ಫೋರ್ಬ್ಸ್ ಶ್ರೀಮಂತ ಕ್ರೀಡಾಪಟು ಪಟ್ಟಿಯಲ್ಲಿ ಧೋನಿ
ನ್ಯೂಯಾರ್ಕ್, ಜೂ.11: ಫೋರ್ಬ್ಸ್ ಮ್ಯಾಗಜೀನ್ ಪ್ರಕಟಿಸಿರುವ ವಿಶ್ವ ಕ್ರೀಡಾ ಲೋಕದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಟಾಪ್ 100 ಪಟ್ಟಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದರ್ ಸಿಂಗ್ ಧೋನಿ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ.
ಅಮೆರಿಕನ್ ಬಾಕ್ಸರ್ ಫ್ಲಾಯ್ಡ್ ಮೇವೆದರ್ ಅವರು ಅಗ್ರಸ್ಥಾನದಲ್ಲಿರುವ ಪಟ್ಟಿಯಲ್ಲಿ ಗಾಲ್ಫ್ ಪಟು ಟೈಗರ್ ವುಡ್ಸ್, ವಿಶ್ವಖ್ಯಾತ ಫುಟ್ಬಾಲ್ ಆಟಗಾರರಾದ ಲಿಯೊನೆಲ್ ಮೆಸ್ಸಿ, ಕ್ರಿಶ್ಚಿಯಾನೋ ರೊನಾಲ್ಡೋ, ಟೆನಿಸ್ ತಾರೆ ರೋಜರ್ ಫೆಡರರ್ ಕೂಡಾ ಇದ್ದಾರೆ.
ಟೆನಿಸ್ ಆಟಗಾರ್ತಿಯರಾದ ಸೆರೆನಾ ವಿಲಿಯಮ್ಸ್ 47ನೇ ಸ್ಥಾನ(24.6 ಮಿಲಿಯನ್ ಡಾಲರ್ಸ್), ಮರಿಯಾ ಶರಪೋವಾ 26ನೇ ಸ್ಥಾನ (29.7 ಮಿಲಿಯನ್ ಡಾಲರ್ಸ್) ಇಬ್ಬರು ಮಾತ್ರ ಟಾಪ್ 100ರಲ್ಲಿರುವ ಮಹಿಳಾ ಕ್ರೀಡಾಪಟುಗಳಾಗಿದ್ದಾರೆ.
ಕಳೆದ ವರ್ಷ 22ನೇ ಸ್ಥಾನದಲ್ಲಿದ್ದ ಧೋನಿ ಅವರು ಈ ಬಾರಿ 23ನೇ ಸ್ಥಾನಕ್ಕೆ ಕುಸಿದಿದ್ದಾರೆ. 2014ರ ಅಂತ್ಯಕ್ಕೆ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ 33 ವರ್ಷದ ಕ್ರಿಕೆಟರ್ ಧೋನಿ ಅವರಿಗೆ ಏಕದಿನ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಪ್ರತಿಸ್ಪರ್ಧಿಯಾಗಿದ್ದಾರೆ. [2013ರ ಅತಿ ಶ್ರೀಮಂತ ಕ್ರೀಡಾಪಟುಗಳ ಪಟ್ಟಿ]
ಧೋನಿ ಅವರ ಗಳಿಕೆ 31 ಮಿಲಿಯನ್ ಯುಎಸ್ ಡಾಲರ್ ನಷ್ಟಿದೆ. ಸಂಬಳ, ಭತ್ಯೆ ಎಲ್ಲಾ ಸೇರಿ 4 ಮಿಲಿಯನ್ ಯುಎಸ್ ಡಾಲರ್ ಬರುತ್ತಿದೆ. 27 ಮಿಲಿಯನ್ ಡಾಲರ್ ಜಾಹೀರಾತುಗಳಿಂದ ಹರಿದು ಬರುತ್ತದೆ.

ಬಾಕ್ಸರ್ ಫ್ಲಾಯ್ಡ್ ಮೇವೆದರ್
ಒಟ್ಟು ಸಂಪಾದನೆ: $300 million
ಸಂಬಳ/ ಗೆದ್ದ ಮೊತ್ತ: $285 million
ಜಾಹೀರಾತು, ಇತರೆ: $15 million

#2 ಮ್ಯಾನಿ ಪ್ಯಾಕ್ವಿಯೋ
ಒಟ್ಟು ಸಂಪಾದನೆ: $160 million
ಸಂಬಳ/ ಗೆದ್ದ ಮೊತ್ತ: $148 million
ಜಾಹೀರಾತು, ಇತರೆ: $12 million
ಚಿತ್ರದಲ್ಲಿ ಬಲಗಡೆ ಫ್ಲಾಯ್ಡ್ ಮೇವೆದರ್, ಎಡಗಡೆ ಮ್ಯಾನಿ ಪ್ಯಾಕ್ವಿಯೋ

#3 ಕ್ರಿಶ್ಚಿಯಾನೋ ರೊನಾಲ್ಡೋ
ಒಟ್ಟು ಸಂಪಾದನೆ: $79.6 million
ಸಂಬಳ/ ಗೆದ್ದ ಮೊತ್ತ: $52.6 million
ಜಾಹೀರಾತು, ಇತರೆ: $27 million

#4 ಲಿಯೋನೆಲ್ ಮೆಸ್ಸಿ
ಒಟ್ಟು ಸಂಪಾದನೆ: $73.8 million
ಸಂಬಳ/ ಗೆದ್ದ ಮೊತ್ತ: $51.8 million
ಜಾಹೀರಾತು, ಇತರೆ: $22 million

#5 ರೋಜರ್ ಫೆಡರರ್
ಒಟ್ಟು ಸಂಪಾದನೆ:67 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ:9 ಮಿಲಿಯನ್ ಡಾಲರ್
ಜಾಹೀರಾತು ಇತರೆ: 58 ಮಿಲಿಯನ್ ಡಾಲರ್

#6 ಲೆಬ್ರೊನ್ ಜೇಮ್ಸ್ #7 ಡುರಾಂಟ್
#6 ಲೆಬ್ರೊನ್ ಜೇಮ್ಸ್ (ಬಾಸ್ಕೆಟ್ ಬಾಲ್)
ಒಟ್ಟು ಸಂಪಾದನೆ: 64.8 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 20.8 ಮಿಲಿಯನ್ ಡಾಲರ್
ಜಾಹೀರಾತು ಇತರೆ: 44 ಮಿಲಿಯನ್ ಡಾಲರ್
#7 ಕೆವಿನ್ ಡುರಾಂಟ್ (ಬಾಸ್ಕೆಟ್ ಬಾಲ್)
ಒಟ್ಟು ಸಂಪಾದನೆ: 54.1 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 19.1 ಮಿಲಿಯನ್ ಡಾಲರ್
ಜಾಹೀರಾತು ಇತರೆ: 35 ಮಿಲಿಯನ್ ಡಾಲರ್

#8 ಫಿಲ್ ಮೆಕೆಲ್ಸನ್ (ಗಾಲ್ಫ್)
ಒಟ್ಟು ಸಂಪಾದನೆ: 50.8 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 2.8 ಮಿಲಿಯನ್ ಡಾಲರ್
ಜಾಹೀರಾತು, ಇತರೆ: 48 ಮಿಲಿಯನ್ ಡಾಲರ್

#9 ಟೈಗರ್ ವುಡ್ಸ್
ಒಟ್ಟು ಸಂಪಾದನೆ: 50.6 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 0.6 ಮಿಲಿಯನ್ ಡಾಲರ್
ಜಾಹೀರಾತು ಇತರೆ: 50 ಮಿಲಿಯನ್ ಡಾಲರ್

#10 ಕೊಬೆ ಬ್ರಯಾಂಟ್ (ಬಾಸ್ಕೆಟ್ ಬಾಲ್)
ಒಟ್ಟು ಸಂಪಾದನೆ: 49.5 ಮಿಲಿಯನ್ ಡಾಲರ್
ಸಂಬಳ/ ಗೆದ್ದ ಮೊತ್ತ: 23.5ಮಿಲಿಯನ್ ಡಾಲರ್
ಜಾಹೀರಾತು ಇತರೆ: 26 ಮಿಲಿಯನ್ ಡಾಲರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications