For Quick Alerts
ALLOW NOTIFICATIONS  
For Daily Alerts
 

IPL Mega Action 2025: ಐಪಿಎಲ್‌ ಹರಾಜಿನಲ್ಲಿ ಭಾಗವಹಿಸಲಿರುವ ಐದು ಯುವ ಆಟಗಾರರು?

ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಗೆ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ. ಬಹುದಿನಗಳಿಂದ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿರುವ ಯಾವೆಲ್ಲಾ ಆಟಗಾರರು ಯಾವ ತಂಡಕ್ಕೆ ಸೇರಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನವೆಂಬರ್ 24 ಮತ್ತು 25 ರಂದು ಎರಡು ದಿನಗಳ ಕಾಲ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ.

ಈಗಾಗಲೇ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ( ಬಿಸಿಸಿಐ) 1574 ಆಟಗಾರರಲ್ಲಿ ಒಟ್ಟು 574 ಆಟಗಾರರನ್ನು ಮೆಗಾ ಹರಾಜಿಗೆ ಶಾರ್ಟ್ ಲಿಸ್ಟ್‌ ಮಾಡಿದೆ. ಇದರಲ್ಲಿ 208 ವಿದೇಶಿ ಆಟಗಾರರು, 12 ಆನ್‌ಕ್ಯಾಪ್ಡ್‌ ವಿದೇಶಿ ಆಟಗಾರರು ಮತ್ತು 318 ಆನ್‌ಕ್ಯಾಪ್ಡ್‌ ಭಾರತೀಯ ಆಟಗಾರರು ಇದ್ದಾರೆ. ಆದರೆ, ಐಪಿಎಲ್ ಮೆಗಾ ಹರಾಜಿನಲ್ಲಿ ಎಲ್ಲರ ಗಮನ ಸೆಳೆಯುತ್ತಿರುವ ಐದು ಕಿರಿಯ ಆಟಗಾರರಿದ್ದಾರೆ. ಈ ಐದು ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.

Five young players who will participate in the IPL 2025 auction

ವೈಭವ್ ಸೂರ್ಯವಂಶಿ

ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿರುವ ಅತ್ಯಂತ ಕಿರಿಯ ಆಟಗಾರ ಎಂದರೆ ವೈಭವ್ ಸೂರ್ಯವಂಶಿ. ಕೇವಲ 13 ವರ್ಷ ಮತ್ತು 234 ದಿನಗಳ ವಯಸ್ಸಿನ ವೈಭವ್ ಸೂರ್ಯವಂಶಿ ಅವರು ಬಿಹಾರದವರು. ಈಗಾಗಲೇ ಬಿಹಾರದ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಿಂಚಿದ್ದಾರೆ. ಕಳೆದ ತಿಂಗಳು ಚೆನ್ನೈನಲ್ಲಿ ನಡೆದ ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಕೇವಲ 58 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಸುದ್ದಿಯಾಗಿದ್ದರು. ಈಗ ಶ್ರೀಮಂತ ಕ್ರಿಕೆಟ್‌ ಲೀಗ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಆಯುಷ್ ಮ್ಹಾತ್ರೆ

ಯುವ ಆರಂಭಿಕ ಬ್ಯಾಟರ್ ಆಯುಷ್ ಮ್ಹಾತ್ರೆ ಐಪಿಎಲ್‌ನಲ್ಲಿ ತಮ್ಮ ಛಾವು ಮೂಡಿಸಲು ಮೆಗಾ ಹರಾಜಿನಲ್ಲಿದ್ದಾರೆ. ಈಗ ಆಯುಷ್ ಮ್ಹಾತ್ರೆ ಅವರಿಗೆ ಕೇವಲ 17 ವರ್ಷ ವಯಸ್ಸು. ಕಳೆದ ತಿಂಗಳು ನಡೆದ ಇರಾನಿ ಟ್ರೋಫಿಯಲ್ಲಿ ಅವರು ಮುಂಬೈ ಪರ ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಆದರೂ ರಣಜಿ ಟ್ರೋಫಿಯಲ್ಲಿ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ರಣಜಿ ಟ್ರೋಫಿಯಲ್ಲಿ ಅವರು ತಮ್ಮ ಚೊಚ್ಚಲ ಇನ್ನಿಂಗ್ಸ್‌ ಅರ್ಧಶತಕ ಬಾರಿಸಿದ್ದಾರೆ. ಮುಂಬೈ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಆಯುಷ್ ತೋರಿಸಿದ್ದಾರೆ.

ಹಾರ್ದಿಕ್ ರಾಜ್

ಐಪಿಎಲ್ 2025ರ ಮೆಗಾ ಹರಾಜಿನಲ್ಲಿರುವ ಮತ್ತೊಮ್ಮ ಕಿರಿಯ ಆಟಗಾರರ ಎಂದರೆ ಕರ್ನಾಟಕದ ಸ್ಪಿನ್ ಆಲ್‌ರೌಂಡರ್‌ ಹಾರ್ದಿಕ್ ರಾಜ್. ಇತ್ತೀಚೆಗೆ ನಡೆದ ಮಹಾರಾಜ ಟಿ20 ಲೀಗ್‌ನಲ್ಲಿ 18 ವರ್ಷದ ಹಾರ್ದಿಕ್ ರಾಜ್ ಶಿವಮೊಗ್ಗ ಲಯನ್ಸ್ ಪರ ಅದ್ಭುತ ಪ್ರದರ್ಶನ ನೀಡಿದ್ದರು. ಆಡಿದ 7 ಇನ್ನಿಂಗ್ಸ್‌ಗಳಲ್ಲಿ 1 ಅರ್ಧಶತಕ ಸೇರಿದಂತೆ 155 ರನ್‌ಗಳಿಸಿದ್ದರು. ಅಲ್ಲದೆ, ಬೌಲಿಂಗ್‌ನಲ್ಲಿಯೂ 7 ವಿಕೆಟ್‌ ಪಡೆದಿದ್ದರು. ಕಳೆದ ತಿಂಗಳು ಆಸ್ಟ್ರೇಲಿಯಾ ಅಂಡರ್‌-19 ತಂಡದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದರು. ಹಾರ್ದಿಕ್ ಅವರು ಕರ್ನಾಟಕ ಪರ ಮೂರು ರಣಜಿ ಪಂದಗಳನ್ನೂ ಆಡಿದ್ದಾರೆ. ಈಗ ಐಪಿಎಲ್‌ನಲ್ಲಿ ಸದ್ದು ಮಾಡಲು ತಯಾರಾಗಿದ್ದಾರೆ.

ಸಿ ಆಂಡ್ರೆ ಸಿದ್ಧಾರ್ಥ್

ತಮಿಳುನಾಡಿನ ಭರವಸೆ ಯುವ ಬ್ಯಾಟರ್ 18 ವರ್ಷದ ಸಿ ಆಂಡ್ರೆ ಸಿದ್ಧಾರ್ಥ್ ಕೂಡ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿರುವ ಕಿರಿಯ ಆಟಗಾರರಾಗಿದ್ದಾರೆ. ಸಿ ಆಂಡ್ರೆ ಸಿದ್ಧಾರ್ಥ್ ಅವರು ತಮಿಳುನಾಡಿದ ಮಾಜಿ ಬ್ಯಾಟರ್ ಮತ್ತು ಆಯ್ಕೆಗಾರ ಎಸ್‌ ಶರತ್ ಅವರ ಸೋದರಳಿಯ. ಆಂಡ್ರೆ ಮಧ್ಯಮ ಕ್ರಮಾಂಕದ ಬ್ಯಾಟರ್‌ ಆಗಿದ್ದು, ದೇಶೀಯ ಸರ್ಕ್ಯೂಟ್‌ನಲ್ಲಿ ಮಿಂಚಿದ್ದಾರೆ. ಅವರು ತಮಿಳುನಾಡು ಪ್ರೀಮಿಯರ್ ಲೀಗ್‌ (ಟಿಎನ್‌ಪಿಎಲ್‌)ನಲ್ಲಿ ಚೆಪಾಕ್ ಸೂಪರ್‌ ಗಿಲ್ಲಿಸ್‌ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅಲ್ಲದೆ, ರಣಜಿ ಟ್ರೋಫಿಯಲ್ಲಿಯೂ ತಮಿಳುನಾಡು ಪರ ಉತ್ತಮ ರನ್ ಕಲೆ ಹಾಕಿದ್ದಾರೆ. ನವೆಂಬರ್ 30 ರಿಂದ ಆರಂಭವಾಗಲಿರುವ ಅಂಡರ್-19 ಏಪ್ಯಾಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಕ್ವೆನಾ ಮಪಕಾ

ಐಪಿಎಲ್ ಮೆಗಾ ಹರಾಜಿನಲ್ಲಿರುವ ಅತಿ ಕಿರಿಯ ಸಾಗರೋತ್ತರ ಆಟಗಾರ ಕ್ವೆನಾ ಮಪಕಾ ಈಗಾಗಲೇ ಐಪಿಎಲ್‌ನಲ್ಲಿ ಗಮನ ಸೆಳೆದಿದ್ದಾರೆ. ಅಂಡರ್-19 ಏಕದಿನ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಪರ 18 ವರ್ಷದ ವೇಗದ ಬೌಲರ್ ಕ್ವೆನಾ ಮಪಕಾ 21 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು. ಇದರ ಆಧಾರದ ಕ್ವೆನಾ ಮಪಕಾ ಅವರನ್ನು ಕಳೆದ ಬಾರಿ ಮುಂಬೈ ಇಂಡಿಯನ್ಸ್ ಬಿಡ್ ಮಾಡಿತ್ತು. ಆದರೆ ಹೇಳಿಕೊಳ್ಳುವಂತ ಪ್ರದರ್ಶನ ನೀಡಿರಲಿಲ್ಲ. ಇತ್ತೀಚೆಗೆ ಅವರು ವೆಸ್ಟ್‌ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದರ್ಪಣೆ ಮಾಡಿದ್ದರು.

Story first published: Sunday, November 24, 2024, 8:00 [IST]
Other articles published on Nov 24, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+