು. ಅವರು 2008 ರ ಐಪಿಎಲ್ ಹರಾಜು ಮತ್ತು 2025 ರ ಮೆಗಾ ಹರಾಜಿನಲ್ಲಿ ಮಾರಾಟವಾದ ಏಕೈಕ ಕ್ರಿಕೆಟಿಗರಾದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ ನಂತರ, ಇಶಾಂತ್ ಶರ್ಮಾ ಗುಜರಾತ್ ಟೈಟಾನ್ಸ್ 75 ಲಕ್ಷ ರೂ.ಗೆ ಖರೀದಿಸಿತು. ಐಪಿಎಲ್‌ನಲ್ಲಿ ಇಶಾಂತ್ ಕೋಲ್ಕತ್ತಾ ನೈಟ್ ರೈಡರ್ಸ್, ಡೆಕ್ಕನ್ ಚಾರ್ಜರ್ಸ್, ಸನ್‌ರೈಸರ್ಸ್ ಹೈದರಾಬಾದ್, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದಾರೆ. ಅವರು ಮುಂದಿನ ಸೀಸನ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಲಿದ್ದಾರೆ. ಇಶಾಂತ್ ಬಗ್ಗೆ ಈಗ ಹೆಚ್ಚಿನ ಫ್ರಾಂಚೈಸಿಗಳು ಆಸಕ್ತಿ ತೋರಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರ ಕಾರ್ಯಕ್ಷಮತೆ ಉತ್ತಮವಾಗಿಲ್ಲದಿದ್ದರೆ ಅವರು ನಿವೃತ್ತಿ ಘೋಷಣೆ ಮಾಡಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 2 ಕೋಟಿ ರೂ. ಮೂಲ ಬೆಲೆಗೆ ಖರೀದಿಸಿದೆ. 40 ವರ್ಷ ವಯಸ್ಸಿನ ಡು ಪ್ಲೆಸಿಸ್ ಐಪಿಎಲ್ ಟೂರ್ನಿಯಲ್ಲಿ ಎರಡನೇ ಅತ್ಯಂತ ಹಿರಿಯ ಆಟಗಾರನಾಗಿದ್ದರೂ, ಅಗ್ರ ಕ್ರಮಾಂಕದಲ್ಲಿ ಇನ್ನೂ ಅಪಾಯಕಾರಿ ಬ್ಯಾಟರ್ ಎನಿಸಿಕೊಂಡಿದ್ದಾರೆ. ಡು ಪ್ಲೆಸಿಸ್ 145 ಐಪಿಎಲ್ ಪಂದ್ಯಗಳಲ್ಲಿ 4571 ರನ್ ಗಳಿಸಿದ್ದಾರೆ. ಡು ಪ್ಲೆಸಿಸ್ ಉತ್ತಮ ಪ್ರದರ್ಶನ ನೀಡಲು ವಿಫಲವಾದರೆ ಇದು ಅವರ ಕೊನೆಯ ಸೀಸನ್ ಆಗಿರಬಹುದು.

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮತ್ತೊಬ್ಬ ಅನುಭವಿ ಟೀಮ್ ಇಂಡಿಯಾ ಆಟಗಾರ ಕರಣ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ 50 ಲಕ್ಷ ರೂ.ಗೆ ಖರೀದಿಸಿದೆ. 37ನೇ ವಯಸ್ಸಿನಲ್ಲಿ ಅವರು ಐಪಿಎಲ್ 2025 ರಲ್ಲಿ ಆಡಲಿರುವ ಆರನೇ ಹಿರಿಯ ಆಟಗಾರರಾಗಲಿದ್ದಾರೆ. ಕರಣ್ ಶರ್ಮಾ ಇದುವರೆಗೆ ಐಪಿಎಲ್‌ನಲ್ಲಿ 84 ಪಂದ್ಯಗಳನ್ನು ಆಡಿದ್ದು, 350 ರನ್‌ಗಳನ್ನು ಗಳಿಸಿದ್ದಾರೆ. 76 ವಿಕೆಟ್‌ಗಳನ್ನು ಪಡೆದಿದ್ದಾರೆ. ಕರುಣ್ ಕೂಡ ಐಪಿಎಲ್ 2025ರ ನಂತರ ನಿವೃತ್ತಿ ಘೋಷಣೆ ಮಾಡಬಹುದು.

ಇಂಗ್ಲೆಂಡ್ ತಂಡದ ಅನುಭವಿ ಆಲ್‌ರೌಂಡರ್ ಮೊಯಿನ್ ಅಲಿ ಐಪಿಎಲ್‌ 2025ರಲ್ಲಿ ಆಡಲು ಸಜ್ಜಾಗಿದ್ದಾರೆ. 37 ವರ್ಷದ ಮೊಯಿನ್ ಅಲಿ ಈ ಟೂರ್ನಿಯಲ್ಲಿ ಆಡುತ್ತಿರುವ ಐದನೇ ಹಿರಿಯ ಆಟಗಾರರಾಗಲಿದ್ದಾರೆ. ಅವರನ್ನು ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ಮೆಗಾ ಹರಾಜಿನಲ್ಲಿ 2 ಕೋಟಿ ರೂ.ಗೆ ಖರೀದಿಸಿದೆ. ಮೊಯಿನ್ ಅಲಿ ಯಾವುದೇ ತಂಡಕ್ಕಾಗಿ ಆಡಿದ್ದರೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮೊಯಿನ್ ಅಲಿ ಮತ್ತೊಮ್ಮೆ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 67 ಐಪಿಎಲ್ ಪಂದ್ಯಗಳನ್ನು ಆಡಿರುವ ಅಲಿ, 1162 ರನ್ ಗಳಿಸಿದ್ದು 35 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

Story first published: Tuesday, March 11, 2025, 19:47 [IST]
Other articles published on Mar 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+