For Quick Alerts
ALLOW NOTIFICATIONS  
For Daily Alerts
 

Flashback 2021: ಈ ವರ್ಷ ಅತಿಹೆಚ್ಚು ರನ್ ಗಳಿಸಿದ ಟಾಪ್ 10 ಕ್ರಿಕೆಟಿಗರು; ಭಾರತೀಯರೇ ಇಲ್ಲ!

Flashback 2021: List of Top 10 highest ODI run getters in the year
Cricket Flashback 2021 Episode 01 | Top 10 debuts by Indian players | Oneindia Kannada

2021 ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವರ್ಷ ಕ್ರಿಕೆಟ್ ಜಗತ್ತಿನಲ್ಲಿ ನಿರ್ಮಾಣವಾದ ದಾಖಲೆಗಳು, ಸಾಧನೆಗಳು ಮತ್ತು ಉಂಟಾದ ವಿವಾದಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಹೀಗೆ ಕ್ರಿಕೆಟ್ ಅಭಿಮಾನಿಗಳು ಈ ವರ್ಷದಲ್ಲಿ ನಿರ್ಮಾಣವಾದ ಹಲವಾರು ಕ್ರಿಕೆಟ್ ದಾಖಲೆಗಳ ಕುರಿತು ಚರ್ಚೆಗಳನ್ನು ನಡೆಸುತ್ತಿದ್ದು ಅದರಲ್ಲಿ ಪ್ರಮುಖವಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಇನ್ನು ಈ ವರ್ಷದಲ್ಲಿ ಅತಿ ಹೆಚ್ಚು ಏಕದಿನ ರನ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಟಾಪ್ 10 ಆಟಗಾರರನ್ನು ಗಣನೆಗೆ ತೆಗೆದುಕೊಂಡರೆ ಆಶ್ಚರ್ಯಕರ ಸಂಗತಿಯೊಂದು ಹೊರಬಿದ್ದಿದೆ. ಹೌದು, ಈ ವರ್ಷ ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರರ ಟಾಪ್ 10 ಪಟ್ಟಿಯಲ್ಲಿ ಭಾರತೀಯ ಕ್ರಿಕೆಟಿಗರು ಇಲ್ಲದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಹಾಗಾದರೆ ಭಾರತೀಯ ಆಟಗಾರರಿಲ್ಲದ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ 10 ಆಟಗಾರರು ಯಾರು ಎಂಬ ಮಾಹಿತಿ ಈ ಕೆಳಕಂಡಂತಿದೆ.

10. ವನಿಂದು ಹಸರಂಗ

ಶ್ರೀಲಂಕಾ ತಂಡದ ಯುವ ಹಾಗೂ ಪ್ರಮುಖ ಕ್ರಿಕೆಟಿಗನಾದ ವನಿಂದು ಹಸರಂಗ 2021ರಲ್ಲಿ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಆಟಗಾರರ ಟಾಪ್ 10 ಪಟ್ಟಿಯಲ್ಲಿ ಹತ್ತನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಶ್ರೀಲಂಕಾ ತಂಡದ ಪರ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ಈ ವರ್ಷ ಮಿಂಚಿರುವ ವನಿಂದು ಹಸರಂಗ 14 ಏಕದಿನ ಇನ್ನಿಂಗ್ಸ್‌ನಲ್ಲಿ 356 ರನ್ ಕಲೆಹಾಕಿದ್ದಾರೆ.

9. ಫಾಕರ್ ಜಮಾನ್

ಫಾಕರ್ ಜಮಾನ್ ಈ ವರ್ಷ ಪಾಕಿಸ್ತಾನ ತಂಡದ ಪರ ಸತತವಾಗಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ಬಂದಂತಹ ಆಟಗಾರನಾಗಿದ್ದು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ವರ್ಷ ಒಟ್ಟು 6 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಫಾಕರ್ ಜಮಾನ್ 365 ರನ್ ಗಳಿಸಿ ಒಂಭತ್ತನೇ ಸ್ಥಾನ ಪಡೆದುಕೊಂಡಿದ್ದಾರೆ.

8. ಮಹ್ಮದ್ದುಲ್ಲಾ

ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ ಮಹಮದ್ದುಲ್ಲಾ ಈ ವರ್ಷ ಏಳು ಬೀಳುಗಳನ್ನು ಸಮನಾಗಿ ಕಂಡಂತಹ ಆಟಗಾರ. ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರೂ ಕೂಡ ಈ ವರ್ಷ ಅತ್ಯುತ್ತಮ ಪ್ರದರ್ಶನವನ್ನು ನೀಡುವಲ್ಲಿ ಮಹಮದ್ದುಲ್ಲಾ ವಿಫಲರಾಗಿದ್ದಾರೆ ಎಂದೇ ಹೇಳಬಹುದು. ಈ ವರ್ಷ ಒಟ್ಟು 11 ಏಕದಿನ ಇನ್ನಿಂಗ್ಸ್ ಆಡಿರುವ ಮಹಮ್ಮದ್ದುಲ್ಲಾ 399 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.

7. ಬಾಬರ್ ಅಜಮ್

ಪಾಕಿಸ್ತಾನದ ರನ್ ಮೆಷಿನ್ ಎಂದೇ ಖ್ಯಾತಿಯನ್ನು ಪಡೆದಿರುವ ಬಾಬರ್ ಅಜಮ್ ಈ ವರ್ಷವೂ ಸಹ ಹಲವಾರು ಸೆಂಚುರಿಗಳನ್ನು ಬಾರಿಸಿ ಉತ್ತಮ ರನ್ ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ವರ್ಷ ಒಟ್ಟು 405 ರನ್ ಕಲೆಹಾಕಿರುವ ಬಾಬರ್ ಅಜಮ್ ಈ ವರ್ಷದಲ್ಲಿ ಅತಿ ಹೆಚ್ಚು ಏಕದಿನ ರನ್ ಕಲೆಹಾಕಿರುವ ಆಟಗಾರರ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದುಕೊಂಡಿದ್ದಾರೆ.

6. ಮುಶ್ಪೀಕರ್ ರಹೀಂ

ಬಾಂಗ್ಲಾದೇಶದ ಮುಶ್ಪೀಕರ್ ರಹೀಂ ಈ ವರ್ಷದ ಏಕದಿನ ಪಂದ್ಯಗಳಲ್ಲಿ ಸಮತೋಲನ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ವರ್ಷದಲ್ಲಿ ಒಟ್ಟು 9 ಏಕದಿನ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ಮುಶ್ಪೀಕರ್ ರಹೀಂ 407 ರನ್ ಕಲೆ ಹಾಕುವುದರ ಮೂಲಕ ಈ ವರ್ಷ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದುಕೊಂಡಿದ್ದಾರೆ.

5. ಆ್ಯಂಡ್ರ್ಯೂ ಬ್ಯಾಲ್ಬರ್ನಿ

ಐರ್ಲೆಂಡ್ ಕ್ರಿಕೆಟ್ ತಂಡದ ನಾಯಕನಾದ ಆ್ಯಂಡ್ರ್ಯೂ ಬ್ಯಾಲ್ಬರ್ನಿ ಈ ವರ್ಷ ಅತಿ ಹೆಚ್ಚು ಏಕದಿನ ರನ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ವರ್ಷದಲ್ಲಿ ಒಟ್ಟು 14 ಏಕದಿನ ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿದಿರುವ ಆ್ಯಂಡ್ರ್ಯೂ ಬ್ಯಾಲ್ಬರ್ನಿ 421 ರನ್ ಗಳಿಸಿದ್ದಾರೆ.

4. ಹ್ಯಾರಿ ಟೆಕ್ಟರ್

ಈ ವರ್ಷ ತನ್ನ ಏಕದಿನ ಕ್ರಿಕೆಟ್ ಕೆರಿಯರ್ ಅನ್ನು ಉತ್ತಮ ರನ್ ಗಳಿಸುವುದರ ಮೂಲಕ ಆರಂಭಿಸಿರುವ ಹ್ಯಾರಿ ಟೆಕ್ಟರ್ ವರ್ಷದಲ್ಲಿ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಟಾಪ್ ಟೆನ್ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಮತ್ತೋರ್ವ ಐರ್ಲೆಂಡ್ ಆಟಗಾರ ಎನಿಸಿಕೊಂಡಿದ್ದಾರೆ. 2021ರಲ್ಲಿ 14 ಏಕದಿನ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿರುವ ಹ್ಯಾರಿ ಟೆಕ್ಟರ್ 454 ರನ್ ಗಳಿಸಿದ್ದಾರೆ.

3. ತಮೀಮ್ ಇಕ್ಬಾಲ್

ಬಾಂಗ್ಲಾದೇಶದ ತಮಿಮ್ ಇಕ್ಬಾಲ್ ಕೂಡ ಈ ವರ್ಷ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಆಟಗಾರರ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಈ ಪಟ್ಟಿಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿರುವ ತಮೀಮ್ ಇಕ್ಬಾಲ್ 14 ಏಕದಿನ ಇನ್ನಿಂಗ್ಸ್‌ನಲ್ಲಿ 464 ರನ್ ಗಳಿಸಿದ್ದಾರೆ.

2. ಜನ್ನೆಮನ್ ಮಲನ್

ಈ ವರ್ಷ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಮಲನ್ ತನ್ನ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನವನ್ನು ಆರಂಭಿಸಿದ್ದಾನೆ. ಹೀಗೆ ತನ್ನ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದ ಚೊಚ್ಚಲ ವರ್ಷದಲ್ಲಿಯೇ ಕೇವಲ 7 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿ 509 ರನ್ ಕಲೆ ಹಾಕುವುದರ ಮೂಲಕ ಈ ವರ್ಷ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಆಟಗಾರರ ಟಾಪ್ ಟೆನ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾನೆ.

1. ಪೌಲ್ ಸ್ಟರ್ಲಿಂಗ್‌

ಐರ್ಲೆಂಡ್ ತಂಡದ ಈ ಕ್ರಿಕೆಟಿಗ ತನ್ನ ತಂಡದ ಪರ ಪ್ರತಿವರ್ಷ ಉತ್ತಮ ಪ್ರದರ್ಶನ ನೀಡುವುದರಲ್ಲಿ ಎಡವುವುದಿಲ್ಲ. ಅದೇ ರೀತಿ ಈ ವರ್ಷವೂ ಸಹ ತನ್ನ ತಂಡಕ್ಕೆ ಉತ್ತಮ ಪ್ರದರ್ಶನದ ಕೊಡುಗೆಯನ್ನು ನೀಡಿರುವ ಪೌಲ್ ಸ್ಟರ್ಲಿಂಗ್ ಈ ವರ್ಷ ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 14 ಏಕದಿನ ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿದಿರುವ ಪೌಲ್ ಸ್ಟರ್ಲಿಂಗ್ 705 ರನ್ ಬಾರಿಸಿದ್ದಾರೆ.

Story first published: Saturday, December 18, 2021, 23:33 [IST]
Other articles published on Dec 18, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+