ಆಸೀಸ್ ಮಾಜಿ ನಾಯಕ ಮೈಕಲ್ ಕ್ಲಾರ್ಕ್-ಕೈಲಿ ದಾಂಪತ್ಯ ಬದುಕು ಅಂತ್ಯ

ಸಿಡ್ನಿ, ಫೆಬ್ರವರಿ 13: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಮತ್ತು ಕೈಲಿಯ ದಾಂಪತ್ಯ ಬದುಕು ಮುರಿದು ಬಿದ್ದಿದೆ. ತಾವಿಬ್ಬರೂ ವಿಚ್ಛೇದನ ನೀಡುತ್ತಿರುವುದಾಗಿ ಕ್ಲಾರ್ಕ್-ಕೈಲಿ ಬುಧವಾರ (ಫೆಬ್ರವರಿ 12) ಘೋಷಿಸಿದ್ದಾರೆ. 2012ರಲ್ಲಿ ಮದುವೆಯಾಗಿದ್ದ ಕ್ಲಾರ್ಕ್-ಕೈಲಿಗೆ 4 ವರ್ಷದ ಮಗಳಿದ್ದಾಳೆ.
'ಸ್ವಲ್ಪ ಸಮಯದವರೆಗೆ ಬೇರೆ ಬೇರೆಯಾಗಿದ್ದ ನಂತರ, ಸೌಹಾರ್ದಯುತವಾಗಿ, ದಾಂಪತ್ಯ ಬಂಧನದಿಂದ ಬೇರ್ಪಡಿಸುವ ಕಠಿಣ ನಿರ್ಧಾರವನ್ನು ನಾವು ಮಾಡಿದ್ದೇವೆ,' ಎಂದು ಮೈಕಲ್ ಕ್ಲಾರ್ಕ್ ಮತ್ತು ಕೈಲಿ ಇಬ್ಬರೂ ಹೇಳಿಕೆಯ ಮೂಲಕ ತಿಳಿಸಿದ್ದಾರೆ. ಕ್ಲಾರ್ಕ್‌ಗೀಗ 38ರ ಹರೆಯ.
ಫಾಕ್ಸ್ ಸ್ಪೋರ್ಟ್ಸ್ ಪ್ರಕಾರ, ಸೆಲೆಬ್ರಿಟಿ ಜೋಡಿ ಐದು ತಿಂಗಳ ಹಿಂದೆಯೇ ದೂರವಾಗಿದೆ. ಕ್ಲಾರ್ಕ್ ತನ್ನ ಹಳೆ ಮನೆಯಿದ್ದ ವಾಕ್ಲೂಸ್ ಜಾಗ ತೊರೆದು, ಬೋಂಡಿ ಬೀಚ್ ಪ್ರದೇಶದಲ್ಲಿ 8 ಮಿಲಿಯನ್ ಡಾಲರ್ (57,07,80,000 ರೂ.) ಮೌಲ್ಯದ ಮನೆಯಲ್ಲಿ ತಂಗುತ್ತಿದ್ದಾರೆ. ಕೈಲಿ ಮತ್ತು ಮಗಳು ಹಿಂದಿನ ಅದೇ ಮನೆಯಲ್ಲಿ ಮುಂದುವರೆಯುತ್ತಿದ್ದಾರೆ.
ಮೈಕೆಲ್ ಕ್ಲಾರ್ಕ್ ನಾಯಕತ್ವದ ಕಾಂಗರೂ ಪಡೆ 2015ರಲ್ಲಿ ವಿಶ್ವಕಪ್ ಜಯಿಸಿತ್ತು. 115 ಟೆಸ್ಟ್ ಪಂದ್ಯಗಳನ್ನಾಡಿರುವ ಕ್ಲಾರ್ಕ್ 28 ಶತಕಗಳು ಸೇರಿದಂತೆ ಒಟ್ಟಾರೇ 8,643 ರನ್ ಗಳಿಸಿದ್ದಾರೆ. 245 ಏಕದಿನ ಹಾಗೂ 34 ಟಿ-20 ಪಂದ್ಯಗಳನ್ನಾಡಿದ್ದು, 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications