For Quick Alerts
ALLOW NOTIFICATIONS  
For Daily Alerts
 

2018 ಫ್ಲ್ಯಾಶ್‌ಬ್ಯಾಕ್: ಟೆಸ್ಟ್‌ನಲ್ಲಿ ಕಣ್ಣು ಕೋರೈಸಿದ ಭಾರತೀಯ ಆಟಗಾರರು

Flashback 2018: Top Test innings by India batsmen: From Kohli to Shaw

ಟೆಸ್ಟ್ ಕ್ರಿಕೆಟ್ ವಿಚಾರದಲ್ಲಿ 2018 ಭಾರತೀಯರ ಪಾಲಿಗೆ ಅವಿಸ್ಮರಣೀಯ ವರ್ಷವೆ. ಒಂದಿಡೀ ವರ್ಷದಲ್ಲಿ ಭಾರತೀಯ ಟೆಸ್ಟ್ ಕ್ರಿಕೆಟ್ ರಂಗದೊಳಗೆ ಅನುಭವಿಗಳ ಜೊತೆಗೆ ಹೊಸ ಮುಖಗಳೂ ಕಣ್ಣೆದುರು ಬಂದಿದ್ದಷ್ಟೇ ಅಲ್ಲ, ಮೈದಾನದಲ್ಲಿ ಮಿನುಗಿದ್ದನ್ನೂ ನಾವು ನೋಡಿದ್ದೇವೆ.

ಮಿಂಚುವುದು ಸಹಜ ಅನ್ನಿಸಿದ ಆಟಗಾರರ ಮಧ್ಯೆ ಹೊಸಬರೂ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆ ಗಿಟ್ಟಿಸಿಕೊಂಡ ವರ್ಷ 2018. ರಿಷಬ್ ಪಂತ್, ಹನುಮ ವಿಹಾರಿ, ಪೃಥ್ವಿ ಶಾ ಟೆಸ್ಟ್‌ಗೆ ಪಾದಾರ್ಪಣೆ ಮಾಡಿ ನಮ್ಮ ಗಮನ ಸೆಳೆದಿದ್ದರು. ನಮ್ಮ ಆಟಗಾರರ ಮಿಂಚಿದ ಹೆಚ್ಚಿನ ಪಂದ್ಯಗಳನ್ನು ನಾವು ಗೆದ್ದುಕೊಂಡಿಲ್ಲದೆ ಇರಬಹುದು, ಆದರೆ ಆ ಪ್ರದರ್ಶನಗಳು ನಮ್ಮವರಿಗೆ ಆತ್ಮಸ್ಥೈರ್ಯ ತುಂಬಿದ್ದು ಸುಳ್ಳಲ್ಲ. ಹೀಗಾಗಿಯೇ 2018 ದೇಸೀ ಟೆಸ್ಟ್ ಕ್ರಿಕೆಟ್ ವಿಚಾರಕ್ಕೆ ಗಮನಾರ್ಹ ಅಂದಿದ್ದು.

ವರ್ಷದುದ್ದಕ್ಕೂ ನಡೆದ ಟೆಸ್ಟ್‌ ಪಂದ್ಯಗಳನ್ನು ಗಮನಿಸಿದರೆ ಹೆಚ್ಚಿನವುಗಳಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೇ ಮಿನುಗಿದ್ದು ಕಾಣಿಸುತ್ತದೆ. ಈ ನಡುವೆ ಇತರರೂ ಸಾಧನೆಯ ಝಲಕ್ ತೋರಿಸಿದ್ದಾರೆ..

1. ವಿರಾಟ್ ಕೊಹ್ಲಿ, 153, ಸೆಂಚುರಿಯನ್

1. ವಿರಾಟ್ ಕೊಹ್ಲಿ, 153, ಸೆಂಚುರಿಯನ್

ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಂಡಿದ್ದಾಗ ಕೊಹ್ಲಿ ಶತಕ ಬಾರಿಸಿದ್ದರು. ಆತಿಥೇಯ ಆಫ್ರಿಕಾ ಮೊದಲ ಇನ್ನಿಂಗ್ಸ್ ನಲ್ಲಿ 335 ರನ್ ಗಳಿಸಿತ್ತು. ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಹೋರಾಟ ನಡೆಸಿದ್ದು ಕೊಹ್ಲಿ ಮತ್ತು ಮುರಳಿ ವಿಜಯ್ ಮಾತ್ರ. ಕೊಹ್ಲಿ ಆಗ 153 ರನ್ ಬಾರಿಸಿದ್ದರು. ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್ ತೋರಿಸಿದ ಭಾರತ ಈ ಪಂದ್ಯವನ್ನು 135 ರನ್‌ಗಳಿಂದ ಸೋತಿತ್ತು.

2. ವಿರಾಟ್ ಕೊಹ್ಲಿ, 149, ಬರ್ಮಿಂಗ್‌ಹ್ಯಾಮ್

2. ವಿರಾಟ್ ಕೊಹ್ಲಿ, 149, ಬರ್ಮಿಂಗ್‌ಹ್ಯಾಮ್

ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡಿದ್ದಾಗ ಮೊದಲ ಟೆಸ್ಟ್‌ನಲ್ಲಿ ಕೊಹ್ಲಿ ಹೋರಾಟದ ಹೊರತಾಗಿಯೂ ಭಾರತ 31 ರನ್‌ಗಳಿಂದ ಸೋತಿತ್ತು. ಇದರಲ್ಲಿ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 149 ರನ್‌ ಗಳಿಸಿ ಗಮನ ಸೆಳೆದಿದ್ದರು. ಕೊಹ್ಲಿ ಒಬ್ಬರೇ ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ತಂಡದ ಪರ ಸೆಣಸಾಟ ನಡೆಸಿದ್ದು.

3. ವಿರಾಟ್ ಕೊಹ್ಲಿ, 97 & 103, ನಾಟಿಂಗ್ಹ್ಯಾಮ್

3. ವಿರಾಟ್ ಕೊಹ್ಲಿ, 97 & 103, ನಾಟಿಂಗ್ಹ್ಯಾಮ್

ಇಂಗ್ಲೆಂಡ್ ಮತ್ತು ಐರ್ಲೆಂಡ್ ಪ್ರವಾಸದ ಸಂದರ್ಭ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇಂಗ್ಲೆಂಡ್‌ನ ನಾಟಿಂಗ್ಹ್ಯಾಮ್ ನಲ್ಲಿ ನಡೆದಿದ್ದ 3ನೇ ಟೆಸ್ಟ್ ವೇಳೆ ಕೊಹ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 97 ರನ್ ಮತ್ತು ದ್ವಿತೀಯ ಇನ್ನಿಂಗ್ಸ್‌ನಲ್ಲಿ 103 ರನ್ ಕಲೆ ಹಾಕಿದ್ದರು. ಇದರಲ್ಲಿ ಭಾರತ 203 ರನ್ ಭರ್ಜರಿ ಗೆಲುವನ್ನಾಚರಿಸಿತ್ತು.

4. ಚೇತೇಶ್ವರ್ ಪೂಜಾರ, ಅಜೇಯ 132 ರನ್

4. ಚೇತೇಶ್ವರ್ ಪೂಜಾರ, ಅಜೇಯ 132 ರನ್

ಐರ್ಲೆಂಡ್, ಇಂಗ್ಲೆಂಡ್ ಪ್ರವಾಸದಲ್ಲಿದ್ದಾಗ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ನಲ್ಲಿ ಚೇತೇಶ್ವರ್ ಪೂಜಾರ ಶತಕ ಬಾರಿಸಿದ್ದರು. ಇಂಗ್ಲೆಂಡ್‌ನ ಸೌತಾಂಪ್ಟನ್ ನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಇಂಗ್ಲೆಂಡ್ ಉತ್ತಮ ಸ್ಕೋರ್‌ ಗಳಿಸಿತ್ತಲ್ಲದೆ ಪಂದ್ಯವನ್ನು 60 ರನ್‌ನಿಂದ ಜಯಿಸಿತ್ತು (ಭಾರತ 273 & 184, ಇಂಗ್ಲೆಂಡ್ 246 & 271 ರನ್).

5. ವಿರಾಟ್ ಕೊಹ್ಲಿ, 123 ಪರ್ತ್

5. ವಿರಾಟ್ ಕೊಹ್ಲಿ, 123 ಪರ್ತ್

ಇದು ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ ಕೊಹ್ಲಿ ಮಾಡಿದ ಸಾಧನೆ. ಪರ್ತ್ ನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ ನಲ್ಲಿ ಕೊಹ್ಲಿ 123 ರನ್ ಗಳಿಸುವ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಏಕಾಂಗಿ ಹೋರಾಟ ನಡೆಸಿದ್ದರು. ಕೊಹ್ಲಿ ಬಿಟ್ಟರೆ ಅಜಿಂಕ್ಯ ರಹಾನೆ 51 ರನ್ ಸೇರಿಸಿ ತಂಡವನ್ನು ಬೆಂಬಲಿಸಿದ್ದರು. ಆದರೆ ಈ ಪಂದ್ಯವನ್ನು ಭಾರತ 146 ರನ್‌ನಿಂದ ಸೋತಿತ್ತು.

6. ಪೃಥ್ವಿ ಶಾ, 134

6. ಪೃಥ್ವಿ ಶಾ, 134

ವೆಸ್ಟ್ ಇಂಡೀಸ್ ವಿರುದ್ಧ ರಾಜ್‌ಕೋಟ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಪೃಥ್ವಿ ಶಾ ಭರ್ಜರಿ 134 ರನ್ ಸಿಡಿಸಿದ್ದರು. ಅದೂ ಪಾದಾರ್ಪಣೆ ಪಂದ್ಯದಲ್ಲೇ ಶಾ ಅವರ ಆಕರ್ಷಕ ಆಟ ಕ್ರಿಕೆಟ್ ಅಭಿಮಾನಿಗಳ ಮನಸೂರೆಗೊಳಿಸಿತ್ತು. ವಿಂಡೀಸ್ ವಿರುದ್ಧದ ಈ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಬರೋಬ್ಬರಿ 272 ರನ್‌ಗಳಿಂದ ಗೆದ್ದಿತ್ತು.

7. ಚೇತೇಶ್ವರ್ ಪೂಜಾರ, 123

7. ಚೇತೇಶ್ವರ್ ಪೂಜಾರ, 123

ಆಸ್ಟ್ರೇಲಿಯಾ ಪ್ರವಾಸದ ವೇಳೆ ಮೊದಲ ಟೆಸ್ಟ್‌ನಲ್ಲಿ ಗೆಲುವಿನ ರುವಾರಿ ಚೇತೇಶ್ವರ್ ಪೂಜಾರ. ಅಡಿಲೇಡ್ ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ನಲ್ಲಿ ಪೂಜಾರ 123 ರನ್ ಬಾರಿಸಿ ಭಾರತವನ್ನು ರನ್ ಕುಸಿತದಿಂದ ಪಾರು ಮಾಡಿದ್ದರು. ಈ ಪಂದ್ಯವನ್ನು ಟೀಮ್ ಇಂಡಿಯಾ 31 ರನ್‌ನಿಂದ ಜಯಿಸಿತ್ತು.

8. ರಿಷಬ್ ಪಂತ್ 114, ರಾಹುಲ್ 149 ರನ್

8. ರಿಷಬ್ ಪಂತ್ 114, ರಾಹುಲ್ 149 ರನ್

ಈಗೀಗ ಸೊನ್ನೆ ಸುತ್ತತೊಡಗಿರುವ ಕೆಎಲ್ ರಾಹುಲ್ ಆಕರ್ಷಕ ಶತಕ (149 ರನ್, ದ್ವಿತೀಯ ಇನ್ನಿಂಗ್ಸ್‌) ಬಾರಿಸಿದ ಪಂದ್ಯವಿದು. ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ 5ನೇ ಟೆಸ್ಟ್‌ಗಾಗಿ ಓವಲ್‌ನಲ್ಲಿ ಮೈದಾನಕ್ಕಿಳಿದಿದ್ದಾಗ ಯುವ ಆಟಗಾರ ರಿಷಬ್ ಪಂತ್ ಕೂಡ 114 ರನ್ ಪೇರಿಸಿ ಗಮನ ಸೆಳೆದಿದ್ದರು. ಆದರೆ ಪಂದ್ಯವನ್ನು ಭಾರತ 118 ರನ್ ನಿಂದ ಸೋತಿತ್ತು.

Story first published: Tuesday, December 25, 2018, 20:22 [IST]
Other articles published on Dec 25, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+