ಖಾಲಿ ಮೈದಾನವೇ ಚಂದ ಎಂದ ವಾರ್ನರ್: ಹಿಂದಿದೆ ಸ್ವಾರಸ್ಯಕರ ಕಾರಣ!

ಲಂಡನ್: ಕೊರೊನಾ ಕಾಟದಿಂದಾಗಿ ಕ್ರಿಕೆಟ್ ಪಂದ್ಯಗಳ ವೇಳೆ ವೀಕ್ಷಕರಿಗೆ ಅವಕಾಶ ನೀಡಲಾಗುತ್ತಿಲ್ಲ. ವೀಕ್ಷಕರಿಲ್ಲದ ಮೈದಾನದಲ್ಲಿ ಆಡೋದು ಉಳಿದೆಲ್ಲಾ ಕ್ರಿಕೆಟಿಗರಿಗೆ ಬೇಜಾರಿನ ಸಂಗತಿ. ವೀಕ್ಷಕರಿಲ್ಲದ ಮೈದಾನದಲ್ಲಿ ಕ್ರಿಕೆಟ್ ಆಡೋದೆಂದರೆ ಮದುಮಗಳೇ ಇಲ್ಲದ ಮದುವೆಯಂತೆ ಎಂದು ಒಂದಿಷ್ಟು ಕ್ರಿಕೆಟಿಗರು ಈ ಹಿಂದೆ ಹೇಳಿಕೊಂಡಿದ್ದರು. ಆದರೆ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್‌ಗೆ ಖಾಲಿ ಮೈದಾನವೇ ಖುಷಿ ಕೊಡುತ್ತಿದೆಯಂತೆ. ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದ ಬಳಿಕ ವಾರ್ನರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಾರ್ನರ್ ಹೀಗೆ ಹೇಳಲು ಕಾರಣವಿದೆ. ಇಂಗ್ಲೆಂಡ್ ಪ್ರೇಕ್ಷಕರ ಸಮೂಹ ಆಸ್ಟ್ರೇಲಿಯಾ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್‌ಗೆ ಪ್ರೋತ್ಸಾಹ ನೀಡಿದ್ದಕ್ಕಿಂತಲೂ ನಿಂದಿಸಿದ್ದು, ಗೇಲಿ ಮಾಡಿದ್ದೇ ಹೆಚ್ಚು. ಬಹಳಷ್ಟು ಸಾರಿ ಇಂಗ್ಲೆಂಡ್ ವೀಕ್ಷಕರು ಸ್ಮಿತ್, ವಾರ್ನರ್‌ಗೆ ಕಿರಿ ಕಿರಿ ಮಾಡಿದ್ದಾರೆ.
ಇಂಗ್ಲೆಂಡ್‌ನಲ್ಲಿ ವೀಕ್ಷಕರು ನಿಂದಿಸುವ ಕಾರಣಕ್ಕಾಗಿಯೇ ಇಂಗ್ಲೆಂಡ್‌ನಲ್ಲಿ ಆಡುವಾಗ ವೀಕ್ಷಕರಿಲ್ಲದ ಮೈದಾನವೇ ಚಂದ ಎಂದು ವಾರ್ನರ್ ಹೇಳಿದ್ದಾರೆ. ಇದಕ್ಕೆ ಮತ್ತೊಂದು ಸ್ವಾರಸ್ಯಕರ ಸಂಗತಿಯಿದೆ.

ವೀಕ್ಷಕರ ಕಿರಿಕಿರಿ ಇಲ್ಲ
ಕೊರೊನಾ ವೈರಸ್ ಶುರುವಾದಾಗಿನಿಂದ ವಿಶ್ವದಲ್ಲಿ ಬಹುತೇಕ ಎಲ್ಲಾ ಕ್ರೀಡಾಸ್ಪರ್ಧೆಗಳೂ ವೀಕ್ಷಕರಿಲ್ಲದ ಮೈದಾನದಲ್ಲಿ ನಡೆಯುತ್ತಿದೆ. ಶುಕ್ರವಾರ ನಡೆದಿದ್ದ ಆಸ್ಟ್ರೇಲಿಯಾ vs ಇಂಗ್ಲೆಂಡ್ ಮೊದಲ ಟಿ20ಐ ಪಂದ್ಯವೂ ಖಾಲಿ ಮೈದಾನದಲ್ಲಿ ನಡೆದಿತ್ತು. ಹೀಗಾಗಿ ಈ ಬಾರಿ ವಾರ್ನರ್‌ಗೆ ವೀಕ್ಷಕರ ಕಿರಿಕಿರಿ ಇರಲಿಲ್ಲ.

ಅನುಕೂಲಗಳೂ ಇವೆ
'ನಾನು ಇಲ್ಲಿ (ಇಂಗ್ಲೆಂಡ್‌ನಲ್ಲಿ) ನಿಂದಿಸಲ್ಪಡದಿರುವುದು ಇದೇ ಮೊದಲ ಬಾರಿ. ಇದೊಂಥರಾ ಚೆನ್ನಾಗಿದೆ. ಪ್ರೇಕ್ಷಕರು ನಮ್ಮ ಬೆಳವಣಿಗೆಗೆ ಪ್ರೇರೇಪಿಸುತ್ತಾರೆ. ನೀವು ಪ್ರೇಕ್ಷಕರಿಂದ ಸ್ಫೂರ್ತಿ ಪಡೆದು ಮುನ್ನಡೆಯುತ್ತೀರಿ. ಇದಕ್ಕೇ ನನಗೆ ತವರಿಗಿಂತ ಹೊರಗಿನ ಪಂದ್ಯಗಳು ಹೆಚ್ಚು ಇಷ್ಟ. ಇಲ್ಲಿ ಒಂದಿಷ್ಟ ಅನುಕೂಲಗಳು ಮತ್ತು ಅನಾನುಕೂಲಗಳೂ ಇವೆ,' ಎಂದು ವಾರ್ನರ್ ಹೇಳಿಕೊಂಡಿದ್ದಾರೆ.

ಸ್ವಾರಸ್ಯಕರ ಹಿನ್ನಲೆ
ವಾರ್ನರ್‌ಗೆ ಇಂಗ್ಲೆಂಡ್ ವೀಕ್ಷಕರ ಬಗೆಗಿನ ನಿಲುವೇ ಬದಲಾಗಿದೆ. ಇದಕ್ಕೊಂದು ಹಿನ್ನಲೆಯಿದೆ. 2013ರಲ್ಲಿ ಆ್ಯಷಸ್ ಸರಣಿಯ ವೇಳೆ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್, ವಾರ್ನರ್ ಇಂಗ್ಲೆಂಡ್ ನಾಯಕ ಜೋ ರೂಟ್‌ಗೆ ಬರ್ಮಿಂಗ್‌ಹ್ಯಾಮ್ ಬಾರ್‌ನಲ್ಲಿ ಹೊಡೆದಿದ್ದರು. ಆವತ್ತಿನಿಂದಲೂ ಇಂಗ್ಲೆಂಡ್ ವೀಕ್ಷಕರು ವಾರ್ನರ್‌ನನ್ನು ಪಂದ್ಯಗಳಿದ್ದಾಗೆಲ್ಲಾ ನಿಂದಿಸುತ್ತಲೇ ಬರುತ್ತಿದ್ದಾರೆ.

ಪಂದ್ಯದ ಫಲಿತಾಂಶ
ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್, ಜೋಸ್ ಬಟ್ಲರ್ 44, ಡೇವಿಡ್ ಮಲನ್ 66 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 162 ರನ್ ಮಾಡಿತ್ತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಡೇವಿಡ್ ವಾರ್ನರ್ 58, ಆ್ಯರನ್ ಫಿಂಚ್ 46 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 160 ರನ್ ಬಾರಿಸಿ 2 ರನ್‌ನಿಂದ ತಲೆ ಬಾಗಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications