Flashback 2022: ಈ ವರ್ಷ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ ಆಟಗಾರರು ಇವರು

2022 ಟೀಮ್ ಇಂಡಿಯಾ ಪಾಲಿಗೆ ಸಾಕಷ್ಟು ಒತ್ತಡದ ವೇಳಾಪಟ್ಟಿಯನ್ನು ಹೊಂದಿದ್ದ ವರ್ಷವಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಏಷ್ಯಾ ಕಪ್, ಟಿ20 ವಿಶ್ವಕಪ್‌ನಂತಾ ಮೆಗಾ ಟೂರ್ನಿಗಳ ಜೊತೆಗೆ ಸಾಕಷ್ಟು ದ್ವಿಪಕ್ಷೀಯ ಸರಣಿಗಳಲ್ಲಿಯೂ ಭಾರತ ಭಾಗವಹಿಸಿದೆ. ಹೀಗಾಗಿ ಭಿನ್ನ ಮಾದರಿಗಳಿಗೆ ಹಾಗೂ ಭಿನ್ನ ಟೂರ್ನಿಗಳಿಗೆ ಭಿನ್ನ ಆಟಗಾರರ ಪಡೆಯನ್ನು ಕಣಕ್ಕಿಳಿಸುವ ಅನಿವಾರ್ಯತೆಯೂ ಎದುರಾಗಿತ್ತು.
ಈ ಕ್ಯಾಲೆಂಡರ್ ವರ್ಷದಲ್ಲಿ ಟೀಮ್ ಇಂಡಿಯಾಗೆ ಒಟ್ಟು 40ಕ್ಕೂ ಅಧಿಕ ಆಟಗಾರನ್ನು ಬಳಸಿಕೊಳ್ಳಲಾಗಿದೆ. ಆಟಗಾರರ ಗಾಯ, ಫಿಟ್‌ನೆಸ್ ಹಾಗೂ ಕೆಲದೊತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಹೀಗಾಗಿ ಟೀಮ್ ಇಂಡಿಯಾ ಪರವಾಗಿ ಈ ಕ್ಯಾಲೆಂಡರ್ ವರ್ಷದಲ್ಲಿ ಸಾಕಷ್ಟು ಯುವ ಆಟಗಾರರು ಪದಾರ್ಪಣೆ ಮಾಡಿದ್ದಾರೆ. ಈ ಪೈಕಿ ಕೆಲ ಆಟಗಾರರು ಭರವಸೆ ಮೂಡಿಸಿದರೆ ಕೆಲ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ.
ಹಾಗಾದರೆ ಈ ವರ್ಷ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಆಟಗಾರರು ಯಾರು? ಮುಂದೆ ಓದಿ.

ದೀಪಕ್ ಹೂಡಾ
ದೇಶೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಬರೋಡಾದ ಆಲ್‌ರೌಂಡರ್ ದೀಪಕ್ ಹೂಡಾ ಈ ವರ್ಷ ಭಾರತೀಯ ತಂಡದಲ್ಲಿ ಮೊದಲ ಬಾರಿಗೆ ಆಡುವ ಅವಕಾಶ ಗಿಟ್ಟಿಸಿಕೊಂಡರು. ಫೆಬ್ರವರಿ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದ ಸರಣಿಯಲ್ಲಿ ಮೊದಲಿಗೆ ಏಕದಿನ ಮಾದರಿಗೆ ಪದಾರ್ಪಣೆ ಮಾಡಿದ ಹೂಡಾ ಬಳಿಕ ಟಿ20ಗೂ ಪದಾರ್ಪಣೆ ಮಾಡಿದರು.

ಆವೇಶ್ ಖಾನ್
ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನದ ಮೂಲಕ ಮಿಂಚಿರುವ ಆವೇಶ್ ಖಾನ್ ನಿರೀಕ್ಷೆಯಂತೆಯೇ ಭಾರತ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡರು. ಮೊದಲಿಗೆ ತವರಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಚುಟುಕು ಮಾದರಿಯಲ್ಲಿ ಕ್ಯಾಪ್ ಧರಿಸಿದರೆ ಬಳಿಕ ಜುಲೈ ತಿಂಗಳಿನಲ್ಲಿ ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಂಡಿದ್ದಾಗ ಅಲ್ಲಿ ಏಕದಿನ ಮಾದರಿಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು.

ಉಮ್ರಾನ್ ಮಲಿಕ್
ಜಮ್ಮು ಕಾಶ್ಮೀರ ಮೂಲಕ ವೇಗದ ಬೌಲರ್ ಉಮ್ರಾನ್ ಮಲಿಕ್ ಐಪಿಎಲ್‌ನಲ್ಲಿ ನೀಡಿದ ಪ್ರದರ್ಶನದ ಆಧಾರದಲ್ಲಿ ಭಾರತ ತಂಡಕ್ಕೆ ಈ ವರ್ಷ ಆಯ್ಕೆಯಾಗಿದ್ದಾರೆ. ಜೂನ್ ತಿಣಗಳಿನಲ್ಲಿ ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನು ಆಡಿದ ಉಮ್ರಾನ್ ಮಲಿಕ್ ಬಳಿಕ ನವೆಂಬರ್ ತಿಂಗಳಿನಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕದಿನ ತಂಡಕ್ಕೆ ಪ್ರವೇಶ ಪಡೆದರು.

ಅರ್ಶ್‌ದೀಪ್ ಸಿಂಗ್
ಪಂಜಾಬ್ ಮೂಲದ ಯುವ ಆಟಗಾರ ಅರ್ಶ್‌ದೀಪ್ ಸಿಂಗ್ ಜುಲೈ 7ರಂದು ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ ಪದಾರ್ಪನೆ ಮಾಡಿದರು. ಅದಾದ ಬಳಿಕ ನವೆಂಬರ್ ತಿಂಗಳಿನಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕದಿನ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡರು.

ಶಹ್ಬಾಜ್ ಅಹ್ಮದ್
ದೇಶೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ನೀಡಿದ ಸ್ಥಿರ ಪ್ರದರ್ಶನದ ಕಾರಣದಿಂದಾಗಿ ಬಂಗಾಳದ ಆಲ್‌ರೌಂಡರ್ ಆಟಗಾರ ಶಹ್ಬಾಜ್ ಅಹ್ಮದ್ ಕೂಡ ಈ ವರ್ಷ ಭಾರತ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಕಳೆದ ಅಕ್ಟೋಬರ್ 9ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ.

ಕುಲ್ದೀಪ್ ಸೇನ್
26ರ ಹರೆಯದ ಮಧ್ಯ ಪ್ರದೇಶ ಮೂಲದ ವೇಗಿ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಅದ್ಭುತ ಪ್ರದರ್ಶಣ ನೀಡಿ ಮಿಂಚಿದ್ದರು. ಡಿಸೆಂಬರ್ 4ರಂದು ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications