Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Forbes India 30 Under 30 2021: ಪಟ್ಟಿಯಲ್ಲಿ ಶುಬ್ಮನ್ ಗಿಲ್ ಹೆಸರು

Forbes India 30 Under 30 2021: Shubman Gill The Only Cricketer Who Find A Place In The List

ನವದೆಹಲಿ: ಫೋರ್ಬ್ಸ್ ಇಂಡಿಯಾ 30 ಜನ ಸಾಧಕರ ವಾರ್ಷಿಕ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಭಾರತೀಯ ಯುವ ಕ್ರಿಕೆಟರ್ ಶುಬ್ಮನ್ ಗಿಲ್ ಹೆಸರೂ ಇದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಗಿಲ್ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಯುವ ಸಾಧಕರ ಪಟ್ಟಿಯಲ್ಲಿ ಗಿಲ್ ಹೆಸರೂ ಇದೆ.

ಫೋರ್ಬ್ಸ್ ಇಂಡಿಯಾ ಈಗ ಪ್ರಕಟಿಸಿರೋದು 30ರೊಳಗಿನ ವಯೋಮಾನದ 30 ಸಾಧಕರ ಪಟ್ಟಿ. ಇದರಲ್ಲಿ 21ರ ಹರೆಯದ ಶುಬ್ಮನ್ ಗಿಲ್ ಇದ್ದಾರೆ. ಅಂದ್ಹಾಗೆ ಕ್ರೀಡಾಪಟುಗಳಲ್ಲಿ ಗಿಲ್ ಒಬ್ಬರೇ 30ರೊಳಗೆ ಸ್ಥಾನ ಪಡೆದುಕೊಂಡವರು. ಗಿಲ್ ಸದ್ಯ ಮುಂಬರಲಿರುವ ಭಾರತ-ಇಂಗ್ಲೆಂಡ್ ಸರಣಿಗಾಗಿ ಸಜ್ಜಾಗುತ್ತಿದ್ದಾರೆ. ಈ ಸರಣಿ ಫೆಬ್ರವರಿ 5ರಿಂದ ಆರಂಭಗೊಳ್ಳಲಿದೆ.

ಗಿಲ್ ಅಲ್ಲದೆ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳಾದ ಅಭಿರಾಜ್‌ ರಾಜಾಧ್ಯಕ್ಷ ಮತ್ತು ನಿಯತಿ ಮಾವಿನ್‌ಕುರ್ವೆ, ನಟಿ ಕೀರ್ತಿ ಸುರೇಶ್, ತೃಪ್ತಿ ದಿಮ್ರಿ, ಫ್ಯಾಷನ್ ನಿರ್ದೇಶಕ ಕರಣ್ ತೊರಾಣಿ, ಹೆಲ್ತ್‌ಕೇರ್‌ ವಿಭಾಗಕ್ಕಾಗಿ ಸ್ಟಾತ್ವಿಗ್ ಸಂಸ್ಥಾಪಕಿ ಕೀರ್ತಿ ರೆಡ್ಡಿ ಕೊಟ್ಟ ಇತ್ಯಾದಿ ಸಾಧಕರ ಹೆಸರುಗಳೂ ಇವೆ.

ಸಾಧಕರ ಪಟ್ಟಿಯಲ್ಲಿ ಗಿಲ್ ಅವರ ಬಗ್ಗೆ 'ಭಾರತೀಯ ಕ್ರಿಕೆಟ್‌ನಲ್ಲಿ ಬೆಳಗುತ್ತಿರುವ ತಾರೆ. ಅಂತಾರಾಷ್ಟ್ರೀಯ ಲೀಗ್‌ಗಳಲ್ಲಿ ಸಾಧನೆ ತೋರುತ್ತಿದ್ದಾರೆ' ಎಂದು ಬರೆಯಲಾಗಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲೇ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ ಗಿಲ್ 6 ಇನ್ನಿಂಗ್ಸ್‌ಗಳಲ್ಲಿ 259 ರನ್ ಗಳಿಸಿದ್ದರು.

Story first published: Thursday, February 4, 2021, 9:04 [IST]
Other articles published on Feb 4, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+