Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುವಕರಿಗೆ ಮಣೆ: ಅನುಭವಿಗಳ ಕಡೆಗಣನೆ: ಇನ್ನಾದರೂ ತಂಡದಲ್ಲಿ ಆಗುತ್ತಾ ಬದಲಾವಣೆ

ತವರಿನಲ್ಲಿ ಟೀಮ್ ಇಂಡಿಯಾಗೆ ಭಾರೀ ಮುಖಭಂಗವಾಗಿದೆ. ನ್ಯೂಜಿಲೆಂಡ್‌ ವಿರುದ್ಧ ಮೂರನೇ ಟೆಸ್ಟ್‌ ಗೆಲ್ಲುವ ಕನಸಿಗೆ ಪೆಟ್ಟು ಬಿದ್ದಿದೆ. ಸ್ಟಾರ್‌ ಆಟಗಾರರು ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರಿಂದ ಭಾರತದಲ್ಲಿ ಕ್ಲೀನ್‌ ಸ್ವೀಪ್‌ ಸೋಲನ್ನು ರೋಹಿತ್ ಪಡೆ ಅನುಭವಿಸಿದೆ.

ಅಲ್ಪ ಮೊತ್ತವನ್ನು ಹಿಂಬಾಲಿಸಿದ ಟೀಮ್ ಇಂಡಿಯಾದ ಸ್ಟಾರ್‌ ಬ್ಯಾಟರ್‌ಗಳು ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಪರಿಣಾಮ ಮಹತ್ವದ ಪಂದ್ಯವನ್ನು ಸೋತಿದೆ. ಈ ಮೂಲಕ ಎರಡು ಬಾರಿ ಟೆಸ್ಟ್ ವಿಶ್ವಚಾಂಪಿಯನ್‌ಶಿಪ್ ಫೈನಲ್‌ ತಲುಪಿದ್ದ ಭಾರತದ ಗರ್ವಭಂಗವಾಗಿದೆ.

Focus on Youth Over Veterans Can Another Change in the Team india Squad

ಗೌತಮ್‌ ಗಂಭೀರ್‌ ಅವರು ಕೋಚ್‌ ಆಗಿ ಆಯ್ಕೆ ಆದ ಮೇಲೆ ಟೀಮ್ ಇಂಡಿಯಾ ಟೆಸ್ಟ್‌ನಲ್ಲಿ ಕಂಡ ಮೊದಲ ಸೋಲು ಇದಾಗಿದೆ. ಈ ಸೋಲು ಟೀಮ್ ಇಂಡಿಯಾಕ್ಕೆ ಭಾರೀ ಹಿನ್ನಡೆಯನ್ನು ಉಂಟು ಮಾಡಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಏರುವ ಕನಸು ಕಾಣುತ್ತಿದ್ದ ಭಾರತದ ಆಸೆಗೆ ಪೆಟ್ಟು ಬಿದ್ದಿದೆ.

ಠುಸ್ ಪಟಾಕಿ

ಟೀಮ್ ಇಂಡಿಯಾ ಯುವ ಆಟಗಾರರನ್ನು ಕಟ್ಟಿ ಕೊಂಡು ಮುಖಭಂಗ ಅನುಭವಿಸಿತಾ ಎಂಬ ಪ್ರಶ್ನೆಗಳು ಎದ್ದಿವೆ. ಟೀಮ್ ಇಂಡಿಯಾ ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಯಡವಿತಾ ಎಂಬಂತಾಗಿದೆ. ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ಸರ್ಫರಾಜ್‌ ಖಾನ್‌, ತಮ್ಮ ಮೇಲೆ ತಂಡ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲವಾಗಿದ್ದು, ಸರಣಿ ಕೈ ಚೆಲ್ಲಲು ಪ್ರಮುಖ ಕಾರಣ. ಮೂರು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾದ ಪರ ರಿಷಭ್‌ ಪಂತ್‌ ಒಬ್ಬರೇ ಕ್ಲಾಸಿಕ್ ಆಟ ಆಡಿದರು. ಉಳಿದವರು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಯಶಸ್ವಿ ಜೈಸ್ವಾಲ್‌, ಸರ್ಫರಾಜ್ ಖಾನ್‌, ಶುಭಮನ್‌ ಗಿಲ್‌, ರನ್‌ ಕಲೆ ಸಿಡಿಸುವಲ್ಲಿ ಎಡವಿದರು.

ಕಾಡುತ್ತಿದೆ ಸ್ಪೆಷಲಿಸ್ಟ್‌ ಬ್ಯಾಟರ್‌ಗಳ ಅನುಪಸ್ಥಿತಿ

ಟೀಮ್‌ ಇಂಡಿಯಾದ ಟೆಸ್ಟ್‌ ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ಗಳ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡುತ್ತಿದೆ. ಭಾರತದ ಟೆಸ್ಟ್‌ ಸ್ಪಷಲಿಸ್ಟ್‌ ಬ್ಯಾಟರ್‌ಗಳಾದ ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ ಅವರ ಅನುಪಸ್ಥಿತಿ ತಂಡಕ್ಕಾಗಿ ಬಹುವಾಗಿ ಕಾಡುತ್ತಿದೆ. ಟೀಮ್ ಇಂಡಿಯಾದ ಬ್ಯಾಟರ್‌ಗಳ ಅಗ್ರೇಸಿವ್‌ ಅಪ್ರೋಚ್‌ ಟೆಸ್ಟ್‌ ಸರಣಿ ಕೈ ಚೆಲ್ಲುವಂತೆ ಮಾಡಿದೆ. ಟೀಮ್ ಇಂಡಿಯಾದ ಅನುಭವಿ ಆಟಗಾರರು ರಕ್ಷಣಾತ್ಮಕ ಆಟವನ್ನು ಆಡುವಲ್ಲಿ ವಿಫಲರಾದರು.

ತವರಿನಲ್ಲಿ ಟೀಮ್ ಇಂಡಿಯಾ ಆಟಗಾರರು ಪರಿಸ್ಥಿತಿ ಈ ರೀತಿ ಆದರೆ, ಇನ್ನು ಆಸ್ಟ್ರೇಲಿಯಾದಲ್ಲಿ ಯಾವ ರೀತಿ ಇರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾ ಹೆಚ್ಚಾಗಿ ಯುವ ಆಟಗಾರರಿಗೆ ಮಣೆ ಹಾಕಿದೆ. ಟೀಮ್ ಇಂಡಿಯಾ ತವರಿನಲ್ಲಿ ಕಂಡ ಸೋಲಿನ ಕಹಿಯನ್ನು ನೆನಪು ಹಾರಲು, ಆಸ್ಟ್ರೇಲಿಯಾದಲ್ಲಿ ಸರಣಿ ಗೆಲುವಿನ ಅನಿವಾರ್ಯತೆ ಇದೆ. ಇನ್ನು ಟೀಮ್ ಇಂಡಿಯಾ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ ಫೈನಲ್‌ಗೆ ಏರಲು ಮುಂದಿನ ಪಂದ್ಯಗಳಲ್ಲಿ ಗೆಲುವಿನ ಅನಿವಾರ್ಯತೆ ಇದೆ.

Story first published: Sunday, November 3, 2024, 13:45 [IST]
Other articles published on Nov 3, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+