ಭಾರತ ಟಾಸ್ ಸೋಲಬೇಕು ಎಂದ ಸಂಜಯ್ ಮಂಜ್ರೇಕರ್, ಕಾರಣ ಏನ್ ಗೊತ್ತಾ?!

ಸೌತಾಂಪ್ಟನ್: ಪ್ರಮುಖ ಕ್ರಿಕೆಟ್ ಪಂದ್ಯಗಳ ವೇಳೆ ಟಾಸ್ ಗೆಲ್ಲಬೇಕು ಎಂದು ಹೆಚ್ಚಿನ ತಂಡಗಳ ನಾಯಕರು ಬಯಸುತ್ತಾರೆ. ಆದರೆ ಜೂನ್ 18ರಂದು ಆರಂಭಗೊಳ್ಳುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಸೋಲಬೇಕು ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್, ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ಟಾಸ್ ಗೆದ್ದಾಗ ಬ್ಯಾಟಿಂಗ್ ಅಥವಾ ಬೌಲಿಂಗ್ ಆರಿಸುವ ಆಯ್ಕೆಗಳು ತಂಡದ ನಾಯಕರಲ್ಲಿರುತ್ತದೆ. ಆದರೆ ಟಾಸ್ ಸೋತರೆ ಎದುರಾಳಿ ನಾಯಕ ಆರಿಸುವ ಆಯ್ಕೆಗೆ ವಿರುದ್ಧ ಒಂದು ಆಯ್ಕೆ ಮಾತ್ರ ಉಳಿಯುತ್ತದೆ. ಆದರೂ WTC ಫೈನಲ್‌ನಲ್ಲಿ ಭಾರತ ತಂಡ ಟಾಸ್ ಸೋಲಬೇಕು ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. ಇದಕ್ಕೆ ಸ್ವಾರಸ್ಯಕರ ಕಾರಣ ಕೂಡ ನೀಡಿದ್ದಾರೆ.

ಬ್ಯಾಟಿಂಗ್ ಕಷ್ಟ ಅನ್ನಿಸಬಹುದು
ಇಎಸ್‌ಪಿಎನ್ ಕ್ರಿಕ್‌ಇನ್ಫೋ ಜೊತೆ ಮಾತನಾಡಿದ ಮಂಜ್ರೇಕರ್, 'ಕ್ರಿಕೆಟ್‌ನಲ್ಲಿ ಟಾಸ್ ಒಂದು ಆಸಕ್ತಿಕರ ವಿಚಾರ. ವಿದೇಶಿ ನೆಲದಲ್ಲಿನ ಪಂದ್ಯದಲ್ಲಿ ಆಟಗಾರರು ಟಾಸ್‌ಗೆ ಹೋಗೋದಾದ್ರೆ ಅದರಲ್ಲೂ ಇಂಗ್ಲೆಂಡ್‌ನಂಥ ಪಿಚ್‌ಗಳಲ್ಲಿ ಹುಲ್ಲಿನ ಪದರ ಇದ್ದೇ ಇರುತ್ತದೆ. ಹೀಗಾಗಿ ಭಾರತದಂತ ತಂಡ ಮೊದಲ ಫೀಲ್ಡಿಂಗ್ ಅನ್ನೇ ಆರಿಸಿಕೊಳ್ಳುತ್ತದೆ. ಯಾಕೆಂದರೆ ಹೆಚ್ಚಿನ ಅಭ್ಯಾಸವಿಲ್ಲದೆ ಭಾರತದ ಬ್ಯಾಟಿಂಗ್ ಮಾಡೋದು ಸ್ವಲ್ಪ ಕಷ್ಟ ಅನ್ನಿಸಬಹುದು,' ಎಂದಿದ್ದಾರೆ.

ಸ್ವಾರಸ್ಯಕರ ಕಾರಣ
'ಟೀಮ್ ಇಂಡಿಯಾದ ಪಾಲಿಗೆ ಟಾಸ್ ತುಂಬಾ ಪರಿಣಾಮಕಾರಿ ಸಂಗತಿ ಎಂದು ನನಗನ್ನಿಸುತ್ತಿಲ್ಲ. ಒಂದು ವೇಳೆ ನೀವು ಪಂದ್ಯ ಗೆದ್ದರೆ ಚೆನ್ನಾಗಿ ಬ್ಯಾಟಿಂಗ್ ಮಾಡಿ ಅದು ಬೇರೆ ಸಂಗತಿ. ಆದರೆ ಭಾರತ ಟಾಸ್ ಸೋತರೆ ಅದು ತಂಡಕ್ಕೆ ಮಾದರಿ ಅನ್ನಿಸಲಿದೆ. ಯಾಕೆಂದರೆ ಟಾಸ್ ಸೋತಾಗ ಅವರು ಸಹಜವಾಗೇ ಬ್ಯಾಟಿಂಗ್ ಕಡೆ ಹೋಗ್ತಾರೆ. ಹೀಗಾಗಿ ನಾನು ವಿರಾಟ್ ಕೊಹ್ಲಿ ಪಡೆಯ ಒಳ್ಳೆಯದಕ್ಕಾಗಿ ಭಾರತ ಟಾಸ್ ಸೋಲಬೇಕು ಎನ್ನುತ್ತೇನೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಟಾಸ್ ಸೋಲುವ ತಂಡ ಹೆಚ್ಚಿನ ಪಂದ್ಯಗಳನ್ನು ಗೆದ್ದಿದೆ. ಅಂದರೆ ಇಲ್ಲಿ ಟಾಸ್ ಗೆಲ್ಲೋದು ಮುಖ್ಯವಾಗುವುದಿಲ್ಲ,' ಎಂದು ಮಂಜ್ರೇಕರ್ ವಿವರಿಸಿದ್ದಾರೆ.

ಅಚ್ಚರಿಯ ಅಂಕಿ-ಅಂಶ!
ಸೌತಾಂಪ್ಟನ್‌ನಲ್ಲಿ ನಡೆದ ಕಳೆದ ಆರು ಟೆಸ್ಟ್ ಪಂದ್ಯಗಳಲ್ಲಿ ಟಾಸ್ ಗೆದ್ದ ಬಳಿಕ ಐದು ಬಾರಿ ನಾಯಕರು ಮೊದಲು ಬ್ಯಾಟಿಂಗ್ ಆರಿಸಿದ್ದಾರೆ. ಬ್ಯಾಟಿಂಗ್ ಆರಿಸಿದ ಐದು ಪಂದ್ಯಗಳಲ್ಲಿ ಮೂರರಲ್ಲಿ ಆ ತಂಡಗಳು ಗೆದ್ದಿವೆ. ಏಜಸ್ ಬೌಲ್‌ನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಯಾವುದೇ ತಂಡ ಮೊದಲು ಫೀಲ್ಡಿಂಗ್ ಆರಿಸಿ ಗೆದ್ದಿಲ್ಲ. ಹೀಗಾಗಿ ಭಾರತ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆರಿಸಬೇಕು. ಅದಕ್ಕಿಂತ ಹೆಚ್ಚಾಗಿ ಟೆಸ್ಟ್‌ನಲ್ಲಿ ಟಾಸ್ ಸೋತ ತಂಡಗಳೇ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆಯಿರುವುದರಿಂದ ಭಾರತವೂ ಟಾಸ್ ಸೋತರೆ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಮಂಜ್ರೇಕರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications