For Quick Alerts
ALLOW NOTIFICATIONS  
For Daily Alerts
 

ಫ್ಯಾಶ್‌ಬ್ಯಾಕ್ 2020: ಜೊತೆಯಾಗಿ ನಿವೃತ್ತಿ ಘೋಷಿಸಿ ಆಘಾತ ನೀಡಿದ ಧೋನಿ, ರೈನಾ

Flashback 2020: Former captain MS Dhoni and Suresh Raina announced retirement

ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಸುದೀರ್ಘ ಕಾಲ ಕ್ರಿಕೆಟ್‌ನಿಂದ ದೂರವಿದ್ದು ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ತಯಾರಿಯನ್ನು ನಡೆಸುತ್ತಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರೆಲ್ಲೂ ಚೆನ್ನೈನಲ್ಲಿ ಸೇರಿ ಅಭ್ಯಾಸವನ್ನು ನಡೆಸಲು ಜೊತೆಯಾಗಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಎಂಎಸ್ ಧೋನಿ ಬ್ಯಾಟಿಂಗ್ ಕಣ್ತುಂಬಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಎಲ್ಲಾ ಅಭಿಮಾನಿಗಳು ಕಾಯುತ್ತಿದ್ದರು.

ಆದರೆ ಮಾಜಿ ನಾಯಕ ಎಂಎಸ್ ಧೋನಿ ಬೇರೆಯದ್ದೇ ಯೋಚನೆಯಲ್ಲಿದ್ದರು. ಐಪಿಎಲ್‌ಗೆ ಸಿದ್ದತೆ ನಡೆಸುತ್ತದೆ ಆಗಸ್ಟ್ 15ರ ಸಂಜೆ ಕ್ರಿಕೆಟ್ ಪ್ರೇಮಿಗಳು ಅರಗಿಸಿಕೊಲ್ಳಲಾಗದ ಘೋಷಣೆಯನ್ನು ಮಾಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗೆ ನಿವೃತ್ತಿ ಘೋಷಿಸುವುದಾಗಿ ಇನ್ಸ್ಟಾಗ್ರಾಮ್‌ನಲ್ಲಿ ತಿಳಸಿದ್ದರು.

ಇದಾಗಿ ಕೆಲವೇ ಕ್ಷಣಗಳಲ್ಲಿ ಟೀಮ್ ಇಂಡಿಯಾದ ಮತ್ತೋರ್ವ ಅನುಭವಿ ಆಟಗಾರ ಸುರೇಶ್ ರೈನಾ ಕೂಡ ಇದೇ ನಿರ್ಧಾರವನ್ನು ಪ್ರಕಟಿಸಿದರು. ಈ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಆಘಾತವನ್ನು ನೀಡಿದ್ದರು. ಸುದೀರ್ಘ ಕಾಲದಿಂದ ಟೀಮ್ ಇಂಡಿಯಾದ ಭಾಗವಾಗಿದ್ದ ಈ ಇಬ್ಬರು ಆಟಗಾರರು ಆಪ್ರ ಗೆಳಯರೂ ಹೌದು.

ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಘೋಷಿಸುತ್ತಿದ್ದಂತೆಯೇ ಧೋನಿ ಆಪ್ತ ಗೆಳೆಯ ಸುರೇಶ್ ರೈನಾ ತಮ್ಮ ನಿವೃತ್ತಿಯ ನಿರ್ಧಾರವನ್ನೂ ಶನಿವಾರ ಪ್ರಕಟಿಸಿದ್ದರು. ಧೋನಿಯ ಜೊತೆಗೆ ನಾನೂ ಸೇರಿಕೊಳ್ಳುತ್ತಿದ್ದೇನೆ ಎನ್ನುವ ಮೂಲಕ ಆಪ್ತ ಗೆಳೆಯನ ನಿವೃತ್ತಿಯಲ್ಲಿ ತಾನೂ ಸಾಥ್ ನೀಡಿ ದಿಗಿಲು ಹುಟ್ಟಿಸಿದ್ದರು.

ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಒಂದು ವರ್ಷದ ನಂತರ ಸುರೇಶ್ ರೈನಾ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಟೀಮ್ ಇಂಡಿಯಾದಲ್ಲಿ ಸುರೇಶ್ ರೈನಾ ಸ್ಥಾನವನ್ನು ಪಡೆದುಕೊಂಡಿದ್ದರು. ಸುರೇಶ್ ರೈನಾ ಅವರನ್ನು ಧೋನಿ ತಂಡದ ಆಲ್‌ರೌಂಡರ್ ಆಗಿ ಉತ್ತಮ ರೀತಿಯಲ್ಲಿ ಬಳಸಿಕೊಂಡರು. ನಾಯಕನ ನಿರೀಕ್ಷೆಗೆ ತಕ್ಕನಾಗಿ ಸುರೇಶ್ ರೈನಾ ಕೂಡ ಪ್ರದರ್ಶನವನ್ನು ನೀಡುತ್ತಿದ್ದರು. ಹೀಗಾಗಿ ಇಬ್ಬರ ನಡುವೆ ಅಂಗಳದಾಚೆಯೂ ಅದ್ಭುತ ಗೆಳೆತನ ಬೆಳೆದಿತ್ತು.

Story first published: Thursday, December 17, 2020, 13:11 [IST]
Other articles published on Dec 17, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+