2022ರಲ್ಲಿ ಐಪಿಎಲ್‌ನಿಂದ ನಿವೃತ್ತರಾದ ನಾಲ್ವರು ಸ್ಟಾರ್ ಆಟಗಾರರು ಇವರು!

ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೊಂದು ಆವೃತ್ತಿಗೆ ಸಜ್ಜಾಗುತ್ತಿದೆ. 2023ರ ಆವೃತ್ತಿಗೆ ಸಿದ್ಧತೆಗಳು ನಡೆಯುತ್ತಿದ್ದು ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 23ರಂದು ನಡೆಯಲಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಮುಂದಿನ ಆವೃತ್ತಿಗೆ ತಂಡಗಳನ್ನು ಬಲಿಷ್ಠಗೊಳಿಸಲು ಎಲ್ಲಾ ಫ್ರಾಂಚೈಸಿಗಳು ಕೂಡ ಸನ್ನಧವಾಗಿದೆ.
ಈ ಮಧ್ಯೆ 2022ನೇ ಇಸವಿ ಅಂತ್ಯವಾಗುತ್ತಿದ್ದು ಈ ವರ್ಷದಲ್ಲಿ ಐಪಿಎಲ್‌ನ ಕೆಲ ಸ್ಟಾರ್ ಆಟಗಾರರು ಪ್ರತಿಷ್ಠಿಯ ಟೂರ್ನಿಗೆ ವಿದಾಯ ಘೋಷಣೆ ಮಾಡಿದ್ದಾರೆ. ಕನ್ನಡಿಗ ರಾಬಿನ್ ಉತ್ತಪ್ಪ ಸೇರಿದಂತೆ ಒಟ್ಟು ನಾಲ್ವರು ಸ್ಟಾರ್ ಆಟಗಾರರು ಈ ವರ್ಷ ಐಪಿಎಲ್ ಟೂರ್ನಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆ ಆಟಗಾರರು ಯಾರು ಎಂಬುದನ್ನು ಮುಂದೆ ಓದಿ..

ರಾಬಿನ್ ಉತ್ತಪ್ಪ
ಕನ್ನಡಿಗ ರಾಬಿನ್ ಉತ್ತಪ್ಪ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿಯೇ ಅದ್ಭುತ ಪ್ರದರ್ಶನ ನೀಡಿ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದರು ರಾಬಿನ್ ಉತ್ತಪ್ಪ. ನಂತರ ಐಪಿಎಲ್‌ನಲ್ಲಿಯೂ ಅದ್ಭುತ ದಾಖಲೆಗಳನ್ನು ಹೊಂದಿರುವ ಉತ್ತಪ್ಪ ಹಲವು ಟ್ರೋಫಿಗಳನ್ನು ಗೆದ್ದುಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ಥಾನ್ ರಾಯಲ್ಸ್ ಹಾಗೂ ಪುಣೆ ವಾರಿಯರ್ಸ್ ತಂಡದ ಪರವಾಗಿ ಐಪಿಎಲ್‌ನಲ್ಲಿ ಆಡಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿರುವ ಉತ್ತಪ್ಪ 2021ರ ಐಪಿಎಲ್ ಫೈನಲ್‌ನಲ್ಲಿ ನಿರ್ಣಾಯಕ ಪ್ರದರ್ಶನ ನೀಡಿ ಸಿಎಸ್‌ಕೆ ಟ್ರೋಫಿ ಗೆಲ್ಲಲು ಮಹತ್ತರ ಪಾತ್ರಹಿಸಿದ್ದರು.

ಡ್ವೇಯ್ನ್ ಬ್ರಾವೋ
ಕೆರೆಬಿಯನ್ ಆಟಗಾರ ಡ್ವೇಯ್ನ್ ಬ್ರಾವೋ ಐಪಿಎಲ್ ಟೂರ್ನಿಯ ಶ್ರೇಷ್ಠ ಆಟಗಾರರ ಪೈಕಿ ಒಬ್ಬರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಯಾವುದೇ ತಂಡಕ್ಕಾದರೂ ಬಲಿಷ್ಠ ಅಸ್ತ್ರವೆನಿಸುವ ಆಟಗಾರ ಡ್ವೇಯ್ನ್ ಬ್ರಾವೋ. ಮುಂಬೈ ಇಂಡಿಯನ್ಸ್ ತಂಡದ ಮೂಲಕ ಐಪಿಎಲ್ ವೃತ್ತಿ ಜೀವನ ಆರಂಭಿಸಿದ ಬ್ರಾವೋ ಬಳಿಕ ಸಿಎಸ್‌ಕೆ ತಂಡದಲ್ಲಿ ಬಹಳ ಕಾಲ ಇದ್ದು ತಂಡದ ಪ್ರಮುಖ ಆಟಗಾರನಾಗಿ ಉಳಿದುಕೊಂಡಿದ್ದರು. ಐಪಿಎಲ್‌ನಲ್ಲಿ 183 ವಿಕೆಟ್‌ಗಳನ್ನು ಪಡೆದುಕೊಂಡು ಟೂರ್ನಿಯ ಇತಿಹಾಸದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿರುವ ಬ್ರಾವೋ ಸಿಎಸ್‌ಕೆ ತಂಡ ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರಿದಾಗ ತಂಡದ ಭಾಗವಾಗಿದ್ದರು. ಈ ವರ್ಷ ಆಟಗಾರನಾಗಿ ನಿವೃತ್ತಿ ಘೋಷಣೆ ಮಾಡಿರುವ ಬ್ರಾವೋ ಸಿಎಸ್‌ಕೆ ತಂಡದ ಬೌಲಿಂಗ್ ಕೋಚ್ ಆಗಿ ಮುಂದುವರಿಯಲಿದ್ದಾರೆ.

ಸುರೇಶ್ ರೈನಾ
ಐಪಿಎಲ್ ಇತಿಹಾಸದ ದಿಗ್ಗಜ ಆಟಗಾರರಲ್ಲಿ ಒಬ್ಬರಾದ ಸುರೇಶ್ ರೈನಾ ಕಳೆದ ಆವೃತ್ತಿಗೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ ಹರಾಜಾಗದೆ ಟೂರ್ನಿಯಿಂದ ಹೊರಗುಳಿದಿದ್ದರು. ಸಿಎಸ್‌ಕೆ ತಂಡದಲ್ಲಿ ಆರಂಭದಿಂದಲೂ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದ ರೈನಾ ಹೆಸರಿನಲ್ಲಿ ಸಾಕಷ್ಟು ದಾಖಲೆಗಳು ಇವೆ. ಬ್ಯಾಟಿಂಗ್ ಬೌಲಿಂಗ್ ಹಾಗೂ ಫಿಲ್ಡಿಂಗ್‌ನಲ್ಲಿ ಮಿಂಚು ಹರಿಸಿರುವ ರೈನಾ ಈ ವರ್ಷ ಐಪಿಎಲ್‌ಗೆ ವಿದಾಯ ಘೋಷಣೆ ಮಾಡಿದ್ದಾರೆ. 2020ರಲ್ಲಿ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ಕೀರನ್ ಪೊಲಾರ್ಡ್
ಐಪಿಎಲ್‌ನಲ್ಲಿ ಒಂದೇ ತಂಡದ ಪರವಾಗಿ ವೃತ್ತಿ ಜೀವನದುದ್ದಕ್ಕೂ ಆಡಿರುವ ಅಪರೂಪದ ಆಟಗಾರ ವೆಸ್ಟ್ ಇಂಡೀಸ್‌ನ ದಿಗ್ಗಜ ಕೀರನ್ ಪೊಲಾರ್ಡ್. ಸ್ಪೋಟಕ ಬ್ಯಾಟರ್ ಆಗಿ ಅನೇಕ ಪಂದ್ಯಗಳಲ್ಲಿ ಅಸಾಧ್ಯ ಗೆಲುವಿಗೆ ಪೊಲಾರ್ಡ್ ಕಾರಣವಾಗಿದ್ದು ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಭಾಗವಾಗಿದ್ದರು. ನವೆಂಬರ್ ತಿಂಗಳಿನಲ್ಲಿ ಆಟಗಾರರ ರೀಟೆನ್ಶನ್ ಪಟ್ಟಿ ಬಿಡುಗಡೆಗೂ ಮುನ್ನ ಕೀರನ್ ಪೊಲಾರ್ಡ್ ತಮ್ಮ ನಿವೃತ್ತಿ ನಿರ್ಧಾರವನ್ನು ಘೋಷಣೆ ಮಾಡಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಪೊಲಾರ್ಡ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಸುದೀರ್ಘ ಕಾಲದಿಂದ ಅದ್ಭುತ ಕೊಡುಗೆ ನೀಡಿದ್ದು ಐದು ಬಾರಿ ಮುಂಬೈ ಇಂಡಿಯನ್ಸ್ ಟ್ರೋಫಿ ಗೆಲ್ಲಲು ಕೂಡ ಮಹತ್ವದ ಪಾತ್ರವಹಿಸಿದ್ದರು. ಮುಂದಿನ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೋಚಿಂಗ್ ವಿಭಾಗದಲ್ಲಿ ಪೊಲಾರ್ಡ್ ಕರ್ತವ್ಯ ನಿರ್ವಹಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications