
ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನ
ವಿರಾಟ್ ಕೊಹ್ಲಿ 2021ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ನಿರಾಸೆಯನ್ನು ಅನುಭವಿಸಿದ್ದಾರೆ. ಈ ವರ್ಷ ವಿರಾಟ್ ಕೊಹ್ಲಿ 11 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು 19 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. 28.21ರ ಸರಾಸರಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಡೆಸಿ 536 ರನ್‌ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಅರ್ಧ ಶತಕವನ್ನು ಸಿಡಿಸಿದ್ದಾರೆ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕ. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 72 ರನ್ ಸಿಡಿಸಿರುವುದು ಈ ವರ್ಷದ ಹೈಯೆಸ್ಟ್ ಸ್ಕೋರ್ ಎನಿಸಿದೆ.

ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಪ್ರದರ್ಶನ
ಇನ್ನು ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿ 2021ರ ಕ್ಯಾಲೆಂಡರ್ ವರ್ಷದಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರವೇ ಆಡಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿ 43ರ ಸರಾಸರಿಯೊಂದಿಗೆ 129 ರನ್‌ಗಳಿಸಿದ್ದಾರೆ. ಈ ವರ್ಷ ಏಕದಿನ ಕ್ರಿಕೆಟ್ ಮಾದರಿಯಲ್ಲಿ ವಿರಾಟ್ ಕೊಹ್ಲಿ ಗಳಿಸಿದ ಹೈಯೆಸ್ಟ್ ಸ್ಕೋರ್ 66 ರನ್. ಇದು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2008ರಲ್ಲಿ ಪದಾರ್ಪಣೆ ಮಾಡಿದ ಬಳಿಕ ಕ್ಯಾಲೆಂಡರ್ ವರ್ಷವೊಂದರಲ್ಲಿ ಆಡಿದ ಅತ್ಯಂತ ಕನಿಷ್ಠ ಪಂದ್ಯ ಹಾಗೂ ಅತ್ಯಂತ ಕನಿಷ್ಠ ಸ್ಕೋರ್ ಆಗಿದೆ. ಇದಕ್ಕೆ ಕಾರಣ ಟೀಮ್ ಇಂಡಿಯಾ ಈ ವರ್ಷ ಅತಿ ಹೆಚ್ಚು ಟೆಸ್ಟ್ ಹಾಗೂ ಟಿ20 ಸರಣಿಗಳ ಮೇಲೆ ಗಮನಹರಿಸಿತ್ತು.

ಟಿ20 ಮಾದರಿಯಲ್ಲಿ ವಿರಾಟ್ ಕೊಹ್ಲಿ ಸಾಧನೆ
ಕಳೆದ ಟಿ20 ವಿಶ್ವಕಪ್‌ನ ಬಳಿಕ ಟಿ20 ನಾಯಕತ್ವದಿಂದ ಕೆಳಗಿಳಿದಿರುವ ವಿರಾಟ್ ಕೊಹ್ಲಿ 2021 ಕ್ಯಾಲೆಂಡರ್ ವರ್ಷದಲ್ಲಿ ಚುಟುಕು ಮಾದರಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಈ ವರ್ಷ ಕೊಹ್ಲಿ 10 ಪಂದ್ಯಗಳಲ್ಲಿ ಆಡಿದ್ದು 8 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಇದರಲ್ಲಿ ಭರ್ಜರಿ 74.75ರ ಸರಾಸರಿಯಲ್ಲಿ ವಿರಾಟ್ ಕೊಹ್ಲಿ 299 ರನ್‌ಗಳಿಸಿದ್ದಾರೆ. ಅಜೇಯ 80 ರನ್ ವಿರಾಟ್ ಕೊಹ್ಲಿ ಈ ವರ್ಷದಲ್ಲಿ ಗಳಿಸಿದ ಹೈಯೆಸ್ಟ್ ಸ್ಕೋರ್ ಆಗಿದೆ. ಒಟ್ಟು ನಾಲ್ಕು ಅರ್ಧಶತಕವನ್ನು ಬಾರಿಸಿದ್ದಾರೆ ವಿರಾಟ್ ಕೊಹ್ಲಿ.

ಎಲ್ಲಾ ಮಾದರಿಯಲ್ಲಿ ಒಟ್ಟಾರೆ ಕೊಹ್ಲಿ ಪ್ರದರ್ಶನ
ಇನ್ನು ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಕ್ಯಾಲೆಂಡರ್ ವರ್ಷದಲ್ಲಿ ಆಡಿದ ಪಂದ್ಯಗಳ ಒಟ್ಟಾರೆ ಅಅಂಕಿಅಂಶಗಳತ್ತ ಕೂಡ ಗಮನಹರಿಸೋಣ. ಈ ವರ್ಷ ವಿರಾಟ್ ಕೊಹ್ಲಿ ಒಟ್ಟಾರೆಯಾಗಿ 24 ಪಂದ್ಯಗಳನ್ನು ಆಡಿದ್ದು 30 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಇದರಲ್ಲಿ ಕೊಹ್ಲಿ ಒಟ್ಟು 964 ರನ್‌ಗಳನ್ನು ಗಳಿಸಿದ್ದಾರೆ. ಕೊಹ್ಲಿ ಶತಕವನ್ನು ಗಳಿಸಲು ವಿಫಲವಾಗಿದ್ದರು ಕೂಡ ಒಟ್ಟು 10 ಅರ್ಧ ಶತಕವನ್ನು ಈ ಕ್ಯಾಲೆಂಡರ್ ವರ್ಷದಲ್ಲಿ ಸಿಡಿಸಿದ್ದಾರೆ. ವಿರಾಟ್ ಕೊಹ್ಲಿಯ ಒಟ್ಟಾರೆ ಸರಾಸರಿ 37.07 ಆಗಿದೆ. ಈ ಸರಾಸರಿ ಕೊಹ್ಲಿಯಿಂದ ನಿರೀಕ್ಷಿತ ಸರಾಸರಿಯಲ್ಲದಿದ್ದರೂ ಸಾಕಷ್ಟು ಪ್ರಮುಖ ಕ್ರಿಕೆಟ್ ಆಟಗಾರರ ಬ್ಯಾಟಿಂಗ್ ಸರಾಸರಿ ಎಂಬುದನ್ನು ಮರೆಯುವಂತಿಲ್ಲ.


Click it and Unblock the Notifications
