ಸಾಮಾನ್ಯವಾಗಿ ಟೆಸ್ಟ್ ಪಂದ್ಯವು 5 ದಿನಗಳವರೆಗೆ ಇರುತ್ತದೆ. ಈ ಐದು ದಿನಗಳು ಗೆಲುವಿಗಾಗಿ ಉಭಯ ತಂಡಗಳು ನಡುವಿನ ಪೈಪೋಟಿ ನೋಡಲು ರೋಚಕವಾಗಿರುತ್ತದೆ. ಇತ್ತೀಚೆಗೆ ಟಿ20 ಲೀಗ್‌ಗಳಿಂದ
ಟೆಸ್ಟ್ ಕ್ರಿಕೆಟ್ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ.
ಈವರೆಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಕಡಿಮೆ ಸಮಯದಲ್ಲಿ ಐದು ಪಂದ್ಯಗಳು ಮುಕ್ತಾಯಗೊಂಡಿವೆ. ಈ 5 ಪಂದ್ಯಗಳು ಕೇವಲ ಒಂದೂವರೆ ಎರಡು ದಿನಗಳಲ್ಲಿ ಮುಗಿದಿರುವುದು ಅಚ್ಚರಿ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕೇಪ್ ಟೌನ್‌ನಲ್ಲಿ 2024ರಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯವು 107 ಓವರ್‌ಗಳಲ್ಲಿ (642 ಎಸೆತಗಳು) ಕೊನೆಗೊಂಡಿತು. ಈ ಪಂದ್ಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ
ಅತ್ಯಂತ ಕಡಿಮೆ ಸಮಯದಲ್ಲಿ ಮುಗಿದ ಪಂದ್ಯವಾಗಿದೆ. ಈ ಟೆಸ್ಟ್ ಅನ್ನು ಭಾರತ ಗೆದ್ದಿತ್ತು.
1932ರಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಕಡಿಮೆ ಸಮಯದಲ್ಲಿ ಕೊನೆಗೊಂಡ ಎರಡನೇ ಟೆಸ್ಟ್ ಆಗಿದೆ. ಈ ಪಂದ್ಯ 109 ಓವರ್‌ಗಳಲ್ಲಿ (656 ಎಸೆತಗಳು) ಮುಕ್ತಾಯವಾಗಿತ್ತು. ದಕ್ಷಿಣ ಆಫ್ರಿಕಾ ಎದುರು ಆಸ್ಟ್ರೇಲಿಯಕ್ಕೆ ಇನ್ನಿಂಗ್ಸ್ ಮತ್ತು 72 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು.
ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯವೂ ಅಲ್ಪ ಅವಧಿಯಲ್ಲಿ ಮುಗಿದಿತ್ತು. 1935ರಲ್ಲಿ ಆಡಲಾದ ಈ ಪಂದ್ಯ ಕೇವಲ 112 ಓವರ್‌ಗಳಿಗೆ (672 ಎಸೆತಗಳು) ನಡೆದಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನ ನಗೆ ಬೀರಿತ್ತು.
1888ರಲ್ಲಿ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆಶಸ್ ಸರಣಿಯ ಪಂದ್ಯ ಐದು ಪೂರೈಸುವ ಮೊದಲೇ ಮುಗಿದಿತ್ತು. ಪ್ರತಿ ಓವರ್‌ಗೆ 4 ಎಸೆತಗಳ ವಿಶಿಷ್ಟ ನಿಯಮದಡಿಯಲ್ಲಿ ಆಡಿದ ಈ ಪಂದ್ಯವು ಕೇವಲ 196 ಓವರ್‌ಗಳಲ್ಲಿ (1176 ಎಸೆತಗಳು) ಕೊನೆಗೊಂಡಿತ್ತು. ಇಂಗ್ಲೆಂಡ್ ಜಯಭೇರಿ ಬಾರಿಸಿತ್ತು.
ಲಾರ್ಡ್ಸ್ ನಡೆದ ಇದೇ ಸರಣಿಯ ಮತ್ತೊಂದು ಪಂದ್ಯ ಕೇವಲ 197 ಓವರ್‌ಗಳಲ್ಲಿ (1182 ಎಸೆತಗಳು) ಮುಕ್ತಾಯವಾಗಿತ್ತು. ಆದರೆ ಈ ಪಂದ್ಯವನ್ನು ಆಸ್ಟ್ರೇಲಯಾ ಗೆದ್ದಿತ್ತು.